HOME » NEWS » State » MINISTER K SUDHAKAR SAYS MANDATORY RT PCR TEST ON ARRIVAL AT THE AIRPORTS SESR

ಇಂಗ್ಲೆಂಡ್​ನಿಂದ ಬಂದವರಿಗೆ ಹೋಮ್​ ಕ್ವಾರಂಟೈನ್​, ಆರ್​ಟಿಪಿಸಿಆರ್​ ಟೆಸ್ಟ್​ ಕಡ್ಡಾಯ; ಸಚಿವ ಕೆ ಸುಧಾಕರ್​

ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ವಿಶೇಷ ಕಿಯೋಸ್ಕ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಯುಕೆ ಸೇರಿದಂತೆ ಬೇರೆ ದೇಶಗಳಿಗೆ ಹೋಗಿ ಭಾರತಕ್ಕೆ ಮರಳುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು

news18-kannada
Updated:December 21, 2020, 5:58 PM IST
ಇಂಗ್ಲೆಂಡ್​ನಿಂದ ಬಂದವರಿಗೆ ಹೋಮ್​ ಕ್ವಾರಂಟೈನ್​, ಆರ್​ಟಿಪಿಸಿಆರ್​ ಟೆಸ್ಟ್​ ಕಡ್ಡಾಯ; ಸಚಿವ ಕೆ ಸುಧಾಕರ್​
ಸಚಿವ ಡಾ.ಕೆ.ಸುಧಾಕರ್
  • Share this:
ಬೆಂಗಳೂರು (ಡಿ. 21): ದಕ್ಷಿಣ ಇಂಗ್ಲೆಂಡ್​ನಲ್ಲಿ ಕಂಡು ಬರುತ್ತಿರುವ ಹೊಸ ಸ್ವರೂದ ವೈರಸ್​ ಮತ್ತೊಮ್ಮೆ ಜಗತ್ತಿನಲ್ಲಿ ಆತಂಕ ಮೂಡಿಸಿದೆ. ಶೀಘ್ರವಾಗಿ ಹರಡುವ ಈ ವೈರಸ್​ನ್ನು ತಡೆಯುವ ಉದ್ದೇಶದಿಂದ ಈಗಾಗಲೇ ಭಾರತ ಸೇರಿದಂತೆ ಯುರೋಪಿನ ಅನೇಕ ರಾಷ್ಟ್ರಗಳು ಇಂಗ್ಲೆಡ್​ ವಿಮಾನಯಾನವನ್ನು ರದ್ದು ಪಡಿಸಿದೆ. ಈ ಹಿನ್ನಲೆ ಇಂಗ್ಲೆಂಡ್​ನಿಂದ ಬಂದವರು ಒಂದು ವಾರಗಳ ಹೋಮ್​ ಕ್ವಾರಂಟೈನ್​ನಲ್ಲಿರಬೇಕು. ಅಲ್ಲದೇ ಬ್ರಿಟನ್​ನಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ. ಹೊಸ ಸ್ವರೂಪದ ಕೊರೋನಾ ವೈರಸ್​ ಪತ್ತೆಯಾಗುತ್ತಿರುವ ಹಿನ್ನಲೆ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ನಿನ್ನೆ ಮೊನ್ನೆ ಬ್ರಿಟನ್​ನಿಂದ ಬಂದವರ ಮಾಹಿತಿ ಲಭ್ಯವಾಗಿದೆ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ವಿಶೇಷ ಕಿಯೋಸ್ಕ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಯುಕೆ ಸೇರಿದಂತೆ ಬೇರೆ ದೇಶಗಳಿಗೆ ಹೋಗಿ ಭಾರತಕ್ಕೆ ಮರಳುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಇಂಗ್ಲೆಂಡ್, ನೆದರ್ಲೆಂಡ್, ಇಂಗ್ಲೆಂಡ್​​ ನಿಂದ ಬರುವವರಿಗೆ ನಿಷೇಧ ಮಾಡಲಾಗಿದೆ. ಬೇರೆ ದೇಶಗಳ ಬಗ್ಗೆ ಇನ್ನೂ ಕಟ್ಟು ನಿಟ್ಟಿಲ್ಲ. ಬ್ರಿಟಿಷ್ ಏರ್ ವೇಸ್ ನ 49 ಪ್ರಯಾಣಿಕರು ಟೆಸ್ಟ್ ಮಾಡಿಸಿಲ್ಲ. ನಿನ್ನೆ ಇಂದು ಒಟ್ಟು138 ಜನ ಬೆಂಗಳೂರಿಗೆ ಬಂದಿದ್ದಾರೆ. ಇವರೆಲ್ಲರನ್ನ ಟ್ರೇಸ್ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತವೆ. ಇಂಗ್ಲೆಂಡ್ ನಿಂದ ಬಂದವರಿಗೆ ಮಾತ್ರ ಒಂದು ವಾರ ಹೋಮ್ ಕ್ವಾರಂಟೈನ್​ ನಲ್ಲಿರಬೇಕು. 14ದಿನಗಳಲ್ಲಿ ಯೂರೋಪ್​ನಿಂದ ರಾಜ್ಯಕ್ಕೆ ಬಂದವರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಮಾಡಿಸುತ್ತೇವೆ ಎಂದರು.

ಎಚ್ಚರಿಕೆ ಇರಲಿ:

ಈ ಹೊಸ ಸ್ವರೂಪದ ಕೊರೋನಾ ಬಗ್ಗೆ ಯಾರೂ ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಆದರೆ ಎಚ್ಚರಿಕೆ ಕೈಗೊಳ್ಳುವುದು ಮುಖ್ಯ. ಕ್ರಿಸ್ ಮಸ್ ಆಚರಣೆ, ಹೊಸ ವರ್ಷ ಆಚರಣೆ ಬಗ್ಗೆ ಎಚ್ಚರಿಕೆ ಇರಲಿ ಎಂದರು.

ವೇಗವಾಗಿ ಹರಡುತ್ತಿರುವ ವೈರಸ್

ಬ್ರಿಟನ್​ನಲ್ಲಿ ಕಾಣಿಸಿಕೊಂಡಿರುವ ಈ ವೈರಸ್​​ ಶೇ. 70ರಷ್ಟು ವೇಗವಾಗಿ ಹರಡುತ್ತಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಬ್ರಿಟನ್​ನಲ್ಲಿ ಈ ಸೋಂಕು ನಿಯಂತ್ರಣ ಮೀರಿದೆ. ಈ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಮತ್ತು ಬ್ರಿಟನ್​ ನಡುವೆ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ಡಿ. 22ರ ಮಧ್ಯರಾತ್ರಿಯಿಂದ ಡಿ. 31ವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಈ ಕುರಿತು ತಿಳಿಸಿರುವ ಯುನೈಡೆಡ್​ ಕಿಂಗ್​ಡಮ್​ ಪ್ರಧಾನಿ ಬೋರಿಸ್​ ಜಾನ್ಸನ್​​, ಹೊಸ ಸ್ವರೂಪದ ವೈರಸ್​ ಆರ್​ ಅನ್ನು 0.4 ಅಥವಾ ಅದಕ್ಕಿಂತ ಹೆಚ್ಚಿದೆ. ಇದು ಅನಿಶ್ಚಿತತೆ ಹೊಂದಿದ್ದರೂ ಹಳೆಯ ವೈರಸ್​ಕ್ಕಿಂತ ಶೇ. 70ರಷ್ಟು ವೇಗವಾಗಿ ಹರಡುತ್ತದೆ.
ಬ್ರಿಟನ್​ನಲ್ಲಿ ವೇಗವಾಗಿ ಹರಡುತ್ತಿರುವ ಈ ಸೋಂಕು ಹೆಚ್ಚು ಮಾರಕ ಅಥವಾ ಹೆಚ್ಚಿನ ಕಾಯಿಲೆಗೆ ಕಾರಣವಾಗುತ್ತದೆ ಎಂಬ ಬಗ್ಗೆ ನಿರ್ಧರಿಸಲು ಇನ್ನು ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಇದು ಹೆಚ್ಚು ಸಾಂಕ್ರಾಮಿಕವಾಗಿರುವ ಹಿನ್ನಲೆ ಶೀಘ್ರವಾಗಿ ಹರಡುತ್ತಿದೆ ಎಂದು ಇಂಪಿರಿಯಲ್​ ಕಾಲೇಜ್​ ಲಂಡನ್​ನ ಡಾ ಎರಿಕ್​ ವೋಲ್ಜ್​ ತಿಳಿಸಿದ್ದಾರೆ.ಇದನ್ನು ಓದಿ: ಬ್ರಿಟನಲ್ಲಿ ಆತಂಕ ಮೂಡಿಸುತ್ತಿರುವ ಹೊಸ ಸ್ವರೂಪದ ಕೊರೋನಾ; ಯುಕೆ ವಿಮಾನಗಳಿಗೆ ನಿರ್ಬಂಧ

ಇನ್ನು ಈ ಸೋಂಕಿನ ಕುರಿತು ಈಗಾಗಲೇ ಬ್ರಿಟನ್​ ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಸಿದ್ದು, ಲಂಡನ್​ನಲ್ಲಿ ಶೇ 60 ರಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ. ಭಾನುವಾರ ಒಂದೇ ದಿನದಲ್ಲಿ ಸುಮಾರು 1,100 ಪ್ರಕರಣಗಳು ಈ ಹೊಸ ಸ್ವರೂಪದ ಕೊರೋನಾ ವೈರಸ್​ನಿಂದ ದಾಖಲಾಗಿದೆ.

ಐರ್ಲೆಂಡ್​ ಹೊರತು ಪಡಿಸಿ ಯುನೈಡೆಡ್​ ಕಿಂಗ್​ಡಮ್​ನ ಹಲವು ಪ್ರದೇಶದಲ್ಲಿ ಈ ಸೋಂಕು ಕಂಡು ಬಂದಿದೆ. ಅದರಲ್ಲಿಯೂ ಲಂಡನ್​, ಆಗ್ನೇಯ, ಪೂರ್ವ ಇಂಗ್ಲೆಂಡ್​ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆ.  ಈಗಾಗಲೇ ಕೊರೋನಾ ವೈರಸ್​ನ ವಿಭಿನ್ನ ಸ್ವರೂಪಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಹಲವು ವೈರಸ್​ ಶೀಘ್ರವಾಗಿ ಹರಡುವುತ್ತವೆ ಎಂದು ತಿಳಿಸಿದ್ದಾರೆ.
Published by: Seema R
First published: December 21, 2020, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories