Bitcoin Scam ಸಂಬಂಧ ಸರ್ಕಾರದ ಸ್ಪಷ್ಟನೆ; ಕಾಂಗ್ರೆಸ್ ಆರೋಪಗಳಿಗೆ ಸಚಿವ Sudhakar ಉತ್ತರ!

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಹಿಂದಿನ ಸರ್ಕಾರಗಳ ಹಗರಣದ ಬಗ್ಗೆ ಮಾತನಾಡೋದಿಲ್ಲ‌. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದರು.

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

 • Share this:
  ಬೆಂಗಳೂರು: ರಾಜ್ಯ ಸೇರಿದಂತೆ ದೇಶಾದ್ಯಂತ ಭಾರಿ ವಿವಾದದ ಬಿರುಗಾಳಿ ಎಬ್ಬಿಸಿರುವ ಬಿಟ್​ ಕಾಯಿನ್ ಹಗರಣ (Bitcoin Scam) ಸಂಬಂಧ ಇಂದು ಸಚಿವ ಸುಧಾಕರ್ (Minister K Sudhakar Clarification On Bitcoin Scam) ಅವರು ಸರ್ಕಾರದ ಪರವಾಗಿ ಪ್ರತಿಪಕ್ಷಗಳ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಇವತ್ತು ಬೆಳಗ್ಗೆ ಕಾಂಗ್ರೆಸ್ ಸುರ್ಜೇವಾಲ (Congress Leader Randeep Surjewala) ಸುದ್ದಿಗೋಷ್ಠಿ ಮಾಡಿದರು. ಕೆಲವು ದಿನದಿಂದ ಪತ್ರಿಕಾಗೋಷ್ಠಿ ಕಾಂಗ್ರೆಸ್ ನಾಯಕರು, ವಿರೋಧ ಪಕ್ಷದ ನಾಯಕರು ಮಾಡ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರದಲ್ಲಿ ರಾಷ್ಟ್ರೀಯವಾಗಿ ಬಿಂಬಿಸಲು ಮುಂದಾಗಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್ ಸ್ಕ್ಯಾಮ್ ಆಗಿದೆ ಎಂದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿದ್ದದಾರೆ, ಸರ್ಕಾರದ ಸಮಸ್ಯೆ ಸುಳಿವಿನಲ್ಲಿದೆ. ಸುಳ್ಳನ್ನ ಬಿಂಬಿಸಲು ಹೊರಟಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದರು.

  ಸರ್ಕಾರದ ಪರವಾಗಿ ಅವರು ಎತ್ತಿರುವ ಆರು‌ ಪ್ರಶ್ನೆಗೆ ಉತ್ತರ ಕೊಡ್ತೀನಿ. ಅದಕ್ಕೂ ಮೊದಲು ರಾಜ್ಯದ ಜನರಿಗೆ ಶ್ರೀಕಿಗೆ ಬಲೆ ಹಾಕಿದ ಬಗ್ಗೆ ಹೇಳುತ್ತೇನೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಆತನನ್ನು ಹಿಡಿಯಲಿಲ್ಲ. ನಮ್ಮ‌ ಸರ್ಕಾರದ ಸಮಯದಲ್ಲಿ, ಹಿಂದೆ ಬೊಮ್ಮಾಯಿ ಸರ್ ಗೃಹ ಸಚಿವರಾಗಿದ್ದಾಗ ಅರೆಸ್ಟ್ ಮಾಡಲಾಯ್ತು. ಬೊಮ್ಮಾಯಿ ಅವರು ಡ್ರಗ್ಸ್ ವಿರುದ್ದ ಸಮರ ಸಾರಿದರು. ಯಾರನ್ನೂ ಬಿಡದೆ ಸೆಲೆಬ್ರೆಟಿಗಳನ್ನ ನೋಡದೆ ಕ್ರಮ ಕೈಗೊಂಡರು. ಈ ವೇಳೆ ಶ್ರೀಕಿ ಪೊಲೀಸ್ರಿಗೆ ಸಿಕ್ಕಿಬಿದ್ದ. ನಾನು ಮಾದಕ ವ್ಯಸನಿ ಎಂದು ಅವನು ಒಪ್ಪಿಕೊಂಡಿದ್ದಾನೆ. ಆಗ ಅವನು ಹೇಗೆ ಹ್ಯಾಕಿಂಗ್ ಮಾಡ್ತಿದ್ದೆ, ಹೇಗೆ ಬಿಟ್ ಕಾಯಿನ್ ಎಕ್ಸ್ಚೇಂಜ್ ಮಾಡ್ತಿದ್ದ ಎಂಬುದರ ಬಗ್ಗೆ ಹೇಳಿದ್ದಾನೆ. ವಿದೇಶದಲ್ಲಿ ಓದಿದ್ದು, ನಿಪುಣನಾಗಿದ್ದ. ಹಿರಿಯ ಪೊಲೀಸ್ ಅಧಿಕಾರಿಗಳ ಒಂದು ತಂಡ ಮಾಡಿಕೊಂಡು ತನಿಖೆ ಮಾಡಿಸಲಾಗಿದೆ. ಶ್ರೀಕಿ ಹೇಳಿದ್ದು ಸತ್ಯ ಅಥವಾ ಸುಳ್ಳ ಎಂಬುದನ್ನು ತನಿಖೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಆತನ‌ ಹೇಳಿಕೆ ಹಿಡಿದುಕೊಂಡು ಹೊರಟಿದ್ದಾರೆ. ಅವನು ಮೊದಲೇ ಡ್ರಗ್ ಅಡಿಟ್ , ಅವನ‌ ಮನಸ್ಥಿತಿಯೇ ಸರಿ ಇರಲ್ಲ ಎಂದರು.

  ಸುರ್ಜೇವಾಲ ಮೊದಲ ಪ್ರಶ್ನೆ, ಬಿಟ್ ಕಾಯಿನ್ ರಕ್ಷಣೆ ಮಾಡುವ ನಟರಾರು ಅಂತ ಹೇಳಿದ್ದಾರೆ. ನಮ್ಮ ಕಾಲದಲ್ಲೇ ಗೃಹ ಸಚಿವರಾಗಿದ್ದಾಗ ಕೇಸ್ ತನಿಖೆಯ ಮಾಡಿಸಿದ್ದ ಬೊಮ್ಮಾಯಿ ನಟರಾ. ಆಗ ಕಾಂಗ್ರೆಸ್ ಸರ್ಕಾರ ಮತ್ತು ಮೈತ್ರಿ ಸರ್ಕಾರ ಏನ್ ಮಾಡ್ತು. ಡೆಲ್ಲಿಯಿಂದ ಕನ್ಯಾಕುಮಾರಿವರೆಗೂ ಯಾರು ಹಿಡಿದಿದ್ರು. ಯಾರ ಹೇಳಿಕೆ‌ ಕೇಳಿ ಆಪಾದನೆ ಮಾಡ್ತಿದ್ದೀರಿ. ಹಿಟ್ ಆ್ಯಂಡ್ ರನ್‌ ಹೇಳಿಕೆ ಕಾಂಗ್ರೆಸ್ ನವರದ್ದು. ಕಾಂಗ್ರೆಸ್ ನವರ ಹತ್ತಿರ ಕಲಿಬೇಕು. ಅವರು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಗೃಹ ಸಚಿವರಾಗಿದ್ದ ವೇಳೆ ಬೊಮ್ಮಾಯಿ ಅವರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ‌ ಎಂದು ತಿರುಗೇಟು ನೀಡಿದ್ದಾರೆ.

  ಸುರ್ಜೇವಾಲ ಎರಡನೇ ಪ್ರಶ್ನೆ, ತನಿಖೆ ಮಾಡುವಾಗ ಬಿಟ್ ಕಾಯಿನ್ ಅಕೌಂಟ್ ನೋಡಬೇಕು ಎಂದು ಪೊಲೀಸರಿಗೆ ಅನ್ನಿಸಿದೆ. ಸರಳವಾಗಿ ನೋಡಲು ಆಗೋದಿಲ್ಲ. ಬಿಟ್ ಕಾಯಿನ್ ಅಕೌಂಟ್ ನೋಡಲು ತನಿಖಾಧಿಕಾರಿಗಳು ಮಹಜರ್ ಮಾಡಿದ್ದಾರೆ. ಸೈಬರ್ ಎಕ್ಸ್ ಫರ್ಟ್ ಕರೆದುಕೊಂಡು ಹೋಗಿದ್ದಾರೆ. 31.8 ಬಿಟ್ ಕಾಯಿನ್ಸ್ ಸಿಕ್ಕಿದೆ. ವಿಡಿಯೋ ಮಾಡಿದ್ದಾರೆ. ಇದನ್ನ ಕೋರ್ಟ್ ಗೆ ಕೊಡಲಾಗಿದೆ. ಮತ್ತೆ ಕೋರ್ಟ್ ಪರ್ಮಿಷನ್ ತೆಗೆದುಕೊಂಡು ಪಾಸವರ್ಡ್ ಉಪಯೋಗಿಸಿ ಪೊಲೀಸ್ ಇಲಾಖೆಗೆ ವರ್ಗಾವಣೆ ಮಾಡಿಕೊಳ್ಳಲು ಕೋರ್ಟ್ ನಿಂದ ಪರ್ಮಿಷನ್ ತೆಗೆದುಕೊಂಡಿದ್ದಾರೆ. ಆಗ ವ್ಯಾಲೆಟ್ ನಲ್ಲಿ‌ 186.881 ಬಿಟ್ ಕಾಯಿನ್ ಪತ್ತೆಯಾಗುತ್ತೆ. ಇದನ್ನ‌ ಸೈಬರ್ ಎಕ್ಸ್ ಪರ್ಟ್ , ಯುನೋ ಕಾಯಿನ್ ನವರ ಬಳಿ ಮಾಹಿತಿ ಪಡೆಯುತ್ತಾರೆ. ಲೈವ್ ಅಕೌಂಟ್ ಆಗಿದ್ದು,ಎಕ್ಸ್ಜೇಂಜ್ ಆಗಿದೆ. ಅವನ‌ ಬಳಿ ಕೀ ಇಲ್ಲ ಎಂದು ತಿಳಿಸಿದ್ದಾರೆ. ಬಿಟ್ ಕಾಯಿನ್ ಅನ್ನು ಯಾರೂ ಟಚ್ ಮಾಡಲು ಅಗಲ್ಲ. ವಿಶ್ವದಲ್ಲಿ 7000 ಸಾವಿರ ಬಿಟ್ ಕಾಯಿನ್ ಇದೆ. ನಮ್ಮ ದೇಶದಲ್ಲಿ ಆರ್ ಬಿ ಐ ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಮಾಹಿತಿ ನೀಡಿದರು.

  ಪ್ರಕರಣದ ತನಿಖೆ ಪೂರ್ತಿ ಚಾರ್ಜ್ ಶೀಟ್ ಆಗಿದೆ. ಈ ಪ್ರಕರಣದಲ್ಲಿ ಯಾರನ್ನೂ ಬಚ್ಚಿಡೋದು, ಲೋಪದೋಷಗಳು ಏನಿಲ್ಲ. ಇವರ ಹೇಳಿಕೆಗಳು ಸತ್ಯಕ್ಕೆ ದೂರ. ಶ್ರೀಕಿ ಕಸ್ಟಡಿಯಲ್ಲಿದ್ದರೂ, ಅದೇ ಟೈಮಲ್ಲಿ ಬಿಟ್ ಕಾಯಿನ್ಸ್ ಕಳ್ಳತನವಾಗಿತ್ತಾ ಎಂದು ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ. 14.682 ಬಿಟ್ ಕಾಯಿನ್ಸ್ ಕಳ್ಳತನವಾಗಿದ್ದರೂ ಆ ಕಂಪನಿಯವರು ಆಗಲಿ, ಆದೇಶದ ಏಜೆನ್ಸಿಸ್ ಆಗಲಿ, ಇಂಟರ್ ಪೋಲ್ ಆಗಲಿ, ನಮ್ಮ ಇಲಾಖೆಗೆ ಕೇಳ್ತಿರಲಿಲ್ವಾ. ನಮ್ಮ ದೇಶಕ್ಕೆ ಮಹತ್ವದ ಗೌರವವಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದಿರೋ ಅನಧಿಕೃತ ಮಾಹಿತಿ ಇಟ್ಟುಕೊಂಡು ಇಷ್ಟೊಂದು ಸಾವಿರ ಕಾಯಿನ್ ಎಲ್ಲೋಯ್ತು ಅಂದರೆ ಯಾರು ಉತ್ತರ ಕೊಡೋದು ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದರು.

  ಇದನ್ನು ಓದಿ: Bitcoin Scam ದೊಡ್ಡದು, ಅದನ್ನು ಮುಚ್ಚಿಡುತ್ತಿರುವುದು ಇನ್ನೂ ದೊಡ್ಡದು: Rahul Gandhi

  ನಮ್ಮ ಕರ್ನಾಟಕ ಪೊಲೀಸರನ್ನು ಯಾವ ಏಜೆನ್ಸಿಯೂ ಸಂಪರ್ಕಿಸಿಲ್ಲ. ಕಳ್ಳತನ ಅಲ್ಲಾ, ಹ್ಯಾಕಿಂಗ್ ಬಗ್ಗೆಯೂ ಕೇಳಿಲ್ಲ. ಬೆಂಗಳೂರಿನಿಂದ ಆಗಿದ್ದರೆ ಮಾಹಿತಿ ಕೇಳುತ್ತಿದ್ದರೂ ಅಲ್ವಾ? ಇದೆಲ್ಲವೂ ಸತ್ಯಕ್ಕೆ ದೂರ. ಇಲ್ಲಿಯವರೆಗೂ ಕೂಡಾ ನಮ್ಮ ಕರೆನ್ಸಿ ಕಳ್ಳತನವಾಗಿದೆ ಎಂದು ದೂರು ಬಂದಿಲ್ಲ. ಅವರ ಸಂಪರ್ಕದಲ್ಲಿ ನಮ್ಮವರು ಇದ್ದಾರೆ. ನೀವು ಮಾಡದಿದ್ದನ್ನ ಬೊಮ್ಮಾಯಿ ಅವರು ಮಾಡಿದ್ದಾರೆ ಎಂದರು.

  ಬೊಮ್ಮಾಯಿ ಅವರು ಪಾರದರ್ಶಕ ಸರ್ಕಾರ ಕೊಡ್ತಿದ್ದಾರೆ. ಜನಪ್ರಿಯತೆ ಗಳಿಸಿರುವ ಅವರ ಮೇಲೆ ಹೊಟ್ಟೆ ಕಿಚ್ಚಾ? ಬಿಳಿ ಶರ್ಟ್ ಮೇಲೆ ಇಂಕು ಹಾಕ್ಬೇಕಾ? ಇದೆಲ್ಲಾ ಯಾಕೆ? ಸುಳ್ಳು ಆಪಾದನೆ ಬೇಡ ಎಂದು ಸಚಿವ ಸುಧಾಕರ್, ತನಿಖೆಗೆ ಆದೇಶ ಅಲ್ಲದೇ, ಡಿಐಜಿ ರ್ಯಾಂಕ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯನ್ನು ಜೋಡಿಸಿದ್ದಾರೆ. ಸೈಬರ್ ಎಕ್ಸ್ ಫರ್ಟ್ ಕೂಡ ಇದ್ದಾರೆ. ಒಬ್ಬ ಗೃಹ ಸಚಿವರು ತನಿಖೆಗೆ ಆದೇಶ ಮಾಡಿದ್ಮೇಲೆ. ಹಸ್ತಕ್ಷೇಪ ಮಾಡ್ಬಾರ್ದು. ಅದನ್ನೇ ಪಾಲನೆ ಮಾಡಿದ್ದಾರೆ. ಪ್ರತಿಯೊಂದು ತನಿಖೆಯ ವಿಡಿಯೋ ರೆಕಾರ್ಡ್ ಇದೆ. ರಾಜ್ಯ ಸರ್ಕಾರಕ್ಕೆ ಇಡಿನೇ ಪತ್ರ ಬರೆದು ಮಾಹಿತಿ ಕೇಳುತ್ತಿತ್ತು. ಆದರೆ ನಾವೇ ಇಡಿ ಇಂಟರ್ ಪೋಲ್ ಗೆ ಮಾಹಿತಿ ಕೊಟ್ಟಿದ್ದೇವೆ. ಸಿಬಿಐಗೂ ಮಾಹಿತಿ ಕೊಟ್ಟಿದ್ದೇವೆ. ತನಿಖೆ ಆಗ್ತಿದೆ. ಯಾರು ರಾಜಕಾರಣಿಗಳು ಇದ್ದಾರೆ. ಪ್ರಭಾವಿಗಳಿದ್ದಾರೆ ಎಲ್ಲಾ ಹೊರಗೆ ಬರುತ್ತೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಹಿಂದಿನ ಸರ್ಕಾರಗಳ ಹಗರಣದ ಬಗ್ಗೆ ಮಾತನಾಡೋದಿಲ್ಲ‌. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದರು.
  Published by:HR Ramesh
  First published: