ಸುಪ್ರಿಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದೇನೆ ಹೊರತು, ಆದೇಶದ ಅರ್ಥ ವಿವರಿಸಲು ಹೋಗಿಲ್ಲ; ಸಚಿವ ಸುಧಾಕರ್

ನಮ್ಮ ವಿರುದ್ಧ ಸ್ಪೀಕರ್ ಷಡ್ಯಂತ್ರ ಮಾಡಿದರು ಎನ್ನುವ ಸಚಿವ ಸುಧಾಕರ್ ಹೇಳಿಕೆಗೆ ನಮ್ಮ ಆಕ್ಷೇಪ ಇದೆ. ಶಾಸಕ ರಮೇಶ್ ಕುಮಾರ್ ಯಾವ ಷಡ್ಯಂತ್ರ ಮಾಡಿದರು ಅಂತ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದರು

news18-kannada
Updated:March 12, 2020, 3:54 PM IST
ಸುಪ್ರಿಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದೇನೆ ಹೊರತು, ಆದೇಶದ ಅರ್ಥ ವಿವರಿಸಲು ಹೋಗಿಲ್ಲ; ಸಚಿವ ಸುಧಾಕರ್
ಸಚಿವ ಡಾ| ಕೆ. ಸುಧಾಕರ್
  • Share this:
ಬೆಂಗಳೂರು(ಮಾ.12) : ನಾನು ಅಂದು ಸುಪ್ರಿಂಕೋರ್ಟ್ ತೀರ್ಪನ್ನು ಉಲ್ಲೇಖಿಸುತ್ತಿದ್ದೆ ಹೊರತು ಆದೇಶದ ಅರ್ಥವನ್ನು ವಿವರಿಸಲು ಹೋಗಿಲ್ಲ. ಮಾತು ಪೂರ್ತಿಗೊಳಿಸುವ ಮೊದಲೇ ಗಲಾಟೆಯಾಯ್ತು.‌ ನಾನು ಏನು ತಪ್ಪು ಮಾತನಾಡಿದೆ ಎಂದು ಸಚಿವ ಕೆ ಸುಧಾಕರ್​​ ಪ್ರಶ್ನಿಸಿದ್ದಾರೆ.

ಸದನದಲ್ಲಿ ಸಂವಿಧಾನದ ಚರ್ಚೆ ವೇಳೆ ಸಚಿವ ಸುಧಾಕರ್ ಹೀಗೆ ಪ್ರಶ್ನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ  ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಿನ್ನ‌ಮೇಲೆ ನನಗೇನು ಕೋಪ ಇಲ್ಲ. ಬೇರೆ ಪಕ್ಷಕ್ಕೆ ಹೋಗಿದ್ದಷ್ಟೇ ಕೋಪ ಎಂದು ಹೇಳಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸ್ಪೀಕರ್ ಪೀಠದಲ್ಲಿ ಕೂತು ಎತ್ತಿಕಟ್ಟಿದ್ರಲ್ಲ. ಅದಕ್ಕೆ ನಮಗೂ ಕೋಪ ಇದೆ. ಸ್ಪೀಕರ್ ಪೀಠದಲ್ಲಿ ಕೂತು ರಾಜಕಾರಣ ಮಾಡಿದ್ರಲ್ಲಾ ಅದಕ್ಕಷ್ಟೇ ನಮ್ಮ ಆಕ್ಷೇಪ ಎಂದಾಗ, ನಮ್ಮ ವಿರುದ್ಧ ಸ್ಪೀಕರ್ ಷಡ್ಯಂತ್ರ ಮಾಡಿದರು ಎನ್ನುವ ಸಚಿವ ಸುಧಾಕರ್ ಹೇಳಿಕೆಗೆ ನಮ್ಮ ಆಕ್ಷೇಪ ಇದೆ. ಶಾಸಕ ರಮೇಶ್ ಕುಮಾರ್ ಯಾವ ಷಡ್ಯಂತ್ರ ಮಾಡಿದರು ಅಂತ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದರು. ಈ ಹೇಳಿಕೆಗೆ ಸಚಿವರಾದ ರಮೇಶ್ ಜಾರಕಿಹೊಳಿ, ಎಸ್ ಟಿ ಸೋಮಶೇಖರ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು.

ನೀವು ಅಷ್ಟೂ ಜನ ಒಂದಾಗಿದ್ದಿರಿ ಅಂತ ಎಲ್ಲರಿಗೂ ಗೊತ್ತಿತ್ತು. ನಿಮ್ಮ ಒಗ್ಗಟ್ಟು ನನಗೂ ಚೆನ್ನಾಗಿ ಗೊತ್ತಿತ್ತು‌. ಅದಕ್ಕಾಗಿಯೇ ಈಗಲೂ ಒಟ್ಟಿಗೆ ಇದ್ದೀರಿ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಘಟನೇ ಏನು ? 

ಮಂಗಳವಾರದಂದು ಚರ್ಚೆ ವೇಳೆ ಮಾತನಾಡಿದ್ದ ಸಚಿವ ಡಾ.ಕೆ.ಸುಧಾಕರ್. ಈ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿವೆ. ಹಲವು ವರ್ಷ ಆಡಳಿತ ನಡೆಸಿದ ಪಕ್ಷಗಳೂ ದೇಶದಲ್ಲಿ ಜನರ ದಾರಿ ತಪ್ಪಿಸುವ ಕುಮ್ಮಕ್ಕು ಮಾಡುತ್ತಿವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರು. ಸುಧಾಕರ್ ಹೇಳಿಕೆಗೆ ಸಿಟ್ಟಿನಿಂದ ಎದ್ದು ರಮೇಶ್​ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರು ಮಧ್ಯೆ ವಾಗ್ಸಮರ ನಡೆದಿತ್ತು.

ಇದನ್ನೂ ಓದಿ :  ರಮೇಶ್ ಕುಮಾರ್ ಬಾಸ್ಟರ್ಡ್ ಪದ ಬಳಸಿಲ್ಲ, ಸುಧಾಕರ್ ಆರೋಪದಲ್ಲಿ ಹುರುಳಿಲ್ಲ; ಸಿದ್ಧರಾಮಯ್ಯ
First published:March 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading