ಕೊಟ್ಟ ಮಾತಿನಂತೆ ದಿಟ್ಟತನ ತೋರುತ್ತಿರುವ ರಾಜಾಹುಲಿ ಸಿಎಂ ಯಡಿಯೂರಪ್ಪ: ಸಚಿವ ಕೆ ಗೋಪಾಲಯ್ಯ

ಆರ್ ಆರ್ ನಗರ ಕ್ಷೇತ್ರ ಶಾಂತಿಯುತ ಕ್ಷೇತ್ರ. ಇದನ್ನೂ ಮತ್ತೊಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಆಗೋಕೆ ಬಿಡಬೇಡಿ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲೆ ದಾಳಿ ಆಯ್ತು. ಅದಕ್ಕೆ ಕಾರಣ ಅದೇ ಪಕ್ಷದ ಮತ್ತೊಬ್ಬ ನಾಯಕ. ಇದುವರೆಗೂ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ.

ಸಚಿವ ಕೆ. ಗೋಪಾಲಯ್ಯ

ಸಚಿವ ಕೆ. ಗೋಪಾಲಯ್ಯ

  • Share this:
ಬೆಂಗಳೂರು(ಅಕ್ಟೋಬರ್​. 31 ) : ಕೊಟ್ಟ ಮಾತಿನಂತೆ ದಿಟ್ಟತನ ತೋರುತ್ತಿರುವ ರಾಜಾಹುಲಿ ನಮ್ಮ ನೆಚ್ಚಿನ ನಾಯಕ ಸಿಎಂ ಯಡಿಯೂರಪ್ಪ. ನಾವು ರಾಜೀನಾಮೆ ನೀಡಿದ ಬಳಿಕವೂ ಯಡಿಯೂರಪ್ಪನವರು ಆರ್ ಆರ್ ನಗರ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಿದ್ದಾರೆ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದರು. ಆರ್​ ಆರ್​​ ನಗರ ಉಪ ಚುನಾವಣೆಯ ಲಗ್ಗೇರಿ ವಾರ್ಡ್​ನಲ್ಲಿ ರೋಡ್​​ ಶೋ ನಲ್ಲಿ ಮಾತನಾಡಿದ ಅವರು, ಡಿಸೆಂಬರ್ 5 ರಂದೇ ಚುನಾವಣೆ ನಡೀಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಆಗಲಿಲ್ಲ. 3ನೇ ತಾರೀಖು ಚುನಾವಣೆ ಇದೆ. ಲಗ್ಗೆರೆ ವಾರ್ಡಿನಿಂದ ಅತಿ ಹೆಚ್ಚು ಮತಗಳಿಂದ ಶೇ 25-30 ರಷ್ಟು ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅವರನ್ನು ವಾಪಸ್ ಕರೆಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ಇನ್ನೆರಡು ದಿನಗಳಲ್ಲಿ 9 ವಾರ್ಡ್ ಗಳಿಂದಲೂ ಹೆಚ್ಚು ಮತಗಳಿಂದ ಗೆಲ್ಲಿಸೋಣ ಕೊರೋನಾ ಸಮಯದಲ್ಲಿ ಬೇರಾವ ಪಕ್ಷಗಳೂ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಆರ್ ಆರ್ ನಗರ ಹಾಗೂ ಶಿರಾ ಎರಡೂ ಕಡೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

70 ಸಾವಿರ ಜನಸಂಖ್ಯೆ ಇರುವ ಲಗ್ಗೆರೆ ವಾರ್ಡ್​​ನಲ್ಲಿ ಒಂದೂ ಮೈದಾನ, ಉದ್ಯಾನ ಇರಲಿಲ್ಲ. ರಾಕ್ಷಸ ಹಳ್ಳವನ್ನ ಉದ್ಯಾನ, ಮೈದಾನ, ಈಜುಕೊಳ ನಮ್ಮ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ನೀತಿ ಸಂಹಿತೆ ಇಲ್ಲದಿದ್ದರೆ ಇಷ್ಟರಲ್ಲಿ ಕಾಮಗಾರಿ ಆರಂಭಿಸಬೇಕಿತ್ತು. ನಾನು ಎಷ್ಟು ಹೊತ್ತು ಮಾತಾಡಿದರೂ ಅಭಿವೃದ್ಧಿ ಬಗ್ಗೆ ಮಾತಾಡುತ್ತೇನೆ. ಆರ್ ಆರ್ ನಗರ ಕ್ಷೇತ್ರ ಶಾಂತಿಯುತ ಕ್ಷೇತ್ರ. ಇದನ್ನೂ ಮತ್ತೊಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಆಗೋಕೆ ಬಿಡಬೇಡಿ ಎಂದು ಹೇಳಿದರು.

ಇದನ್ನೂ ಓದಿ : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಆತ್ಮರತಿ ಖಾಯಿಲೆ ಇದೆ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯ ಮೇಲೆ ದಾಳಿ ಆಯ್ತು. ಅದಕ್ಕೆ ಕಾರಣ ಅದೇ ಪಕ್ಷದ ಮತ್ತೊಬ್ಬ ನಾಯಕ. ಆ ಮತ್ತೊಬ್ಬ ನಾಯಕನನ್ನು ಇದುವರೆಗೂ ಹಿಡಿಯಲು ಸಾಧ್ಯವಾಗಿಲ್ಲ. ಆ ಬಗೆಯ ರಾಜಕೀಯ ಇಲ್ಲಿ ಬಾರದಿರಲಿ. ಲಗ್ಗೆರೆ ನನ್ನಿಷ್ಟದ ಪ್ರದೇಶ, 17 ದಿನಗಳ ಕಾಲ ಇಲ್ಲಿ ಪಾದಯಾತ್ರೆ ಮಾಡಿದ್ದೇನೆ. ರಸ್ತೆ ಡಾಂಬರೀಕರಣ, ರಾಜಕಾಲುವೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಅನುಮೋದನೆ ನೀಡಿದ್ದಾರೆ ಎಂದರು.

ಪ್ರಚಾರಕ್ಕೆ ಬಂದು ಮುನಿರತ್ನ ರನ್ನ ಬೈತೀರಾ ವಿನಾ ಅಭಿವೃದ್ಧಿಯ ಬಗ್ಗೆ ಮಾತಾಡಲ್ಲ : ಅಶೋಕ್​​

ಈ ಚುನಾವಣೆ ರಾಜ್ಯ ರಾಜಕೀಯ ಬದಲಾವಣೆ ಮಾಡುವ ಚುನಾವಣೆ ಅಲ್ಲ. ಬದಲಾಗಿ ಮುಂದಿನ ಎರಡೂವರೆ ವರ್ಷಗಳ ಕಾಲ ಯಾರು ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ ಅನ್ನೋದರ ಬಗೆಗಿನ ಚುನಾವಣೆ. ಅದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಸಾಧ್ಯವಿಲ್ಲ.ಯಡಿಯೂರಪ್ಪನವರು ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ತಮ್ಮ ಚಾಣಾಕ್ಷತನದಿಂದ ಆರ್ ಆರ್ ನಗರಕ್ಕೆ 950 ಕೋಟಿ ರೂಪಾಯಿ ಅನುದಾನ ನೀಡಿಸಿದ್ದಾರೆ ಎಂದು ಸಚಿವ ಆರ್​ ಅಶೋಕ್​​ ಹೇಳಿದರು.
Published by:G Hareeshkumar
First published: