ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ ಧಾರವಾಡ ಮಾತ್ರಾನಾ?: ಸಚಿವ ಜಗದೀಶ್​​ ಶೆಟ್ಟರ್​​ಗೆ ಕನ್ನಡಿಗರ ಪ್ರಶ್ನೆ

ಈ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೋಗೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್​​, ​​ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಈ ಕೆಲಸವನ್ನು ನಾನು ಮಾಡಿದ್ದೇನೆ. ಇದಕ್ಕೆ ಶ್ಲಾಘಿಸಬೇಕೆ ಹೊರತು ಟೀಕಿಸುವುದು ಸರಿಯಲ್ಲ ಎಂದರು.

news18-kannada
Updated:February 17, 2020, 6:25 PM IST
ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ ಧಾರವಾಡ ಮಾತ್ರಾನಾ?: ಸಚಿವ ಜಗದೀಶ್​​ ಶೆಟ್ಟರ್​​ಗೆ ಕನ್ನಡಿಗರ ಪ್ರಶ್ನೆ
ಜಗದೀಶ್​ ಶೆಟ್ಟರ್
  • Share this:
ಬೆಳಗಾವಿ(ಫೆ.17): ಉತ್ತರ ಕರ್ನಾಟಕ ಅಂದರೆ ಕೇವಲ ಹುಬ್ಬಳ್ಳಿ ಧಾರವಾಡ ಮಾತ್ರಾನಾ? ಎಂಬ ಚರ್ಚೆಯೀಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಧಾರವಾಡಕ್ಕೆ ಬಹುಪಾಲು ಹೂಡಿಕೆಯಾಗುತ್ತಿದೆ. ಹಾಗಾಗಿಯೇ ಇದಕ್ಕೆ ಉತ್ತರ ಕರ್ನಾಟಕದ ಇತರ ಇತರ ಜಿಲ್ಲೆಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇನ್ವೆಸ್ಟ್​​ ಕರ್ನಾಟಕ ಮೋಸ ಎಂಬ ಅಭಿಯಾನ ಶುರು ಮಾಡುವ ಮೂಲಕ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ಹೊರಹಾಕಲಾಗುತ್ತಿದೆ.

ಹೌದು, ಇನ್ವೆಸ್ಟ್ ಕರ್ನಾಟಕದ 72 ಸಾವಿರ ಕೋಟಿ ಹೂಡಿಕೆಯಲ್ಲಿ ಕೇವಲ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ 58,060 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇನ್ನುಳಿದ ಮೊತ್ತವನ್ನು ಉತ್ತರ ಕರ್ನಾಟಕದ ಇತರ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಈ ನಡೆಗೆ ಉತ್ತರ ಕರ್ನಾಟಕದ ಇತರ ಜಿಲ್ಲೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೈಗಾರಿಕ ಸಚಿವ ಜಗದೀಶ್​​​​ ಶೆಟ್ಟರ್​​ ವಿರುದ್ಧ ಅಭಿಯಾನವೇ ಶುರು ಮಾಡಲಾಗಿದೆ.

ಈ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೋಗೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್​​, ​​ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಈ ಕೆಲಸವನ್ನು ನಾನು ಮಾಡಿದ್ದೇನೆ. ಇದಕ್ಕೆ ಶ್ಲಾಘಿಸಬೇಕೆ ಹೊರತು ಟೀಕಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ: 2 ಕೋಟಿ. ರೂ ಪರಿಹಾರ ಕೇಳಿದ ಜಾಮಿಯಾ ವಿದ್ಯಾರ್ಥಿ: ಕೇಂದ್ರ ಮತ್ತು ದೆಹಲಿ ಪೊಲೀಸರಿಗೆ ಹೈಕೋರ್ಟ್​​ ನೋಟಿಸ್​​​

'72 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಹಣ ಹರಿದು ಬರುತ್ತಿದೆ. 51 ಕಂಪನಿಗಳು ಬಂಡವಾಳ ಹೂಡಲು ತಯಾರಾಗಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಹೀಗೊಂದು ಕಾರ್ಯಕ್ರಮ ಮಾಡಿದ್ದೇವೆ. ಯಾವ ನಗರದಲ್ಲಿ ಬಂಡವಾಳ ಹೂಡಿಕೆ ಮಾಡುತ್ತೇವೋ ಅದು ಆ ನಗರಕ್ಕೆ ಮಾತ್ರ ಸೀಮಿತವಾಗಿರಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ 10 ಕಂಪನಿಗಳು ಮತ್ತು ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ಹೂಡಿಕೆ ಮಾಡಲು 11 ಕಂಪನಿಗಳು ಮುಂದೆ ಬಂದಿವೆ. ವಿಜಯಪುರ, ಹಾವೇರಿ, ದಾವಣಗೆರೆಯಲ್ಲಿ ಹೂಡಿಕೆ ಮಾಡಲು ಹೂಡಿಕೆಯಾಗಲಿದೆ. ಬೆಂಗಳೂರು ಹೊರತುಪಡಿಸಿ ಟಯರ್ 2, ಟಯರ್ 3 ಸಿಟಿಗಳಿಗೂ ಕಂಪನಿಗಳು ಬರಬೇಕು ಎಂಬುದು ನಮ್ಮ ಉದ್ದೇಶ. ಸಚಿವನಾಗಿ ಐದು ತಿಂಗಳಲ್ಲಿ ಈ ಸಾಧನೆ ಮಾಡಿದ್ದೇನೆ. ಉತ್ತರ ಕರ್ನಾಟಕ ಜ‌ನ ಇದನ್ನು ಶ್ಲಾಘಿಸಬೇಕು. ಮುಂದಿನ ಎರಡು ವರ್ಷಗಳಲ್ಲಿ ಬೆಳಗಾವಿ ಕಿತ್ತೂರು ಮತ್ತು ಧಾರವಾಡ ರೈಲು ಮಾರ್ಗಕ್ಕೆ ಚಾಲನೆ ಸಿಗಲಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರ ಅಂತಿದ್ದರು. ಆದರೀಗ ಬೆಳಗಾವಿ  ನಗರ ಸೇರಿ ತ್ರಿವಳಿ ನಗರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
First published: February 17, 2020, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading