ಬೆಂಗಳೂರು; ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬದಲಾದ ಹಿನ್ನೆಲೆ ಸಚಿವ ಕೆ.ಗೋಪಾಲಯ್ಯ ಅವರು ಭಾರೀ ಅಸಮಾಧಾನಗೊಂಡಿದ್ದಾರೆ. ವಲಸಿಗ ಶಾಸಕರು ಇಂದು ಸಚಿವ ಸುಧಾಕರ್ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಗೋಪಾಲಯ್ಯ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಡಾ. ಸುಧಾಕರ್ ನಿವಾಸದಲ್ಲಿ ನಡೆದ ವಲಸಿಗರ ಸಭೆಯಲ್ಲಿ ಸಚಿವ ಕೆ.ಗೋಪಾಲಯ್ಯ ಅವರು, ಲಾಕ್ ಡೌನ್ ವೇಳೆ ಹಾಗೂ ಕೋವಿಡ್ ಸಂಕಷ್ಟದಲ್ಲಿ ಸಮಯದಲ್ಲಿ ರಾತ್ರಿ, ಹಗಲು ಎನ್ನದೇ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೂ ಕೂಡಾ ಕಡಿವಾಣ ಹಾಕಿದ್ದೆ. ಇತ್ತೀಚೆಗೆ ತಾನೆ ಅಧಿಕಾರಿಗಳೆಲ್ಲರೂ ಹತೋಟಿಗೆ ಬಂದಿದ್ದರು. ರಾಜ್ಯಾದ್ಯಂತ ಒಳ್ಳೆಯ ಜನಾಭಿಪ್ರಾಯ ಇತ್ತು. ನಾನೂ ಕೂಡ ಆಹಾರ ಖಾತೆ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದೆ. ಆದರೆ ಇದ್ದಕ್ಕಿದ್ದಂತೆ ನನ್ನ ಇಷ್ಟದ ಇಲಾಖೆಯನ್ನೇ ತೆಗೆದಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಸರ್ಕಾರ ರಚನೆ ಆಗೋವರೆಗೂ ಮುಖ್ಯಮಂತ್ರಿ ಗಳು ಚೆನ್ನಾಗಿಯೇ ಇದ್ರು. ಆದರೆ ಸರ್ಕಾರ ಸೇಫ್ ಆದ್ಮೇಲೆ ನಮ್ಮನ್ನು ಮೂಲೆಗುಂಪು ಮಾಡ್ತಿದ್ದಾರೆ ಎಂದು ಸಚಿವ ಕೆ.ಗೋಪಾಲಯ್ಯ ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಲಾಕ್ ಡೌನ್ ನಲ್ಲಿ ರಾಜ್ಯದ್ಯಾಂತ ಒಡಾಡಿ ಒಳ್ಳೆ ಕೆಲಸ ಮಾಡಿದ್ದೆ. ನನಗೆ ಕೊಟ್ಟ ಖಾತೆಯನ್ನು ಇನ್ನೂ ಅಭಿವೃದ್ಧಿ ಮಾಡಬೇಕು ಅಂತ ಇದ್ದೆ. ಈ ಸಂದರ್ಭದಲ್ಲಿ ನಾನು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಕ್ಕೆ ಪಕ್ಷಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡೋಣ ಅಂತ ಇದ್ದೆ. ಈಗ ಖಾತೆ ಬದಲಾವಣೆ ಮಾಡಿದ್ದಾರೆ. ಸಂಜೆ ಸಿಎಂ ಜತೆ ಚರ್ಚೆ ಮಾಡುತ್ತೇವೆ. ಸಿಎಂ ಜತೆ ಮಾತಾಡಿ ನಾವೇನು ತಪ್ಪು ಮಾಡಿದ್ದೇವೆ ಅಂತ ಕೇಳ್ತೇವೆ ಎಂದಿದ್ದಾರೆ.
ಇದನ್ನು ಓದಿ: ಬೆಳಗಾವಿಗೆ ಲಗ್ಗೆ ಹಾಕಲು ಶಿವಸೈನಿಕರ ಪ್ರಯತ್ನ; ಶಿನ್ನೊಳ್ಳಿ ಗಡಿಭಾಗದಲ್ಲಿ ಪೊಲೀಸರೊಂದಿಗೆ ತಿಕ್ಕಾಟ
ವಲಸಿಗರಲ್ಲಿ ಹೊಂದಾಣಿಕೆ ಇಲ್ಲ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ರಮೇಶ್ ಜಾರಕಿಹೊಳಿ ನಮ್ಮ ಪರವಾಗಿಯೇ ಇದ್ದಾರೆ. ನಮ್ಮಲ್ಲಿ ಅಸಮಾಧಾನ ಇಲ್ಲ. ಕ್ಯಾಬಿನೆಟ್ ನಂತರ ಅಥವಾ ಅದಕ್ಕೂ ಮೊದಲು ಸಿಎಂ ಭೇಟಿ ಚರ್ಚೆ ಮಾಡ್ತೇವೆ. ಸಿಎಂ ಭೇಟಿಗೆ ಯಾವುದೇ appointment ಬೇಕಾಗಿಲ್ಲ. ನಾವೆಲ್ಲ ಸಿಎಂಗೆ ಭೇಟಿ ಮಾಡಿ ಚರ್ಚೆ ಮಾಡೋಣ ಅಂತ ತೀರ್ಮಾನ ಮಾಡಿದ್ದೇವೆ. ನಾವೇನು ತಪ್ಪು ಮಾಡಿದ್ದೇವೆ ಅಂತ ಸಿಎಂ ಹತ್ರ ಕೇಳ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ