HOME » NEWS » State » MINISTER JAGADISH SHETTAR REACTION ON SCHOOL REOPENING SESR

ಪೋಷಕರಲ್ಲಿ ಭಯ ಇದೆ; ಪ್ರಾಯೋಗಿಕವಾಗಿ ಶಾಲೆ ಆರಂಭಿಸಲಿ: ಸಚಿವ ಜಗದೀಶ್​ ಶೆಟ್ಟರ್​

School Reopening: ಮಕ್ಕಳನ್ನು ಹೊರಗೆ ಕಳುಹಿಸುವ ಬಗ್ಗೆ ಪೋಷಕರಲ್ಲಿ ಸುರಕ್ಷಿತ ಎಂಬ ಭಾವನೆ ಮೂಡಬೇಕು. ತಕ್ಷಣವೇ ಎಲ್ಲಾ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸುವುದು ಬೇಡ

news18-kannada
Updated:September 29, 2020, 3:44 PM IST
ಪೋಷಕರಲ್ಲಿ ಭಯ ಇದೆ; ಪ್ರಾಯೋಗಿಕವಾಗಿ ಶಾಲೆ ಆರಂಭಿಸಲಿ: ಸಚಿವ ಜಗದೀಶ್​ ಶೆಟ್ಟರ್​
ಸಚಿವ ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ (ಸೆ.29): ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಇನ್ನು ಭಯವಿದೆ. ಹೀಗಾಗಿ ಏಕಾಏಕಿ ಶಾಲೆ ಆರಂಭಿಸುವುದು ಬೇಡ. ಬದಲಿಗೆ ಪ್ರಯೋಗಿಕವಾಗಿ ಶಾಲೆ ಆರಂಭಿಸಿ ನೋಡಲಿ ಎಂದು ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​ ನಗರದಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಶಾಲೆಗಳ ಆರಂಭದ ಬಗ್ಗೆ ಪಾಲಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಶಾಲೆಗಳು ಆರಂಭವಾಗಲಿ ಎಂದರೆ, ಇನ್ನು ಕೆಲವರು ಶಾಲೆ ತೆರೆಯುವುದು ಬೇಡ ಎನ್ನುತ್ತಿದ್ದಾರೆ. ಶಾಲೆಗಳನ್ನು ತೆರೆಯುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವಿದೆ. ಹೀಗಾಗಿ ಮೊದಲ ಹಂತದಲ್ಲಿ ಮೂರ್ನಾಲ್ಕು ಶಾಲೆಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿ. ಈ ಮೂಲಕ ಇದರ ಸಾಧಕ ಬಾಧಕಗಳನ್ನು ನೋಡಿಕೊಂಡ ನಂತರ ಇತರೆ ಶಾಲೆಗಳನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು. 

ಮಕ್ಕಳನ್ನು ಹೊರಗೆ ಕಳುಹಿಸುವ ಬಗ್ಗೆ ಪೋಷಕರಲ್ಲಿ ಸುರಕ್ಷಿತ ಎಂಬ ಭಾವನೆ ಮೂಡಬೇಕು. ತಕ್ಷಣವೇ ಎಲ್ಲಾ ಶಾಲೆಗಳನ್ನು ಪ್ರಾರಂಭಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವರ ಪತ್ರ ಬರೆದಿರುವ ಬಗ್ಗೆ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು,  ಸಚಿವರು ಬರೆದಿರುವ ಪತ್ರ ನನಗೆ ಬಂದಿಲ್ಲ. ಈ ಕುರಿತು ನಾನು ಏನನ್ನೂ ಹೇಳುವುದಿಲ್ಲ. ಇಷ್ಟು ದಿನ ನಾವು ಅಧಿವೇಶನದಲ್ಲಿ ಇದ್ದೇವು. ಅಲ್ಲಿಯೆ ಚರ್ಚಿಸಿಬಹುದಿತ್ತು. ಆದರೆ ಈಗ ಪತ್ರ ಬರೆದರೆ ಏನ್ ಹೇಳೋದು? ಅಂತಾ ಖಾರವಾಗಿ ನುಡಿದಿದ್ದಾರೆ.

ಇದನ್ನು ಓದಿ: ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಮಾಡಿಲ್ಲ; ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಬಹಳಷ್ಟು ಕಸರತ್ತು  ಮಾಡಿ ಸರ್ಕಾರ ನಡೆಸುತ್ತಿದ್ದೇವೆ. ಹೊಸಬರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ಕೊಡಬೇಕಾಗುತ್ತದೆ.  ಜೊತೆಗೆ  ಪಕ್ಷದಲ್ಲಿನ ಹಿರಿಯರಿಗೂ ಸಂಪುಟದಲ್ಲಿ ಸ್ಥಾನ ನೀಡಬೇಕಾಗುತ್ತದೆ. ಸಚಿವ ಸಂಪುಟ ಪುನರ್‌ರಚನೆಅಥವಾ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ. ಕೊರೋನಾ ಕಾರಣದಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಅದೇ ಕಾರಣಕ್ಕೆ ಮುಖ್ಯಮಂತ್ರಿಗಳು ಎರಡ್ಮೂರು ಬಾರಿ ವರಿಷ್ಠರ ಜೊತೆ ಚರ್ಚಿಸಲು ದೆಹಲಿಗೆ ಹೋಗಬೇಕಾಗಿದೆ. ಉಳಿದಂತೆ ಯಾವುದೇ ಜಟಿಲತೆ ಇಲ್ಲ ಎಂದರು.

ಮಕ್ಕಳ ಆರೋಗ್ಯ ಮುಖ್ಯ: 

ಶಾಲೆ ಆರಂಭದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಹರೀಶ್ ಪೂಂಜಾ, ಕೊರೊನಾ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಮುಖ್ಯವಾಗಿದೆ. ಮೂರು ಹಂತದಲ್ಲಿ ಶಾಲೆಗಳನ್ನು ತೆರೆದರೆ ಉತ್ತಮ. 9 ನೇ ತರಗತಿಯಿಂದ ಪಿಯುಸಿ ವರೆಗೂ ಮೊದಲ ಹಂತದಲ್ಲಿ ತೆರೆಯುವುದು. ಆರನೇ ತರಗತಿಯಿಂದ ಎಂಟನೇ ತರಗತಿ ಎರಡನೇ ಹಂತದಲ್ಲಿ ತೆರೆಯುವುದು. ಒಂದೇ ತರಗತಿಯಿಂದ , ಆರನೇ ತರಗತಿಯ ವರೆಗೂ ಮೂರನೇ ಹಂತದಲ್ಲಿ ತೆರೆಯುವ ಯೋಚನೆ ಮಾಡಿದರೆ ಉತ್ತಮ ಎಂಬ ಸಲಹೆ ನೀಡಿದರು.ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಶಾಲೆ ತೆರೆಯುವ ಕುರಿತು ನಮಗೂ ಕೂಡ ಪತ್ರ ಸಿಕ್ಕಿದೆ. ಎರಡು ದಿನಗಳು ನಾನು ನಮ್ಮ ಕ್ಷೇತ್ರದ ನಾಯಕ ಜೊತೆಗೆ ಸಭೆ ಮಾಡುತ್ತೇನೆ. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ತೆರೆಯುವ ಬಗ್ಗೆ ಯೋಚನೆ ಮಾಡಬೇಕು ಎಂದರು.
Published by: Seema R
First published: September 29, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories