JC Madhuswamy: ಬೆಳೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ, ವಿಮೆ ಮಾಡಿಸಿಕೊಳ್ಳಿ; ಸಚಿವ ಮಾಧುಸ್ವಾಮಿ

ರೈತರಿಗೆ ಆಗುವ ಬೆಳೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ. ರೈತರು ನೀಡುವ ಲೆಕ್ಕಾಚಾರಗಳಿಗೆಲ್ಲ ಪರಿಹಾರ ಕೊಡಲು ಸಾಧ್ಯವೇ ಎಂದು ಸಚಿವ ಮಾಧುಸ್ವಾಮಿ ಪ್ರಶ್ನೆ ಮಾಡಿದರು.

ಜೆಸಿ ಮಾಧುಸ್ವಾಮಿ

ಜೆಸಿ ಮಾಧುಸ್ವಾಮಿ

  • Share this:
ರೈತರ (Farmers) ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ (Minister JC Madhuswamy) ಹಾರಿಕೆ ಉತ್ತರ ನೀಡಿದ್ದಾರೆ. ಸಚಿವರ ಹೇಳಿಕೆಗೆ ರೈತರು ಅಸಮಾಧಾನ ಹೊರ ಹಾಕಿದ್ದಾರೆ. ಮಳೆಯಿಂದ ಬೆಳೆ (Crop loss) ನಷ್ಟವಾಗಿದ್ದರೆ ಲೆಕ್ಕ ಬರೆದುಕೊಂಡು ಪರಿಹಾರ (Relief) ನೀಡಲು ಸಾಧ್ಯವಿಲ್ಲ ಎಂದು ರೈತರ ಪರಿಹಾರ ವಿಚಾರಕ್ಕೆ ಹಾರಿಕೆ ಉತ್ತರ ನೀಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ (Madhugiri, Tumakuru) ಮಳೆಯಿಂದ ಹಾನಿಯಾಗಿರುವ ಕೆರೆಗಳ ವೀಕ್ಷಣೆಗೆ ಸಚಿವರು ಆಗಮಿಸಿದ್ದರು. ಈ ವೇಳೆ ಬೆಳೆ ನಷ್ಟದ ಪರಿಹಾರ ಮೊತ್ತ ಹೆಚ್ಚಿಸುವಂತೆ ರೈತರು ಒತ್ತಾಯಿಸಿದರು. ರೈತರ ಪ್ರಶ್ನೆಗೆ ಸಚಿವರು ನೀಡಿದ ಉತ್ತರ ಚರ್ಚೆಗೆ ಗ್ರಾಸವಾಗಿದೆ.

ರೈತರಿಗೆ ಆಗುವ ಬೆಳೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ. ರೈತರು ನೀಡುವ ಲೆಕ್ಕಾಚಾರಗಳಿಗೆಲ್ಲ ಪರಿಹಾರ ಕೊಡಲು ಸಾಧ್ಯವೇ ಎಂದು ಸಚಿವ ಮಾಧುಸ್ವಾಮಿ ಪ್ರಶ್ನೆ ಮಾಡಿದರು.

ವಿಮೆ ಮಾಡಿಸಿ ಪರಿಹಾರ ಪಡೆದುಕೊಳ್ಳಿ

ಇದರ ಹೆಸರೇ ಪರಿಹಾರ, ರೈತರಿಗಾದ ನಷ್ಟವನ್ನೆಲ್ಲ ತುಂಬಿಸಿ ಕೊಡುವುದಿಲ್ಲ. ಆಕಸ್ಮಿಕವಾಗಿ ತೊಂದರೆಯಾದಾಗ ಪರಿಹಾರವನ್ನಷ್ಟೇ ನೀಡಲಾಗುತ್ತದೆ. ವಿಮೆ ಮಾಡಿಸಿ ಆ ಮೂಲಕ ಪರಿಹಾರ ಪಡೆದುಕೊಳ್ಳಬೇಕು ಎಂದು ರೈತರಿಗೆ ಹೇಳಿದರು.

ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಗದ್ದಲ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಗದ್ದಲ ತಾರಕಕ್ಕೇರಿದೆ. ಬೆಂಗಳೂರು ಗಣೇಶೋತ್ಸವ ಸಮಿತಿ ಮತ್ತು ಪೊಲೀಸರ ನಡುವೆ ವಾಕ್ಸಮರೇ ಏರ್ಪಟ್ಟಿದೆ. ಇಂದು ಪೊಲೀಸರ ವಿರೋಧದ ನಡುವೆಯೇ ಈದ್ಗಾ ಮೈದಾನದ ಪಕ್ಕದಲ್ಲಿಯೇ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ನಿನ್ನೆ ಪೊಲೀಸರು ಮತ್ತು ಸಮಿತಿ ನಡುವೆ ಭಾರೀ ಗಲಾಟೆಯಾಗಿ ಕೆಲ ಸದಸ್ಯರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಈದ್ಗಾ ಮೈದಾನದ ಪಕ್ಕದ ಗಣೇಶ ಪ್ರತಿಷ್ಠಾಪನೆ

ಇಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಶೋಭಯಾತ್ರೆ ವಿಚಾರವಾಗಿ ನಡುವ ಗಲಾಟೆ ನಡೆದಿದೆ. ಚಾಮರಾಜಪೇಟೆ ಈದ್ಗಾ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ 2 ದಿನಗಳ 4 ನೇ ವರ್ಷದ ಅದ್ದೂರಿ ಗಣೇಶೋತ್ಸವ ನಡೆಯಲಿದೆ.

ಇದನ್ನೂ ಓದಿ:  DC Tammanna: ಸುಮಲತಾ ಬಂಡವಾಳ ನಮ್ಗೆ ಗೊತ್ತು, ಬುಡು ಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ: ಡಿ ಸಿ ತಮ್ಮಣ್ಣ

ಮೆರವಣಿಗೆಗೆ ಸಿಗದ ಅನುಮತಿ

ಸೆ.10 ರ ಮಧ್ಯಾಹ್ನ ಪಾದರಾಯನಪುರದಿಂದ ಗಣೇಶನ ಮೂರ್ತಿ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೆ.ಜೆ ಆರ್ ನಗರ, ಪಾದರಾಯನಪುರ, ಚಾಮರಾಜಪೇಟೆಯ ಮುಖ್ಯ ರಸ್ತೆಗಳ ಮುಖಾಂತರ ಮೆರವಣಿಗೆ ಸಾಗಲಿದೆ. ಮೈಸೂರು ರಸ್ತೆಯ ಮೂಲಕ ಟೌನ್ ಹಾಲ್​​ವರೆಗೆ ಅದ್ಧೂರಿ ಮೆರವಣಿಗೆ ನಡೆಸಲು ಸಮಿತಿ ಮುಂದಾಗಿದೆ. ಆದ್ರೆ ಈ ಮೆರವಣಿಗೆಗೆ ಸ್ಥಳೀಯ ಪೊಲೀಸರು ಅನುಮತಿ ನೀಡಿಲ್ಲ. ಒಂದು ವೇಳೆ ಅನುಮತಿ ನೀಡದಿದ್ದರೂ ಮೆರವಣಿಗೆ ಮಾಡಲಾಗುವುದು ಎಂದು ಸಮಿತಿ ಹೇಳಿದೆ.

Minister JC Madhuswamy given negligence answers on former flood relief mrq
ಈದ್ಗಾ ಮೈದಾನ


ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (BJP MLA Basanagowda Patil Yatnal) ಯತ್ನಾಳ್, ಟಿಪ್ಪು ಸುಲ್ತಾನ್​​​ನನ್ನು (Tipu Sultan) ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗಳಿಗೆ ಈ ಸ್ಥಿತಿ ಬಂದಿದೆ ಎಂದರು. ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಿಸ್ಥಿತಿ ಏನಾಗಿದೆ ಎಂದು ನೋಡಿ. ಟಿಪ್ಪು ಖಡ್ಗ ಪಡೆದ ವಿಜಯ್ ಮಲ್ಯ (Vijay Malya) ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೂಡ್ಯೂಸರ್ ಹಾಳಾದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ (Siddaramaiah) ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ಹೇಳಿದರು.

ಇದನ್ನೂ ಓದಿ:  Bengaluru: ಪ್ರೀತಿಸಿದ ಯುವತಿಯನ್ನ ಮದ್ವೆಯಾದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದ

ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು. ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು‌ ತಪ್ಪು. ಮದಕರಿ ನಾಯಕರು ನೂರಾರು ಎಕರೆ ಜಮೀನು ಮಠಕ್ಕೆ ನೀಡಿದ್ದಾರೆ. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು ಎಂದು ಶಾಸಕ ಯತ್ನಾಳ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Published by:Mahmadrafik K
First published: