‘ಕೊಬ್ಬರಿಗೆ 11,300 ರೂ. ಬೆಂಬಲ ಬೆಲೆ‘ - ಸಚಿವ ಜೆ.ಸಿ ಮಾಧುಸ್ವಾಮಿ

ಈ ಸಂಬಂಧ ಆಯಾ ಭಾಗದಲ್ಲಿರುವ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಗತ್ಯ ಕ್ರಮಗಳನ್ನು ಕೊಳ್ಳಲು ಆದೇಶಿಸಿದ್ದೇನೆ ಎಂದರು ಸಚಿವ ಜೆ.ಸಿ ಮಾಧುಸ್ವಾಮಿ.

ಸಚಿವ ಜೆಸಿ ಮಾಧುಸ್ವಾಮಿ

ಸಚಿವ ಜೆಸಿ ಮಾಧುಸ್ವಾಮಿ

  • Share this:
ಬೆಂಗಳೂರು(ಆ.06): ಕೇಂದ್ರ ಸರ್ಕಾರ ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡುತ್ತೇವೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು. ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಜೆ.ಸಿ ಮಾಧುಸ್ವಾಮಿ, ರೈತರಿಂದ ಒಂದು ಕ್ವಿಂಟಾಲ್​ ಒಬ್ಬರಿ 11,300 ರೂಗೆ ಖರೀದಿಸುತ್ತೇವೆ ಎಂದರು.

ಇನ್ನು, ನಾನು ಮುಖ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ಮಾತಾಡಿದ್ದೇನೆ.  ಒಣಕೊಬ್ಬರಿ ಬೆಳೆಗಾರರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಖರೀದಿ ಮಾಡಬೇಕಿದೆ. ಇದರಿಂದ 38 ಕೋಟಿ ರೂ. ಸರ್ಕಾರಕ್ಕೆ ಹೊರೆಯಾಗುತ್ತದೆ. ಆದರೂ ಖರೀದಿ ಮಾಡುವ ತೀರ್ಮಾನವನ್ನು ಸರ್ಕಾರ ಮಾಡಿದೆ ಎಂದು ಜೆ.ಸಿ ಮಾಧುಸ್ವಾಮಿ.

ಕೊಬ್ಬರಿ ಖರೀದಿಗೆ ರೈತರಿಗೆ ಒಂದು ಸಾವಿರ ರೂ. ಹೆಚ್ಚಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 11,300 ರೂ. ನೀಡಿ ಕೊಬ್ಬರಿ ಖರೀದಿ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ಈ ಸಂಬಂಧ ಆಯಾ ಭಾಗದಲ್ಲಿರುವ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಗತ್ಯ ಕ್ರಮಗಳನ್ನು ಕೊಳ್ಳಲು ಆದೇಶಿಸಿದ್ದೇನೆ ಎಂದರು.

ಇದನ್ನೂ ಓದಿ: ಕೊರೋನಾ ಕುರಿತು ತಪ್ಪು ಮಾಹಿತಿ; ಟ್ರಂಪ್ ಹಂಚಿಕೊಂಡ ವಿಡಿಯೋ ನಿರ್ಬಂಧಿಸಿದ ಟ್ವಿಟರ್‌-ಫೇಸ್‌ಬುಕ್

ಇದೇ ವೇಳೆ ಮಾತಾಡಿದ ತುಮಕೂರು ಮತ್ತು ಹಾಸನದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈ ಬಗ್ಗೆ ಮೊದಲು ಸಂಪುಟ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ ಮತ್ತು ಕೆ. ಗೋಪಾಲಯ್ಯನವರು ಒಣಕೊಬ್ಬರಿ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದಕೆ ಬೆಂಬಲ‌ ಬೆಲೆ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದರ ಆಧಾರದ ಮೇರೆಗೆ ಈಗ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್​​ ಕೊಬ್ಬರಿಗೆ 10,300 ರೂಗೆ ಒಂದು ಸಾವಿರ ಸೇರಿಸಿ ಕೊಬ್ಬರಿ ಬೆಳೆಗಾರರಿಗೆ 11,300 ರೂ. ನೀಡಲು ತೀರ್ಮಾನಿಸಿದೆ ಎಂದರು.
Published by:Ganesh Nachikethu
First published: