ಆಡಿಯೋಗೆ ಯಾವುದೇ ಪುರಾವೆಗಳಿಲ್ಲ; ಹಾಗಾಗಿ ಸುಪ್ರೀಂ ಇದನ್ನು ಸಾಕ್ಷಿಯಾಗಿ ಪರಿಗಣಿಸಲ್ಲ; ಜಗದೀಶ್​ ಶೆಟ್ಟರ್​​

ನಾವು ಬಿಜೆಪಿಯಲ್ಲಿ ಒಂದಾಗಿ ಇದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಮಾಡುತ್ತಿದ್ದೇವೆ. ನಮ್ಮ ನಡುವೆ ಸಂಬಂಧ ಒಡೆಯುವ ಪ್ರಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ ಅದನ್ನು ಒಡೆಯಲು ಸಾಧ್ಯವಿಲ್ಲ

Seema.R | news18-kannada
Updated:November 5, 2019, 5:40 PM IST
ಆಡಿಯೋಗೆ ಯಾವುದೇ ಪುರಾವೆಗಳಿಲ್ಲ; ಹಾಗಾಗಿ ಸುಪ್ರೀಂ ಇದನ್ನು ಸಾಕ್ಷಿಯಾಗಿ ಪರಿಗಣಿಸಲ್ಲ; ಜಗದೀಶ್​ ಶೆಟ್ಟರ್​​
ಸಚಿವ ಜಗದೀಶ್ ಶೆಟ್ಟರ್
  • Share this:
ದೆಹಲಿ (ನ.5): ಅನರ್ಹ ಶಾಸಕರಿಗೆ ಉರುಳಾಗಲಿದೆ ಎನ್ನಲಾಗಿದ್ದ ಬಿಎಸ್​ ಯಡಿಯೂರಪ್ಪ ಆಡಿಯೋ ಕುರಿತು ಯಾವುದೇ ಪುರಾವೆಗಳಿಲ್ಲ. ಈ ಆಡಿಯೋ ಮೂಲವನ್ನು ಯಾರು ಕೂಡ ಒಪ್ಪಿಕೊಂಡಿಲ್ಲ. ಹಾಗಾಗಿ ಇದನ್ನು ಸುಪ್ರೀಂ ಕೋರ್ಟ್​ ಸಾಕ್ಷಿಯಾಗಿ ಪರಿಗಣಿಸಲ್ಲ ಎಂದು ಸಚಿವ ಜಗದೀಶ್​ ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಅನರ್ಹ ಶಾಸಕರ ಪ್ರಕರಣ ತೀರ್ಪು ನೀಡುವ ಹಂತದಲ್ಲಿದ್ದು, ಈ ಕುರಿತು ಹೆಚ್ಚಿನ ವಾದ ಬೇಡ ಎಂಬ ಸುಪ್ರೀಂಕೋರ್ಟ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂನಲ್ಲಿ ಆಡಿಯೋ ಸಾಕ್ಷಿಯಾಗಿ ಪರಿಗಣಿಸಲ್ಲ. ಇದುವರೆಗಿನ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ,

ಈ ಆಡಿಯೋವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಹೆಸರು ಇಲ್ಲದೇ ಸುಮ್ಮನೆ ಆರೋಪಿಸುತ್ತಿದ್ದಾರೆ.  ಮಾಧ್ಯಮಗಳಲ್ಲಿ ಬರುವ ವಿಡಿಯೋ ಇದಾಗಿದೆ.  ಅಲ್ಲದೇ ಈ ಆಡಿಯೋವನ್ನು ತಿರುಚಲಾಗಿದೆ ಎಂದು ಬಿಎಸ್​ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಇದಕ್ಕೆ ಯಾವುದೇ ನಿಖರ ಸಾಕ್ಷಿಯಿಲ್ಲ. ಹಾಗೇನಾದ್ರು ಇದ್ದರೆ, ಕಾಂಗ್ರೆಸ್ ಗಟ್ಟಿತನದಿಂದ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಸವಾಲು ಹಾಕಿದರು.

ನಾವು ಬಿಜೆಪಿಯಲ್ಲಿ ಒಂದಾಗಿ ಇದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಮಾಡುತ್ತಿದ್ದೇವೆ. ನಮ್ಮ ನಡುವೆ ಸಂಬಂಧ ಒಡೆಯುವ ಪ್ರಯತ್ನ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ ಅದನ್ನು ಒಡೆಯಲು ಸಾಧ್ಯವಿಲ್ಲ ಎಂದರು

ಇದನ್ನು ಓದಿ: ತೀರ್ಪಿನ ವೇಳೆ ಯಡಿಯೂರಪ್ಪ ಆಡಿಯೋ ಪರಿಗಣಿಸುತ್ತೇವೆ; ಹೆಚ್ಚಿನ ವಾದದ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

ಬಿಜೆಪಿಗೆ ಪರವಾಗಿ ಕುಮಾರಸ್ವಾಮಿ ಮಾತನಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಅವರಿಂದಲೇ ಸ್ಪಷ್ಟಿಕರಣ ಕೇಳಿ. ಅವರಾಗೆ ಬೆಂಬಲ ನೀಡಿದರೆ ನಾವ್ಯಾಕೆ ಬೇಡ ಎನ್ನೋಣ ಎಂದರು.

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ