HOME » NEWS » State » MINISTER K SUDHAKAR GETS HEALTH PORTFOLIO BSY CHANGED SRIRAMULU PORTFOLIO SESR

Big Breaking: ಖಾತೆ ಬದಲಾವಣೆ: ಶ್ರೀ ರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸಚಿವ ಸುಧಾಕರ್​ ಹೆಗಲಿಗೆ

Exchange of Portfolios: ಆರೋಗ್ಯ ಇಲಾಖೆ ಬದಲಾಗಿ ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ.

news18-kannada
Updated:October 11, 2020, 8:41 PM IST
Big Breaking: ಖಾತೆ ಬದಲಾವಣೆ: ಶ್ರೀ ರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸಚಿವ ಸುಧಾಕರ್​ ಹೆಗಲಿಗೆ
ಸಚಿವ ಶ್ರೀರಾಮುಲು
  • Share this:
ಬೆಂಗಳೂರು (ಅ.11): ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಬಿ ಶ್ರೀರಾಮುಲು ಅವರ ಖಾತೆಯನ್ನು ಬದಲಾಯಿಸಲಾಗಿದೆ. ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.  ಸಚಿವ ಬಿ ಶ್ರೀರಾಮುಲು ಅವರಿಗೆ  ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಖಾತೆ ಸಚಿವ ಗೋವಿಂದ ಕಾರಜೋಳ ಬಳಿಯಿತ್ತು. ಈಗ ಡಿಸಿಎಂ ಅವರ ಬಳಿ ಕೇವಲ ಲೋಕೋಪಯೋಗಿ ಇಲಾಖೆ ಹೊಣೆ ಮಾತ್ರ ಇದೆ. ಬಹುದಿನಗಳಿಂದ ಶ್ರೀರಾಮುಲು ಅವರು ಖಾತೆ ಬದಲಾವಣೆ ಮಾಡುವಂತೆ ಸಿಎಂ ಬಿಎಸ್​ ವೈ ಅವರಿಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಮಣಿದು ಖಾತೆ ಬದಲಾವಣೆ ಮಾಡಲಾಗಿದೆ. 

ಈ ಹಿಂದಿನಿಂದಲೂ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಡಿಸಿಎಂ ಸ್ಥಾನ ನೀಡಲು ವಿಫಲರಾದರೇ, ಸಮಾಜ ಕಲ್ಯಾಣ ಸಚಿವ ಸ್ಥಾನವನ್ನಾದರೂ ನೀಡಿ ಎಂದಿದ್ದರು. ಆದರೆ, ಅವರಿಗೆ ಆರೋಗ್ಯ ಖಾತೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಈ ಖಾತೆ ಬಗ್ಗೆ ಅವರು ಸಮಾಧಾನ ಹೊಂದಿರಲಿಲ್ಲ. ತಮ್ಮ ಖಾತೆ ಬದಲಾಯಿಸುವಂತೆ  ಸಾಕಷ್ಟು ಬಾರಿ ಮನವಿ ಮಾಡಿದ್ದರು. ಶ್ರೀರಾಮುಲು ಬೇಡಿಕೆಗೆ ಮಣಿದ ಸಿಎಂ ಖಾತೆ ಬದಲಾವಣೆ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಸಚಿವರ ಖಾತೆ ಬದಲಾವಣೆಯಾಗಲಿದೆ.

ಕೊರೋನಾ ಸಂಕಷ್ಟ ಕಾಲದಲ್ಲಿ ಸಚಿವ ಬಿ ಶ್ರೀರಾಮುಲು ಅವರು ಖಾತೆ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು. ಕೊರೋನಾ ನಿರ್ವಹಣೆಯಲ್ಲಿ ಕೆ ಸುಧಾಕರ್​ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದಕ್ಕೆ ಶ್ರೀರಾಮುಲು ಅಸಮಾಧಾನವನ್ನು ಹೊಂದಿದ್ದರು. ಇಬ್ಬರು ನಡುವಿನ ಈ ಗುದ್ದಾಟ ರಾಜ್ಯದ ಜನತೆ ಮುಂದೆ ಕೂಡ ಬಹಿರಂಗವಾಗಿತ್ತು. ಬಳಿಕ ಇದಕ್ಕೆ ತೇಪೆ ಹಚ್ಚಲು ಮುಂದಾದ ಸುಧಾಕರ್​, ಶ್ರೀರಾಮುಲು ಅಣ್ಣ ನನ್ನ ನಡುವೆ ಯಾವುದೇ ಮುನಿಸಿಲ್ಲ ಎಂದಿದ್ದರು.
Published by: Seema R
First published: October 11, 2020, 7:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories