• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • kota srinivas poojary: ಕೋಟ ಶ್ರೀನಿವಾಸ್​ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಸಚಿವರು ಪಾರು

kota srinivas poojary: ಕೋಟ ಶ್ರೀನಿವಾಸ್​ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಸಚಿವರು ಪಾರು

ಕೋಟಾ ಶ್ರೀನಿವಾಸ ಪೂಜಾರಿ

ಕೋಟಾ ಶ್ರೀನಿವಾಸ ಪೂಜಾರಿ

ಸಚಿವರು ಪ್ರಯಾಣಿಸುತ್ತಿದ್ದ ಕಾರಿಗೆ  ಕೆಎಸ್​ಆರ್​ಟಿಸಿ ಬಸ್​​ ಡಿಕ್ಕಿ ಹೊಡೆದಿದೆ. ಸಚಿವರು ಮೈಸೂರಿನಿಂದ ಬೆಂಗಳೂರಿಗೆ ಮರಳುವಾಗ ಈ ಘಟನೆ ಸಂಭವಿಸಿದೆ. 

  • Share this:

ಬೆಂಗಳೂರು (ಫೆ. 19): ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದೆ. ಅದೃಷ್ಟವಶಾತ್​  ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಬೆಂಗಳೂರು ನೈಸ್​ ರಸ್ತೆ ವೃತ್ತ ಬಳಿಯ ಕದಂಬ ಹೋಟೆಲ್​ ಬಳಿ ಈ ಘಟನೆ ನಡೆದಿದೆ. ಸಚಿವರು ಪ್ರಯಾಣಿಸುತ್ತಿದ್ದ ಕಾರಿಗೆ  ಕೆಎಸ್​ಆರ್​ಟಿಸಿ ಬಸ್​​ ಡಿಕ್ಕಿ ಹೊಡೆದಿದೆ. ಸಚಿವರು ಮೈಸೂರಿನಿಂದ ಬೆಂಗಳೂರಿಗೆ ಮರಳುವಾಗ ಈ ಘಟನೆ ಸಂಭವಿಸಿದೆ. ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಕೂಡ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಸಚಿವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿ....

Published by:Seema R
First published: