ತಮಿಳುನಾಡು ಜ್ಯೋತಿಷ್ಯ ನೋಡಿ ಬಜೆಟ್​ಗೆ ನಾನೇ ಟೈಂ ಫಿಕ್ಸ್​ ಮಾಡಿದ್ದೆ; ಸಚಿವ ಎಚ್.ಡಿ.ರೇವಣ್ಣ

ಎರಡು ದಿನ ಆದ ಮೇಲೆ ಟೈಮ್​ ನೋಡಿಕೊಂಡು ಸ್ಪೀಕರ್​ ನನಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದ ರೇವಣ್ಣ, ಬಜೆಟ್​ ಅಧಿವೇಶನ ಸುಗಮವಾಗಿ ನಡೆಯುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ನಾನು ಈ ಬಗ್ಗೆ ತಮಿಳುನಾಡಿನ ಜ್ಯೋತಿಷ್ಯ ನೋಡಿದ್ದೆ ಎಂದು ಹೇಳಿದರು.

HR Ramesh | news18india
Updated:February 12, 2019, 7:09 PM IST
ತಮಿಳುನಾಡು ಜ್ಯೋತಿಷ್ಯ ನೋಡಿ ಬಜೆಟ್​ಗೆ ನಾನೇ ಟೈಂ ಫಿಕ್ಸ್​ ಮಾಡಿದ್ದೆ; ಸಚಿವ ಎಚ್.ಡಿ.ರೇವಣ್ಣ
ರೇವಣ್ಣ
HR Ramesh | news18india
Updated: February 12, 2019, 7:09 PM IST
ಬೆಂಗಳೂರು: ಯಾವುದೇ ಕೆಲಸ, ಕಾರ್ಯವನ್ನು ಜ್ಯೋತಿಷ್ಯ ಕೇಳಿ ಇಲ್ಲ ವಾಸ್ತು ಪ್ರಕಾರವೇ ಮಾಡುವ ಸಚಿವ ಎಚ್.ಡಿ.ರೇವಣ್ಣ ಇಂದು ರಾಜ್ಯ ಸರ್ಕಾರದ ಪ್ರಮುಖ ಸಭೆ, ಸಮಾರಂಭಗಳನ್ನು ಇಂತಹದ್ದೆ ದಿನ, ಸಮಯದಂದು ಮಾಡಬೇಕು ಎಂದು ಅಲಿಖಿತ ನಿಯಮವನ್ನೇ ರೂಪಿಸಿದ್ದಾರೆ. ಬಜೆಟ್​ ಅನ್ನು ಕೂಡ ಇಷ್ಟೇ ಸಮಯಕ್ಕೆ ಓದಬೇಕು ಎಂದು ಸಚಿವ ರೇವಣ್ಣ ಈ ಮೊದಲೇ ತಮ್ಮ ಸಹೋದರ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು. ಅದರಂತೆ ಕುಮಾರಸ್ವಾಮಿ ಅವರು ರಾಹುಕಾಲ ಮುಗಿದ ಬಳಿಕ ಮಧ್ಯಾಹ್ನ 12.35ರ ನಂತರವೇ ಬಜೆಟ್​ ಮಂಡಿಸಿದರು.

ಬಜೆಟ್​ ಮೇಲಿನ ಚರ್ಚೆಯ ಅಧಿವೇಶನದ ಎರಡನೇ ದಿನ ಸದನದಲ್ಲಿ ಮಾತನಾಡಿದ ಸಚಿವ ರೇವಣ್ಣ, ಬಜೆಟ್​ ಸುಗಮವಾಗಿ ನೆರವೇರಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಅದಕ್ಕಾಗಿ ನಾನು ತಮಿಳುನಾಡು ಜ್ಯೋತಿಷ್ಯ ನೋಡಿ ಟೈಂ ಫಿಕ್ಸ್​ ಮಾಡಿದ್ದೆ ಎಂದು ಸದನದಲ್ಲಿ ಹೇಳುವ ಮೂಲಕ ಎಲ್ಲರನ್ನು ನಗೆಗಡಲಲ್ಲಿ ಮುಳುಗುವಂತೆ ಮಾಡಿದರು.

ಇದನ್ನು ಓದಿ: ಸಿಬಿಐ ಚೋರ್​ ಬಚಾವೋ ಸಂಸ್ಥೆ ಎಂದವರಿಗೆ ಈಗ ಅದರ ಮೇಲೆ ನಂಬಿಕೆ ಬಂದಿದೆಯೇ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಎರಡು ದಿನ ಆದ ಮೇಲೆ ಟೈಮ್​ ನೋಡಿಕೊಂಡು ಸ್ಪೀಕರ್​ ನನಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದ ರೇವಣ್ಣ, ಬಜೆಟ್​ ಅಧಿವೇಶನ ಸುಗಮವಾಗಿ ನಡೆಯುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ನಾನು ಈ ಬಗ್ಗೆ ತಮಿಳುನಾಡಿನ ಜ್ಯೋತಿಷ್ಯ ನೋಡಿದ್ದೆ ಎಂದು ಹೇಳಿದರು.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...