ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ರಾಜಕೀಯ ಮಾಡೋದು ಸರಿಯಲ್ಲ; ಜಗದೀಶ ಶೆಟ್ಟರ್ ಕಿಡಿ

ಮಹದಾಯಿ ವಿವಾದ ಪರಿಹರಿಸುವ ವಿಚಾರದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ರಾಜಕೀಯ ಹೇಳಿಕೆ‌ಗಳನ್ನು ನೀಡುವುದು ಬಿಡಲಿ. ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಸರ್ವಪಕ್ಷ ಸಭೆಗೆ ಬರಲು ಆಗಿಲ್ಲ. ಸಭೆಯ ನಿರ್ಣಯಗಳಿಗೆ ಬದ್ಧ ಎಂದು ಪತ್ರ ಬರೆದಿದ್ದರು. ಈಗ ಮತ್ತೆ ಉಲ್ಟಾ ಹೊಡೆದು ರಾಜಕೀಯ ಮಾಡುತ್ತಿದ್ದಾರೆ ಎಂದರು.

news18-kannada
Updated:January 10, 2020, 4:51 PM IST
ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ರಾಜಕೀಯ ಮಾಡೋದು ಸರಿಯಲ್ಲ; ಜಗದೀಶ ಶೆಟ್ಟರ್ ಕಿಡಿ
ಸಚಿವ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಹುಬ್ಬಳ್ಳಿ (ಜ.10) : ಮಾಜಿ ಸಿಎಂ ಸಿದ್ಧರಾಮಯ್ಯ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅವರು,  ಮುಖ್ಯಮಂತ್ರಿ ಇದ್ದಾಗ ಕೇವಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಹೋರಾಟ ಮಾಡಿದರು ಎಂದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಮಹದಾಯಿ ವಿವಾದ ಪರಿಹರಿಸುವ ವಿಚಾರದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ರಾಜಕೀಯ ಹೇಳಿಕೆ‌ಗಳನ್ನು ನೀಡುವುದು ಬಿಡಲಿ. ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಸರ್ವಪಕ್ಷ ಸಭೆಗೆ ಬರಲು ಆಗಿಲ್ಲ. ಸಭೆಯ ನಿರ್ಣಯಗಳಿಗೆ ಬದ್ಧ ಎಂದು ಪತ್ರ ಬರೆದಿದ್ದರು. ಈಗ ಮತ್ತೆ ಉಲ್ಟಾ ಹೊಡೆದು ರಾಜಕೀಯ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರ ಕುರಿತು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ. ಅವರು ಕ್ಷುಲ್ಲಕ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿವಾದ ಇತ್ಯರ್ಥ ಮಾಡುವುರದ ಬಗ್ಗೆ ಚಿಂತಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಜಗದೀಶ್ ಶೆಟ್ಟರ್​ ತಿರುಗೇಟು ನೀಡಿದರು.

ನೂತನ ಸಚಿವ ಸಂಪುಟದ ವಿಸ್ತರಣೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪನವರು ಕೇಂದ್ರ ನಾಯಕರ ಜೊತೆ ಮಾತನಾಡಿ‌ ನಿರ್ಧಾರ ತೆಗೆದುಕೋಳ್ಳುತ್ತಾರೆ. ಲಿಂಗಾಯತ ಸಚಿವರನ್ನ ಸಂಪುಟದಿಂದ ಕೈ ಬಿಡುವ ವಿಚಾರದ ಕುರಿತು ಯಾವುದೇ ಆಧಾರ ರಹಿತ ಊಹಾಪೋಹಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಹೇಳಿದರು.

ಯೋಜನೆ ಜಾರಿಗೆ ಒತ್ತಾಯಿಸಿ  ಪ್ರಧಾನಿಗೆ ಒತ್ತಡ ಹೇರಲು ಸಿದ್ಧತೆ : ಹೊರಟ್ಟಿ

ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗಾಗಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಒತ್ತಡ ಹೇರಲು ಸಿದ್ಧತೆ ನಡೆದಿದೆ. ಮಹದಾಯಿ‌ ಕುರಿತು ಸರ್ವಪಕ್ಷಗಳ ಮಹತ್ವದ ಸಭೆಯಲ್ಲಿ ನಡೆದ ಚರ್ಚೆಯ ವಿಷಯಗಳನ್ನು ಬಹಿರಂಗ ಪಡಿಸಿಲ್ಲ. ಗೋವಾ ನಮ್ಮ‌ ಯೋಜನೆಗಳಿಗೆ ಅಡ್ಡಿಪಡಿಸುವ‌ ಕಾರಣ ಮಾತುಕತೆ ವಿಷಯ ಬಹಿರಂಗ ಪಡಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಇದನ್ನೂ ಓದಿ : ಮಂಗಳೂರು ಗಲಭೆ ಪೊಲೀಸರ ಸೃಷ್ಟಿ ಎಂದು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯಮಹದಾಯಿ ಉಗಮ ಸ್ಥಾನಕ್ಕೆ ಬರಲು ನಮ್ಮ ಅಧಿಕಾರಿಗಳು ಗೋವಾ ರಾಜ್ಯದ ಜನಪ್ರತಿನಿಧಿಗಳಿಗೆ ಯಾಕೆ ಅನುಮತಿ ನೀಡಿದರು? ನಮ್ಮ ಅಧಿಕಾರಿಗಳು ಮಲಗಿದ್ದಾರೆ, ಪದೇಪದೇ ಬರಲು ಯಾಕೆ ಅನುಮತಿ ಕೊಡುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ. ವಿವಾದ ಬಗೆಹರಿಸುವಂತೆ ಪ್ರಧಾನ ಮಂತ್ರಿಗಳನ್ನು ಭೇಟಿಮಾಡಿ‌ ಮನವರಿಕೆ ಮಾಡುತ್ತೇವೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ರೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಕೂಲ ವಾಗಲಿದೆ ಎಂದವರು ಹೇಳಿದ್ದಾರೆ.

First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ