ರೇವಣ್ಣರ ಕಾರ್ಯವನ್ನು ಸಚಿವೆ ಜಯಮಾಲಾ ಹಾಡಿ ಹೊಗಳಿದ್ಯಾಕೆ ಗೊತ್ತಾ?

Seema.R | news18
Updated:November 5, 2018, 11:48 AM IST
ರೇವಣ್ಣರ ಕಾರ್ಯವನ್ನು ಸಚಿವೆ ಜಯಮಾಲಾ ಹಾಡಿ ಹೊಗಳಿದ್ಯಾಕೆ ಗೊತ್ತಾ?
Seema.R | news18
Updated: November 5, 2018, 11:48 AM IST
ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ (ನ.05): ಸಿಎಂ ಕುಮಾರಸ್ವಾಮಿಗಿಂತ ಹೆಚ್ಚಾಗಿ ಸಚಿವ ರೇವಣ್ಣ ಸರ್ಕಾರದಲ್ಲಿ ಹೆಚ್ಚು ಅಧಿಕಾರವೊಂದಿದ್ದಾರೆ. ಅಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಇತರೆ ಸಚಿವರ ಇಲಾಖೆಗೂ ಅವರು ಮೂಗು ತೂರಿಸಿ ಅಧಿಕಾರ ಚಲಾಯಿಸುತ್ತಾರೆ ಎಂದು ಮೈತ್ರಿ ಸರ್ಕಾರದ ಪಾಲುದಾರರಾದ ಕಾಂಗ್ರೆಸ್​ ಶಾಸಕರು ಆರೋಪಿಸಿದ್ದರು. ಆದರೆ, ಇದಕ್ಕೆ ತದ್ವಿರುದ್ದವಾಗಿ ಕಾಂಗ್ರೆಸ್​ ಸಚಿವೆ ಜಯಮಾಲಾ ಸಚಿವ ರೇವಣ್ಣ ಅವರನ್ನು ಹಾಡಿಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ‌ ಸ್ವಾಮಿಗಳಿಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಹಾಸನ ನಗರವನ್ನು ನೋಡಿದರೆ ಅವರ ಕೆಲಸ ಏನೆಂದು ಅರ್ಥವಾಗುತ್ತದೆ. ನಗರವನ್ನು  ಶುಚಿಯಾಗಿ ಕಸಮುಕ್ತವನ್ನಾಗಿಸಿದ್ದಾರೆ ಎಂದು ಅವರ ಕಾರ್ಯ ಶ್ಲಾಘಿಸಿದರು.

ಸರ್ಕಾರ ಯಾವುದೇ ಇರಲಿ ಜನರು ತಮ್ಮ ಜಿಲ್ಲೆಗೆ ಇದು ಬೇಕು ಎಂದು ಮನವಿ ಮಾಡಿದರೆ ಅದನ್ನು ಈಡೇರಿಸಿಯೇ ಅವರು ತೀರುತ್ತಾರೆ. ತಮ್ಮ ಜಿಲ್ಲೆ ಬಗ್ಗೆ ಅವರು ಅಪಾರ ಅಭಿಮಾನವನ್ನು ಹೊಂದಿದ್ದಾರೆ. ಹಾಗೆಯೇ ಇಲ್ಲಿನ ಜನಕ್ಕೂ ಲೋಕೋಪಯೋಗಿ ಸಚಿವರನ್ನು ಕಂಡರೆ ಅಷ್ಟೇ ಅಕ್ಕರೆ ಇದೆ.

ಇದನ್ನು ಓದಿ: ಲಾಂಗ್​ ಹಿಡಿದು ಬಸ್​ ನಿಲ್ದಾಣದಲ್ಲಿ ಆರ್ಭಟಿಸಿದ ಮಹಿಳೆ; ಪ್ರಯಾಣಿಕರು ಕಂಗಾಲು

ಇಲ್ಲಿನ ಜನರನ್ನು ಅರ್ಥಮಾಡಿಕೊಂಡು ಅವರಿಗೆ ಬೇಕಾದನ್ನು ಮಾಡುವ ಕಿಚ್ಚು ಅವರಲ್ಲಿದೆ. ತನ್ನ ಸಮುದಾದ ಜನರು ಮಹಿಳೆ, ಮಕ್ಕಳ ಬಗ್ಗೆ ಅಪಾರ ಗೌರವ, ವಿಶೇಷ ಕಾಳಜಿ ಅವರಿಗೆ ಇದೆ.  ಮನುಷ್ಯರ ನಡುವೆ ನಂಬಿಕೆ, ದೇವರು, ಕರ್ಮಗಳಲ್ಲಿ ಅವರು ಅಪಾರ ನಂಬಿಕೆಯನ್ನು  ಹೊಂದಿದ್ದಾರೆ.  ಅವರು ಬದುಕಿರುವವರೆಗೂ ಶಾಸಕರಾಗಿರುತ್ತಾರೆ ಎಂದು  ಹಾಡಿ ಹೊಗಳಿದ್ದಾರೆ.

ಧರ್ಮ ಕರ್ಮಗಳಲ್ಲಿ ನಂಬಿಕೆ ಹೊಂದಿರುವವರು ಸೋಲುವುದಿಲ್ಲ ಎಂಬುದಕ್ಕೆ ರೇವಣ್ಣ ಉದಾಹರಣೆ. ಅವರು ಹೀಗೆ ಒಳ್ಳೆಕೆಲಸ ಮಾಡುವ ಮೂಲಕ ನಾಡಿಗೆ ಶಕ್ತಿಯಾಗಬೇಕಿದೆ ಎಂದು ಹಾರೈಸಿದರು.

ತಮ್ಮ ಮೈತ್ರಿ ಪಕ್ಷದ ಶಾಸಕರನ್ನು ಹಾಡಿಹೊಗಳುವ ಮೂಲಕ ಸಚಿವೆ ಜಯಮಾಲಾ ರೇವಣ್ಣ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದ ತಮ್ಮ ಪಕ್ಷದ ಶಾಸಕರಿಗೆ   ಟಾಂಗ್​ ನೀಡಿದರು.

First published:November 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...