Lockdown ಅನಿವಾರ್ಯ.. ಕರ್ನಾಟಕ ಲಾಕ್​​ಡೌನ್​ ಬಗ್ಗೆ ಸುಳಿವು ಬಿಟ್ಟುಕೊಟ್ಟ ಮತ್ತೊಬ್ಬ ಸಚಿವರು!

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಆಗುವುದರ ಸುಳಿವು ನೀಡಿದ್ದಾರೆ. ಸದ್ಯ ಕೊಡಗಿನಲ್ಲೂ ಪಾಸಿಟಿವಿಟಿ ದರ 1 ಇದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 1 ಕ್ಕಿಂತ ಜಾಸ್ತಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು : ರಾಜ್ಯದಲ್ಲಿ ಪಾಸಿಟಿವಿಟಿ ದರ (Positivity Rate) ಶೇ. 5 ರಷ್ಟು ತಲುಪಿದರೆ ರಾಜ್ಯದಲ್ಲಿ ಲಾಕ್​ಡೌನ್​​ (Lockdown) ಮಾಡುವುದು ಅನಿವಾರ್ಯ (unavoidable) ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರು ಇಲ್ಲಿನ ಪಾಲಿಬೆಟ್ಟದಲ್ಲಿ ಹೇಳಿದ್ದಾರೆ. ಆ ಮೂಲಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಆಗುವುದರ ಸುಳಿವು ನೀಡಿದ್ದಾರೆ. ಸದ್ಯ ಕೊಡಗಿನಲ್ಲೂ ಪಾಸಿಟಿವಿಟಿ ದರ 1 ಇದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 1 ಕ್ಕಿಂತ ಜಾಸ್ತಿ ಇದೆ. ಇದು ಕಡಿಮೆ ಆಗುವಂತೆ ಜನರೇ ನೋಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಲಾಕ್ಡೌನ್ ಅನಿವಾರ್ಯ, ಜನರು ಅಂತಹ ಸ್ಥಿತಿಗೆ ಎಡೆಮಾಡಿಕೊಡಬಾರದು ಎಂದಿದ್ದಾರೆ.

ಶಾಲಾ ಮಕ್ಕಳಿಗೆ ವ್ಯಾಕ್ಸಿನ್​ 

ಕೊಡಗಿನ ಪಾಲಿಬೆಟ್ಟದಲ್ಲಿ ನಡೆದ 15 ರಿಂದ 18 ವರ್ಷದವರೆಗಿನ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು. ಇದಕ್ಕೂ ಮೊದಲು ಮಹಿಳಾ ಸಹಕಾರ ಭವನದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಯಿತು. ಪಾಲಿಬೆಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ 50 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವ್ಯಾಕ್ಸಿನ್ ವಿತರಣೆ ಮಾಡಲಾಯಿತು.

ಇದನ್ನೂ ಓದಿ: RTPCR: ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ 20 ಬಸ್ ಗಡಿಯಲ್ಲೇ ವಾಪಸ್

ಸಚಿವರಿಂದಲೇ ನಿಯಮ ಉಲ್ಲಂಘನೆ 

ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಕೋವಿಡ್ ನಿಯಮ ಉಲ್ಲಂಘಿಸಿದರು. ಕೋವಿಡ್ ಮೂರನೇ ಅಲೆ ಈಗಾಲೇ ಆರಂಭವಾಗಿದೆ ಎನ್ನಲಾಗುತ್ತಿದ್ದು, ಅದನ್ನು ನಿಯಂತ್ರಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಜನರು ಪಾಲಿಸಲು ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತಿದೆ. ಆದರೆ ನಿಯಮಗಳನ್ನು ಮಾಡಿರುವ ಸಚಿವರೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ವಿಪರ್ಯಾಸ. ಹೌದು ಸಹಕಾರ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇಬ್ಬರು ಕೊಡಗು ಜಿಲ್ಲೆಯ ಪಾಲಿಬೆಟ್ಟದಲ್ಲಿ ಸಹಕಾರ ಸಂಘದ ಶತಮಾನೋತ್ಸವ ಭವನ ಉದ್ಘಾಟನೆಯಲ್ಲಿ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರವೂ ಇಲ್ಲದೆ ನಿಯಮ ಉಲ್ಲಂಘನೆ ಮಾಡಿದರು.

ಸಚಿವರ ಸಮಜಾಯಿಷಿ 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಜನರು ಕೂಡ ಯಾವುದೇ ಮಾಸ್ಕ್ ಧರಿಸದೆ ಗುಂಪು ಗೂಂಪಾಗಿ ಇದ್ದರು. ಆದರೂ ಕನಿಷ್ಠ ಮಾಸ್ಕ್ ಧರಿಸಿರಲಿಲ್ಲ. ಈ ಕುರಿತು ಸಚಿವ ಸೋಮಶೇಖರ್ ಅವರನ್ನು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಪಕ್ಕದಲ್ಲಿದ್ದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕೊಡಗಿನ ನೂತನ ಎಂಎಲ್ಸಿ ಸುಜಾ ಕುಶಾಲಪ್ಪ ಮೆಲ್ಲನೆ ಮಾಸ್ಕ್ ಧರಿಸಿದ್ರು. ಅಲ್ಲದೆ ಹಿಂದೆ ನಿಂತಿದ್ದ ವಿವಿಧ ಮುಖಂಡರು ಮಾಸ್ಕ್ ಧರಿಸಿದ್ರು. ನಂತರ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್ ಮಾಧ್ಯಮಗಳಿಗೆ ಮಾತನಾಡುವಾಗ ನಿಲ್ಲುತ್ತೇವೆ. ಈ ವೇಳೆ ಮುಖಂಡರು ಸುತ್ತಮುತ್ತ ನಿಲ್ಲುತ್ತಾರೆ. ಇನ್ನು ನಾವು ನಿಂತು ಮಾತನಾಡದಿದ್ದರೆ ಸಹಕಾರ ಸಚಿವರು ಮಾಧ್ಯಮಗಳಿಗೆ ಸಹಕರಿಸಲಿಲ್ಲ ಎಂದು ನೀವೆ ಸುದ್ದಿ ಮಾಡುತ್ತೀರಿ. ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನು ನಾವು ಪಾಲನೆ ಮಾಡೇ ಮಾಡುತ್ತೇವೆ ಎಂದು ಜಯಜಾಯಿಸಿ ನೀಡಿದ್ರು.

ಇದನ್ನೂ ಓದಿ: Omicron: ಖಾಸಗಿ ​ ಲ್ಯಾಬ್ಎಡವಟ್ಟು- ಮತ್ತೊಬ್ಬ ಓಮೈಕ್ರಾನ್ ಸೋಂಕಿತ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ!

ಇನ್ನು ಇಂದು ರಾಜ್ಯದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಗೋವಿಂದರಾಜನಗರದ ಮೂಡಲಪಾಳ್ಯದಲ್ಲಿರುವ ಬಿಬಿಎಂಪಿ (BBMP) ಪ್ರೌಢ ಶಾಲೆಗೆ ಆಗಮಿಸಿದ ಮುಖ್ಯಮಂತ್ರಿಗಳ ಜೊತೆಯಲ್ಲಿ ನಿಂತು ಮಕ್ಕಳಿಗೆ ಲಸಿಕೆ ಹಾಕಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಇವತ್ತು ಲಸಿಕೆ ಕೊಡೋದರಲ್ಲಿ ಭಾರತ (India) ದೊಡ್ಡ ಸಾಧನೆ ಮಾಡಿದೆ. ನಮ್ಮ ರಾಜ್ಯದಲ್ಲಿ 43 ಲಕ್ಷ ಮಕ್ಕಳು ಇದ್ದಾರೆ.  ಆದಷ್ಟು ಬೇಗ ಇವರಿಗೆ ಲಸಿಕೆ ಹಾಕಬೇಕಾಗಿದೆ ಎಂದರು.
Published by:Kavya V
First published: