ಹಾಸನ(ನ.02): ಸಚಿವ ಗೋಪಾಲಯ್ಯರವರು ದ್ವಾರಸಮುದ್ರ ಕೆರೆ ಏರಿ ಬಿರುಕು ಬಿಟ್ಟಿರುವ ಸ್ಥಳಗಳನ್ನು ಪರಿಶೀಲಿಸಿದರು. ಹಳೇಬೀಡಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಕೆರೆ ಏರಿ ಕುಸಿತವಾಗಿರುವುದರಿಂದ ಮಂದಾಗಬಹುದಾದ ಅಪಾಯ ತಪ್ಪಿಸುವ ಉದ್ದೇಶದಿಂದ ಸ್ಥಳೀಯ ಇಂಜಿನಿಯರ್ ಗಳು ಮೇಲಾಧಿಕಾರಿಗಳ ಆದೇಶದಂತೆ ಕೋಡಿ ಒಡೆದಿದ್ದಾರೆ. ಐತಿಹಾಸಿಕ ಕೆರೆ ಸಂರಕ್ಷಣೆ ದೃಷ್ಟಿಯಿಂದ ಒಂದು ಅಡಿನೀರು ಕಡಿಮೆ ಮಾಡಿಕೊಂಡು ಕಾಮಗಾರಿ ನಡೆಸಬೇಕಿದೆ. ತಾವೂ ಕೂಡ ನೀರಾವರಿ ತಜ್ಞರು, ಮುಖ್ಯ ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆದ್ದು ಬುಧವಾರ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು. ನಾಳೆಯಿಂದಲೇ ಕಾಮಗಾರಿ ಪ್ರಾರಂಭ ಮಾಡಲಾಗುವುದು, ಏರಿ ಹಿಂಬದಿಯಲ್ಲಿ ಐದು ಸಾವಿರ ಮರಳು ಮೂಟೆಗಳನ್ನು ಹಾಕಿ, ನಂತರ ಶಾಶ್ವತ ದುರಸ್ತಿ ಕಾರ್ಯ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರು ಹೇಳಿದರು.
ಒಂದು ಅಡಿ ನೀರು ಕಡಿಮೆ ಮಾಡುವುದರಿಂದ ಕೆರೆ ಏರಿಯ ಮೇಲಿನ ಒತ್ತಡ ಕಡಿಮೆ ಆಗಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಂದಿನ ಎರಡು ಮೂರು ದಿನಗಳು ಜಿಲ್ಲೆಯಲ್ಲಿ ಮಳೆಯಾಗಲಿದೆ ಆಗ ಇನ್ನಷ್ಟು ಒತ್ತಡ ಬೀಳಬಹುದು. ಅಲ್ಲದೇ ನಂತರವೂ ನೀರಿನ ಒಳಹರಿವು ಬರಲಿದ್ದು, ಈಗ ಖಾಲಿ ಮಾಡಿದ ಒಂದು ಅಡಿ ನೀರು ಮತ್ತೆ ತುಂಬಿಕೊಳ್ಳಲಿದೆ. ಹಾಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಆರ್ಆರ್ ನಗರ, ಶಿರಾ ಉಪಚುನಾವಣೆ; ಅಭ್ಯರ್ಥಿಗಳಿಂದ ಇಂದು ಮನೆ ಮನೆ ಪ್ರಚಾರ
ಕೆರೆ ಕೋಡಿ ಒಡೆದಿರುವ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಜಿಲ್ಲಾಡಳಿತ ಕೂಡ ಈ ಬಗ್ಗೆ ನಿಗಾವಹಿಸಲಿದೆ. ಮಂದಿನ ದಿನಗಳಲ್ಲಿ ಕೆರೆ ಸುಸ್ಥಿತಿಯಲ್ಲಿಡಬೇಕಾದರೆ ಹಾಲಿ ಸ್ವಲ್ಪ ನೀರು ಕಡಿಮೆ ಮಾಡಿ ಕಾಮಗಾರಿ ನಡೆಸಬೇಕಿದೆ ಎಂದು ಸಚಿವ ಗೋಪಾಲಯ್ಯ ಅವರು ಪ್ರತಿಭಟನೆ ನಿರತರಿಗೆ ಮನವರಿಕೆ ಮಾಡಿಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ