HOME » NEWS » State » MINISTER K SUDHAKAR NEVER BOTHERED ABOUT MEDICAL COLLEGE TO CHITRADURGA VTC LG

ಕೊಟ್ಟ ಮಾತು ತಪ್ಪಿದ ಸಚಿವ ಡಾ.ಕೆ.ಸುಧಾಕರ್; ಕನಸಾಗಿಯೇ ಉಳಿಯುತ್ತಾ ಚಿತ್ರದುರ್ಗ ಮೆಡಿಕಲ್ ಕಾಲೇಜ್?

ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹಾಗೂ ಗೃಹ ಮಂತ್ರಿ ಬೊಮ್ಮಾಯಿ ಕಾಲೇಜ್ ನಿರ್ಮಾಣ ಸ್ಥಳ ಪರಿಶೀಲನೆ ಕೂಡಾ ಮಾಡಿದ್ದರು. ಆದರೆ  ಮೊನ್ನೆ ನಡೆದ ಅಧಿವೇಶನದಲ್ಲಿ ಸಚಿವ ಸುಧಾಕರ್ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಇಲ್ಲ ಎಂದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

news18-kannada
Updated:February 9, 2021, 10:04 AM IST
ಕೊಟ್ಟ ಮಾತು ತಪ್ಪಿದ ಸಚಿವ ಡಾ.ಕೆ.ಸುಧಾಕರ್; ಕನಸಾಗಿಯೇ ಉಳಿಯುತ್ತಾ ಚಿತ್ರದುರ್ಗ ಮೆಡಿಕಲ್ ಕಾಲೇಜ್?
ಡಾ. ಸುಧಾಕರ್
  • Share this:
ಚಿತ್ರದುರ್ಗ(ಫೆ.09): ಅವತ್ತು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಚಿತ್ರದುರ್ಗದ ಜನರಿಗೆ, ಯಡಿಯೂರಪ್ಪ ನೇತೃತ್ವದ ಸರ್ಕಾರ ಮೆಡಿಕಲ್ ಕಾಲೇಜನ್ನು ಗಿಫ್ಟ್​​ ನೀಡಿತ್ತು.ಕಾಲೇಜು ನಿರ್ಮಾಣಕ್ಕೆ 50 ಕೋಟಿ ಹಣ ಮಂಜೂರಿಗೂ ಅನುಮತಿ ನೀಡಿತ್ತು. ಇದೀಗ  ಮೆಡಿಕಲ್ ಕಾಲೇಜ್  ತಡೆ ಹಿಡಿದಿದ್ದು,ಅನ್ಯಾಯ ಮಾಡಿದೆ. ಇದರಿಂದ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ. ಇಲ್ಲಿನ ಜನರು ಗಂಭೀರ ರೋಗಗಳಿಗೆ ಚಿಕಿತ್ಸೆಗೆ  ಬೆಂಗಳೂರು, ದಾವಣಗೆರೆ, ಮಂಗಳೂರು ಸೇರಿ ವಿವಿಧ ಜಿಲ್ಲೆಗಳಿಗೆ ಹೋಗಬೇಕಿದೆ.

ಕಳೆದ ಸಿದ್ದರಾಮಯ್ಯ ಸರ್ಕಾರ ಅವಧಿಯ ಬಜೆಟ್ ನಲ್ಲಿ ಪ್ರಸ್ತಾವನೆ ತಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಗ್ರೀನ್ ಸಿಗ್ನಿಲ್ ನೀಡಿತ್ತು. ಆದರೆ ಕೆಲವೇ ದಿನಗಳಲ್ಲಿ  ಒತ್ತಡಕ್ಕೆ ಮಣಿದು ಚಿತ್ರದುರ್ಗದಿಂದ ರಾಮನಗರಕ್ಕೆ ಕಾಲೇಜು  ಸ್ಥಳಾಂತರ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಆದ್ದರಿಂದ ಕಾಲೇಜು ನಿರ್ಮಾಣಕ್ಕೆ ಬಾರಿ ಹೋರಾಟಗಳು ನಡೆಸಿದ್ದರೂ ಫಲ ಸಿಕ್ಕಿರಲಿಲ್ಲ. ಆದರೆ ದೀಪಾವಳಿ ಹಬ್ಬದ ಮುನ್ನ ಉಸ್ತುವಾರಿ ಮಂತ್ರಿ ಶ್ರೀರಾಮುಲು, ಸಂಸದ ಎ.ನಾರಾಯಣ ಸ್ವಾಮಿ ನೇತೃತ್ವದ ಜಿಲ್ಲೆಯ ನಿಯೋಗ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಮೆಡಿಕಲ್ ಕಾಲೇಜಿಗೆ ಆಗ್ರಹಿಸಿತ್ತು.

ಇದರಿಂದ  ಸಿಎಂ ಯಡಿಯೂರಪ್ಪ ಮೆಡಿಕಲ್ ಕಾಲೇಜು ಘೋಷಣೆ ಮಾಡುವ ಮೂಲಕ,ಕಟ್ಟಡ ನಿರ್ಮಾಣಕ್ಕೆ 50 ಕೋಟಿ ಅನುದಾನ ಬಿಡುಗಡೆ ಆದೇಶಿಸಿದರು. ಸರ್ಕಾರ ಬಿಡುಗಡೆ ಮಾಡ್ತಿದ್ದಂತೆ, ಜಿಲ್ಲಾಡಳಿತ DMFನ 25 ಕೋಟಿ ಹಣ ಮೀಸಲಿಟ್ಟಿತ್ತು. ಇದ್ರಿಂದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹಾಗೂ ಗೃಹ ಮಂತ್ರಿ ಬೊಮ್ಮಾಯಿ ಕಾಲೇಜ್ ನಿರ್ಮಾಣ ಸ್ಥಳ ಪರಿಶೀಲನೆ ಕೂಡಾ ಮಾಡಿದ್ದರು. ಆದರೆ  ಮೊನ್ನೆ ನಡೆದ ಅಧಿವೇಶನದಲ್ಲಿ ಸಚಿವ ಸುಧಾಕರ್ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಇಲ್ಲ ಎಂದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

2030ರ ವೇಳೆಗೆ ಭಾರತೀಯ ಔಷಧ ಉದ್ಯಮ 130 ಶತಕೋಟಿ ಡಾಲರ್‌ ತಲುಪಲಿದೆ; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ಇನ್ನೂ ಸಚಿವ ಸುಧಾಕರ್ ಹೇಳಿಕೆ ಮತ್ತೆ ಮೆಡಿಕಲ್ ಕಾಲೇಜು ಆಸೆಯನ್ನ ದೂರ ಮಾಡಿದ್ದು,ದುರ್ಗದ ಜನರು ಮತ್ತೆ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗಿದ್ದಾರೆ. ಅಲ್ಲದೇ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಕೂಡಾ ಜನರು ಆಕ್ರೋಶಗೊಂಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಚ್ಚಾ ಶಕ್ತಿ ಇಲ್ಲ ಎಂದು ಆರೋಪಿಸುತ್ತಿದ್ದಾರೆ.

ಕಾಲೇಜು ನಿರ್ಮಾಣ ಆದೇಶಿಸಿರುವುದು ನನಗೆ ಮಂತ್ರಿಸ್ಥಾನ ಸಿಕ್ಕಷ್ಟೆ ಖುಷಿಯಾಗಿದೆ ಎಂದಿದ್ದ  ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ,ಅಧಿವೇಶನದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣಕಾಸು ಇಲಾಖೆ ತಡೆ ನೀಡಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಕಾಲೇಜು ನಿರ್ಮಾಣಕ್ಕೆ ಸಿಎಂ ಜೊತೆ ಪ್ರಯತ್ನ ಮಾಡುತ್ತೇವೆ. 600 ಕೋಟಿ ಹಣ ಬೇಕಿದ್ದು, ಸಮಯ ಬೇಕಿದೆ ಎಂದು ಬೇಸರಪಟ್ಟಿದ್ದಾರೆ.
ಒಟ್ಟಾರೆ ಮೂರು ಪಕ್ಷಗಳು ಅಧಿಕಾರಕ್ಕೆ ಬರೋವರೆಗೂ ಮೆಡಿಕಲ್ ಕಾಲೇಜ್ ನಿರ್ಮಾಣದ ಭರವಸೆ ನೀಡಿ ಮತ ಕೇಳ್ತಿದ್ದು, ಅಧಿಕಾರಕ್ಕೆ ಬಂದ ನಂತರ ಬಿಎಸ್​ವೈ ನೇತೃತ್ವದ ಬಿಜೆಪಿ ಸರ್ಕಾರದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಎಳ್ಳು ನೀರು ಬಿಡ್ತಿದ್ದಾರೆ. ಮೆಡಿಕಲ್ ಕಾಲೇಜು ದೂರದ ಕನಸಾಗಿದೆ. ಅಲ್ಲದೇ ದುರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by: Latha CG
First published: February 9, 2021, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories