HOME » NEWS » State » MINISTER K GOPALAIAH SAYS ONE MONTH IS DEAD LINE FOR RETURNING FAKE BPL CARD SRBH HK

ನಕಲಿ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಒಂದು ತಿಂಗಳ ಕಾಲಾವಕಾಶ: ಸಚಿವ ಗೋಪಾಲಯ್ಯ

ಮೈಸೂರು ಸ್ಯಾಂಡಲ್ ಸೋಪ್ ಅನ್ನು ಉಚಿತವಾಗಿ ಕೊಡಲ್ಲ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಚಿಂತಿಸಲಾಗಿದ್ದು, ಕೇಂದ್ರ ಸಚಿವ ಸದಾನಂದಗೌಡರ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ.

news18-kannada
Updated:February 27, 2020, 3:13 PM IST
ನಕಲಿ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಒಂದು ತಿಂಗಳ ಕಾಲಾವಕಾಶ: ಸಚಿವ ಗೋಪಾಲಯ್ಯ
ಸಚಿವ ಕೆ. ಗೋಪಾಲಯ್ಯ.
  • Share this:
ಬೆಂಗಳೂರು(ಫೆ. 27): ನಕಲಿ ಬಿಪಿಎಲ್ ಕಾರ್ಡ್​ಗಳನ್ನು ಹೊಂದಿರುವವರು ಕಾರ್ಡ್ ವಾಪಸ್ ಕೊಡಲು ಒಂದು ತಿಂಗಳವರೆಗೆ ಸಮಯಾವಕಾಶ ನೀಡಲಾಗಿದೆ. ನಂತರ ನಮ್ಮ ಅಧಿಕಾರಿಗಳು ಕಾರ್ಡುದಾರರ ಮನೆಬಾಗಿಲಿಗೆ ಬರುತ್ತಾರೆ. ಇದುವರೆಗೆ ಅವರು ತೆಗೆದುಕೊಂಡಿರುವ ಆಹಾರ ಧಾನ್ಯದ ಒಟ್ಟು ಮಾರುಕಟ್ಟೆ ಮೌಲ್ಯವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲು ಉದ್ದೇಶಿಸಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಫ್​ಸಿಐ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂರಕ್ಷಣೆಗಾಗಿ ಮಲಾಥಿಯೋನ್ (Malathion) ಕೀಟನಾಶಕ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅದೂ ಕೂಡ ಚೀಲಗಳ ಮೇಲೆ ಸಿಂಪಡಣೆ ಮಾಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಯಾವುದೇ ಗೋದಾಮುಗಳಲ್ಲಿ ಮಲಾಥಿಯೋನ್ ಕೀಟನಾಶಕಗಳನ್ನು ಬಳಕೆ ಮಾಡುತ್ತಿಲ್ಲ ಎಂದರು.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಲ್ಲಿ ಬದಲಾವಣೆಯಾಗುವ ಸುಳಿವನ್ನು ಸಚಿವ ಗೋಪಾಲಯ್ಯ ನೀಡಿದ್ದಾರೆ. ಮುಂಬರುವ ಬಜೆಟ್​ನಲ್ಲಿ ಅನ್ನಭಾಗ್ಯ ಯೋಜನೆಯ ಮುಂದಿನ ಗತಿ ಏನು ಎಂಬುದು ಗೊತ್ತಾಗುತ್ತದೆ.

ಮೈಸೂರು ಸ್ಯಾಂಡಲ್ ಸೋಪ್ ಅನ್ನು ಉಚಿತವಾಗಿ ಕೊಡಲ್ಲ. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಚಿಂತಿಸಲಾಗಿದ್ದು, ಕೇಂದ್ರ ಸಚಿವ ಸದಾನಂದಗೌಡರ ಜತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಔಟ್ ಲೆಟ್ ದರದಲ್ಲಿ ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದರಲ್ಲಿ ಯಾವುದೇ ಸಬ್ಸಿಡಿ ನೀಡುವುದಿಲ್ಲ. ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರಾಜ್ಯದ 30 ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಕೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ದೊರೆಸ್ವಾಮಿಯವರು ಪಕ್ಷಾತೀತರಾಗಿ ನಡೆದುಕೊಳ್ಳಬೇಕು; ಯತ್ನಾಳ್​ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

ನಿನ್ನೆ ಆಹಾರದಲ್ಲಿ ಮಲಾಥಿನ್ ರಾಸಾಯನಿಕ ಸಿಕ್ಕಿರುವ ವಿಚಾರಕ್ಕೆ  ಪ್ರತಿಕ್ರಿಯೆ ನೀಡಿದ ಅವರು,  ರಾಜ್ಯದ ಯಾವ ಗೋಡೌನ್​ನಲ್ಲಿಯೂ ಹೀಗೆ ಮಾಡಿಲ್ಲ. ನಮ್ಮ ಇಲಾಖೆಯ ಯಾವ ಜಿಲ್ಲೆಯಲ್ಲೂ ಈ ರೀತಿ ಮಾಡಿಲ್ಲ. 6 ತಿಂಗಳ ಮೇಲ್ಪಟ್ಟು ಸಂಗ್ರಹ ಆದಾಗ ಆಹಾರವ​ನ್ನು ಪರೀಕ್ಷೆಗೆ ಕಳುಹಿಸಲಾಗುವುದು. 6 ತಿಂಗಳು ಮೇಲ್ಪಟ್ಟ ನಂತರ ಗೋಣಿಚೀಲದ ಮೇಲೆ ಸಿಂಪಡಿಸುತ್ತಾರೆ. ಟೆಸ್ಟ್ ರಿಪೋರ್ಟ್ ತರಿಸಿಕೊಂಡಿದ್ದೇವೆ. ಎಲ್ಲಾ ಲಿಮಿಟೇಷನ್​ನಲ್ಲಿದೆ. ಈ ಆಹಾರದಿಂದ ಯಾವುದೇ ಸಾವು ನೋವು  ಸಂಭವಿಸಿಲ್ಲ ಎಂದರು.
Youtube Video
First published: February 27, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories