HOME » NEWS » State » MINISTER JAGADEESH SHETTAR HITS OUT AT FORMER CM SIDDARAMAIAH LG

ಪ್ರಾಧಿಕಾರ ರಚನೆ ಕುರಿತಾಗಿ ಪ್ರಶ್ನೆ ಮಾಡುವ ಅರ್ಹತೆ ಸಿದ್ದರಾಮಯ್ಯನವರಿಗೆ ಇಲ್ಲ; ಜಗದೀಶ್ ಶೆಟ್ಟರ್ ವಾಗ್ದಾಳಿ

ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಹೇಳೋಕೆ‌ ಏನು ಉಳಿದಿಲ್ಲ. ಮುಖ್ಯಮಂತ್ರಿಯಾಗಿ ಐದು ವರ್ಷ ಇದ್ರಿ...? ಲಿಂಗಾಯತ ವೀರಶೈವ ಸಮೀಕ್ಷೆ ಮಾಡಿ ಭಾಗ ಮಾಡೋಕೆ ಹೋದ್ರಿ ನೀವು ಯಾವುದೇ ಸಮುದಾಯದ, ಜಾತಿ ನಿಗಮಗಳನ್ನು ಮಾಡಿಲ್ವಾ..? ಈಗ ಯಡಿಯೂರಪ್ಪ ಅವರು ಸಿಎಂ ಆಗಿದ್ದು, ನಿಗಮ ಮಾಡಿದ್ದನ್ನ ನೀವು ಪ್ರಶ್ನೆ ಮಾಡೋಕೆ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದರು.

news18-kannada
Updated:November 19, 2020, 1:42 PM IST
ಪ್ರಾಧಿಕಾರ ರಚನೆ ಕುರಿತಾಗಿ ಪ್ರಶ್ನೆ ಮಾಡುವ ಅರ್ಹತೆ ಸಿದ್ದರಾಮಯ್ಯನವರಿಗೆ ಇಲ್ಲ; ಜಗದೀಶ್ ಶೆಟ್ಟರ್ ವಾಗ್ದಾಳಿ
ಸಚಿವ ಜಗದೀಶ್ ಶೆಟ್ಟರ್
  • Share this:
ಬೆಂಗಳೂರು(ನ.19): ಪ್ರಾಧಿಕಾರ ರಚನೆ ಕುರಿತು ಸಚಿವ ಜಗದೀಶ್​ ಶೆಟ್ಟರ್ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಹೇಳೋದು ಏನೂ ಇಲ್ಲ. ಅವರು ಜಾತಿ ಸಮೀಕ್ಷೆ ಮಾಡಿ ಜಾತಿ ಒಡೆಯುವ ಕೆಲಸ ಮಾಡಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಜಾತಿಗೆ ಸೀಮಿತವಾಗಿ, ಒಂದು ಧರ್ಮಕ್ಕೆ ಸೀಮಿತವಾಗಿ ಯಾವುದೇ ಪ್ರಾಧಿಕಾರ ಮಾಡಿಲ್ವಾ? ಯಡಿಯೂರಪ್ಪ ಮರಾಠ, ಲಿಂಗಾಯತ ಪ್ರಾಧಿಕಾರ ಮಾಡಿದ್ದಾರೆ. ಈ ಬಗ್ಗೆ ಕೇಳೋದಿಕ್ಕೆ ಯಾವುದೇ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ತೀವ್ರ ಕಿಡಿಕಾರಿದ್ದಾರೆ.

ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಸಚಿವ ಜಗದೀಶ್​ ಶೆಟ್ಟರ್ ನಿರಾಕರಿಸಿದರು.  ಸಚಿವ ಸಂಪುಟ ವಿಸ್ತರಣೆ ವರಿಷ್ಠರ ವ್ಯಾಪ್ತಿಗೆ ಬರುತ್ತದೆ. ಆ ಬಗ್ಗೆ ಮುಖ್ಯ ಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ನನ್ನ ವ್ಯಾಪ್ತಿಗೆ ಬರೋದಿಲ್ಲ, ಹೀಗಾಗಿ ಆ ಬಗ್ಗೆ ನಾನು‌ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ಲಾಕ್​ಡೌನ್​​ನಲ್ಲಿ 40 ಲೀಟರ್​ ಎದೆ ಹಾಲು ದಾನ ಮಾಡಿದ ಬಾಲಿವು​ಡ್​ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ

ವಿರೋಧ ಪಕ್ಷದವರ ಸಮಾಜ ಒಡೆಯುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಆರೋಪ ವಿಚಾರವಾಗಿ,  ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಹೇಳೋಕೆ‌ ಏನು ಉಳಿದಿಲ್ಲ. ಮುಖ್ಯಮಂತ್ರಿಯಾಗಿ ಐದು ವರ್ಷ ಇದ್ರಿ...? ಲಿಂಗಾಯತ ವೀರಶೈವ ಸಮೀಕ್ಷೆ ಮಾಡಿ ಭಾಗ ಮಾಡೋಕೆ ಹೋದ್ರಿ ನೀವು ಯಾವುದೇ ಸಮುದಾಯದ, ಜಾತಿ ನಿಗಮಗಳನ್ನು ಮಾಡಿಲ್ವಾ..? ಈಗ ಯಡಿಯೂರಪ್ಪ ಅವರು ಸಿಎಂ ಆಗಿದ್ದು, ನಿಗಮ ಮಾಡಿದ್ದನ್ನ ನೀವು ಪ್ರಶ್ನೆ ಮಾಡೋಕೆ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದರು.

ರಾಜಕೀಯ ಉದ್ದೇಶದಿಂದ ನಿಗಮ‌ ಮಾಡಿದ್ದಾರೆ ಎಂಬ ವಿಚಾರವಾಗಿ ಜಗದೀಶ್​ ಶೆಟ್ಟರ್ ವಾಗ್ದಾಳಿ ನಡೆಸಿದರು. ಮರಾಠ ಬೇಡಿಕೆ‌ ಇತ್ತು. ಅದಕ್ಕೆ ಮಾಡಿದ್ದೇವೆ ನಿಗಮಗಳನ್ನು ಮಾಡುತ್ತಿರೋದು ಇವತ್ತು ಮೊದಲಲ್ಲ. ಮೊದಲಿನಿಂದಲೂ ಮಾಡ್ತಿದ್ದಾರೆ. ನಾವು ಮಾಡಿದ್ದೇವೆ ಅಷ್ಟೇ ಎಂದರು.
Published by: Latha CG
First published: November 19, 2020, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories