HOME » NEWS » State » MINISTER JAGADISH SHETTAR SLAMS HD KUMARASWAMY FOR HIS ALLEGATION ON BJP OVER DRUGS MAFIA GNR

‘ಕಾಲಕ್ಕೆ ತಕ್ಕಂತೆ ಮಾತು ಬದಲಿಸುವ ಎಚ್​​.ಡಿ ಕುಮಾರಸ್ವಾಮಿ‘ - ಸಚಿವ ಜಗದೀಶ್​​ ಶೆಟ್ಟರ್​​

ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಸಿದ್ದರಾಮಯ್ಯ ತಂತ್ರಗಾರಿಕೆಯಿಂದ ನಮ್ಮ ಸರ್ಕಾರ ಬಿತ್ತು ಎಂದು ಎಚ್​​ಡಿಕೆ ಹೇಳಿದ್ದರು. ಈಗ ಬಿಜೆಪಿ ಡ್ರಗ್ಸ್​ ಹಣದಿಂದ ಸರ್ಕಾರ ಬೀಳಿಸಿದೆ ಎಂದು ಕಾಲಕ್ಕೆ ತಕ್ಕಂತೆ ಮಾತು ಬದಲಾಯಿಸಿದ್ಧಾರೆ ಎಂದರು ಜಗದೀಶ್​​ ಶೆಟ್ಟರ್​​.

news18-kannada
Updated:September 1, 2020, 9:32 PM IST
‘ಕಾಲಕ್ಕೆ ತಕ್ಕಂತೆ ಮಾತು ಬದಲಿಸುವ ಎಚ್​​.ಡಿ ಕುಮಾರಸ್ವಾಮಿ‘ - ಸಚಿವ ಜಗದೀಶ್​​ ಶೆಟ್ಟರ್​​
ಸಚಿವ ಜಗದೀಶ್ ಶೆಟ್ಟರ್
  • Share this:
ಯಾದಗಿರಿ(ಸೆ.01): ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಇಂದು ಯಾದಗಿರಿ ತಾಲೂಕಿನ ಕಡೇಚೂರ-ಬಾಡಿಹಾಳ ಕೈಗಾರಿಕಾ ಪ್ರದೇಶವನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ಕುಮಾರಸ್ವಾಮಿಯವರು ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ಧಾರೆ.

ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಡ್ರಗ್ ಮಾಫಿಯಾ ಹಣದಿಂದ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದೆ ಎಂಬ ಹೇಳಿಕೆ ಬಗ್ಗೆ ಸಚಿವ ಜಗದೀಶ್​ ಶೆಟ್ಟರ್​​ ಪ್ರತಿಕ್ರಿಯಿಸಿದರು. ಮೈತ್ರಿ ಸರ್ಕಾರ ಪತನವಾದ ಕೂಡಲೇ ಎಚ್​​ಡಿಕೆ ಡ್ರಗ್ಸ್​ ಬಗ್ಗೆ ಬಹಿರಂಗಪಡಿಸಬೇಕಿತ್ತು. ಇವರಿಗೆ ಇಷ್ಟು ದಿನ ನೆನಪಾಗದ ಡ್ರಗ್ಸ್​​ ಈಗ್ಯಾಕೇ ನೆನಪಾಯ್ತು ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಸಿದ್ದರಾಮಯ್ಯ ತಂತ್ರಗಾರಿಕೆಯಿಂದ ನಮ್ಮ ಸರ್ಕಾರ ಬಿತ್ತು ಎಂದು ಎಚ್​​ಡಿಕೆ ಹೇಳಿದ್ದರು. ಈಗ ಬಿಜೆಪಿ ಡ್ರಗ್ಸ್​ ಹಣದಿಂದ ಸರ್ಕಾರ ಬೀಳಿಸಿದೆ ಎಂದು ಕಾಲಕ್ಕೆ ತಕ್ಕಂತೆ ಮಾತು ಬದಲಾಯಿಸಿದ್ಧಾರೆ ಎಂದರು.

ಇನ್ನು ಡ್ರಗ್​ ಮಾಫಿಯಾದಲ್ಲಿ ಯಾರೇ ಇರಲಿ, ಅವರು ರಾಜಕಾರಣಿಗಳ ಮಕ್ಕಳೇ ಆಗಿರಲಿ. ಎಲ್ಲರ ವಿರುದ್ಧವೂ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದರು ಜಗದೀಶ್​ ಶೆಟ್ಟರ್​​.

ಸದ್ಯ ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್‌ ದಂಧೆ ದೊಡ್ಡ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೀಗ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.

ಇದನ್ನೂ ಓದಿ: ಸ್ಯಾಂಡಲ್​​​ವುಡ್ ಡ್ರಗ್ಸ್ ನಂಟು: ಇಂದ್ರಜಿತ್ ಲಂಕೇಶ್ ಮಾಹಿತಿ ಮೇರೆಗೆ ತನಿಖೆ ಆರಂಭನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ಸ್, ಬೆಟ್ಟಿಂಗ್ ಹಣ ಬಳಕೆ ಆಯ್ತು. ಈ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ಡ್ರಗ್ ಮಾಫಿಯಾವೇ ಕಾರಣ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.
Published by: Ganesh Nachikethu
First published: September 1, 2020, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories