• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi Accident: ಸತ್ತವರು ನಮ್ಮವರಲ್ಲ, ಪರಿಹಾರ ಕೊಡೋಕೆ ಬರಲ್ಲ ಎಂದ ಹಾಲಪ್ಪ; 7 ಲಕ್ಷ ಪರಿಹಾರದ ಟ್ವೀಟ್ ಮಾಡಿದ ಸಿಎಂ

Hubballi Accident: ಸತ್ತವರು ನಮ್ಮವರಲ್ಲ, ಪರಿಹಾರ ಕೊಡೋಕೆ ಬರಲ್ಲ ಎಂದ ಹಾಲಪ್ಪ; 7 ಲಕ್ಷ ಪರಿಹಾರದ ಟ್ವೀಟ್ ಮಾಡಿದ ಸಿಎಂ

ಹಾಲಪ್ಪ ಆಚಾರ್

ಹಾಲಪ್ಪ ಆಚಾರ್

ಹುಬ್ಬಳ್ಳಿ ಬಳಿ ನಡೆದ ಅಪಘಾತದಲ್ಲಿ ಎಂಟು ಜನ ಸಾವನ್ನಪ್ಪಿದ್ದು, ಅವರು ನೆರೆ ರಾಜ್ಯದವರಾಗಿರೋದ್ರಿಂದ ಪರಿಹಾರ ಕೊಡೋಕ್ಕೆ ಬರೋಲ್ಲ ಎಂದು ಹಾಲಪ್ಪ ಆಚಾರ್ ಹೇಳಿದ್ದರೆ, ಸಿಎಂ ಏಳು ಲಕ್ಷ ಪರಿಹಾರದ ಟ್ವೀಟ್ ಮಾಡಿದ್ದಾರೆ.

  • Share this:

ಹುಬ್ಬಳ್ಳಿ - ಸತ್ತವರು ನಮ್ಮವರಲ್ಲ ಹಾಗಾಗಿ ಪರಿಹಾರ ಕೊಡೋಕೆ ಬರಲ್ಲ. ಹೀಗೆಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa Achar) ಬೇಜವಾಬ್ದಾರಿಯಾಗಿ ಮಾತನಾಡಿರುವ ವೇಳೆಯಲ್ಲಿಯೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮೃತರಿಗೆ ತಲಾ ಏಳು ಲಕ್ಷ ರೂಪಾಯಿ ಪರಿಹಾರದ ಕುರಿತು ಟ್ವೀಟ್ ಮಾಡಿದ್ದಾರೆ. ಸರ್ಕಾರದ ಪ್ರತಿನಿಧಿಗಳ ಈ ವರ್ತನೆ ಸಾರ್ವಜನಿಕರಲ್ಲಿಯೂ ಗೊಂದಲ ಮೂಡಿಸಿದೆ. ಹುಬ್ಬಳ್ಳಿ ಬಳಿ ನಡೆದ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಮಾಡಿದ ಹಾಲಪ್ಪ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹುಬ್ಬಳ್ಳಿ ಬಳಿ ನಡೆದ ಅಪಘಾತದಲ್ಲಿ (Hubballi Accident) ಮೃತಪಟ್ಟವರಿಗೆ ಪರಿಹಾರ ಕೊಡೋಕೆ ಬರಲ್ಲ. ಮೃತಪಟ್ಟವರೆಲ್ಲರೂ ಮಹಾರಾಷ್ಟ್ರಕ್ಕೆ (Maharashtra) ಸೇರಿದ್ದಾರೆ. ಅವರು ನಮ್ಮವರು ಇಲ್ಲದಿರೋದ್ರಿಂದ ಪರಿಹಾರ ಕೊಡೋಕೆ ಆಗಲ್ಲ ಎಂದು ಹೇಳಿದ್ದಾರೆ.


ಮೊನ್ನೆ ಧಾರವಾಡದಲ್ಲಿ ಮೃತಪಟ್ಟವರು ನಮ್ಮವರೇ ಆಗಿದ್ದರು. ಅಲ್ಲದೆ ಯಾವುದೇ ಇನ್ಶೂರೆನ್ಸ್ ಅವರಿಗೆ  ಅಪ್ಲೈ ಆಗ್ತಿರ್ಲಿಲ್ಲ. ಹೀಗಾಗಿ ಅವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆವು.


ಆದ್ರೆ ಇಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಹೀಗಾಗಿ ಇನ್ಶೂರೆನ್ಸ್ ಕಂಪನಿಯೇ ಪರಿಹಾರ ಕೊಡುತ್ತದೆ. ನಾವು ಕೊಡುವ ಪ್ರಶ್ನೆ ಬರಲ್ಲ. ಹಾಗೊಂದು ವೇಳೆ ಅಗತ್ಯವೆನಿಸಿದರೆ ಮುಖ್ಯಮಂತ್ರಿ ಬಳಿ ಮಾತಾಡ್ತೇನೆ ಎಂದರು.


ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ ಹಾಲಪ್ಪ ಆಚಾರ್


ಅಲ್ರೀ ಸತ್ತವರ ಬಗ್ಗೆ ನಮ್ಮವರು, ಬೇರೆಯವರೂ ಅಂತ ಲೆಕ್ಕಾ ಹಾಕ್ತಾ ಕೂತರೆ ಹೇಗೆ. ಅವರು ಮನುಷ್ಯರೇ ಅಲ್ವಾ ಅಂತ ಪತ್ರಕರ್ತರು ತಕರಾರು ತೆಗೆಯುತ್ತಿದ್ದಂತೆಯೇ ನಮ್ಮವರು, ಬೇರೆಯವರು ಅಂತ ಅಲ್ಲ. ವಿಮಾ ಕಂಪನಿಯಿಂದ ಪರಿಹಾರ ಸಿಗುತ್ತೆ ಅಂತ  ಹೇಳಿದೆ ಎಂದು ಹಾಲಪ್ಪ ಸಮಜಾಯಿಷಿ ನೀಡಿದರು.



ಹುಬ್ಬಳ್ಳಿ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಜನ ಸಾವನ್ನಪ್ಪಿ, 24 ಜನ ಗಾಯಗೊಂಡಿದ್ದರು. ಧಾರವಾಡ ಬಳಿ ನಡೆ ಕ್ರೂಷರ್ ಅಪಘಾತದಲ್ಲಿ ಒಂಬತ್ತು ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಮೃತರಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರ ಘೋಷಿಸಿತ್ತು.


ಇದನ್ನೂ ಓದಿ:  Sorry ಅಂತ ಇಡೀ ಊರೆಲ್ಲ ಬರೆದ ಪಾಗಲ್ ಪ್ರೇಮಿ! ಕೊನೆಗೆ ಕ್ಷಮಿಸಿದಳಾ ಆ ಬೆಳದಿಂಗಳ ಬಾಲೆ?


ಹಾಲಪ್ಪ ಹೇಳಿಕೆ ಬೆನ್ನ ಹಿಂದೆಯೇ ಸಿಎಂ ಟ್ವೀಟ್


ಸತ್ತವರು ನಮ್ಮವರಲ್ಲ, ಪರಿಹಾರ ಕೊಡೋಕ್ಕೆ ಬರೋಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ ಬೆನ್ನ ಹಿಂದೆಯೇ ಮೃತರಿಗೆ ಪರಿಹಾರದ ಕುರಿತ ಸಿಎಂ ಟ್ವೀಟ್ ಗಮನ ಸೆಳೆದಿದೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮೃತರ ಕುಟುಂಬಕ್ಕೆ ತಲಾ 7 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.


ಪರಿಹಾರ ಘೋಷಿಸಿ ಸಿಎಂ ಟ್ವೀಟ್


ಪರಿಹಾರ ಘೋಷಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅದನ್ನು ಟ್ವೀಟ್ ಮಾಡಿದ್ದಾರೆ. ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಟ್ವೀಟ್ ಮಾಡಿದ್ದಾರೆ. ಸಂಜೆಯಷ್ಟೇ ಪರಿಹಾರ ಕೊಡೋಕ್ಕೆ ಬರಲ್ಲ ಎಂದು ಹಾಲಪ್ಪ ಆಚಾರ್ ಹೇಳಿದ್ದರು. ಇದೀಗ ಸಿಎಂ ಬೊಮ್ಮಾಯಿಯೇ ಪರಿಹಾರ ಘೋಷಿಸಿ ಟ್ವೀಟ್ ಮಾಡಿದ್ದಾರೆ. ಸರ್ಕಾರದ ಪ್ರತಿನಿಧಿಗಳ ದ್ವಂದ ನಿಲುವಿಗೆ ಜನತೆ ಅಚ್ಚರಿ ವ್ಯಕ್ತಪಡಿಸಿದೆ.


ಲಿಂಗರಾಜ್ ಪಾಟೀಲ್ ಗೆ ಟಿಕೇಟ್ ತಪ್ಪಿದ್ದಕ್ಕೆ ಹಾಲಪ್ಪ ಸಮಜಾಯಿಷಿ


ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲಗೆ ಕೊನೆ ಘಳಿಗೆಯಲ್ಲಿ ಪರಿಷತ್ ಟಿಕೆಟ್ ಕೈತಪ್ಪಿರೋದಕ್ಕೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ. ಅವರಿಗೆ ಮುಂದೆಯೂ ಅವಕಾಶಗಳು ಸಿಗುತ್ತೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅಭಿಪ್ರಾಯಪಟ್ಟದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವಂತೆ ಬೆಂಗಳೂರಿಗೆ ಕರೆಯಿಸಿ ಕೊನೆ ಘಳಿಗೆಯಲ್ಲಿ ಲಿಂಗರಾಜ್ ಪಾಟೀಲ್ ಅವರಿಗೆ ಟಿಕೆಟ್ ತಪ್ಪಿದ್ದರ ಕುರಿತು ಪ್ರತಿಕ್ರಿಯಿಸಿದರು. ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ಅನ್ನವನ್ನು ಪ್ರತಿಬಾರಿಯೂ ತೋರಿಸಿಕೊಟ್ಟಿದ್ದೇವೆ.


ಇದನ್ನೂ ಓದಿ:  Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ


10 ವರ್ಷದಿಂದ ಬಿಜೆಪಿಯಲ್ಲಿ ಮಹಿಳೆ ಕೆಲಸ


ತಳಮಟ್ಟದಿಂದ ಬೆಳೆದವರನ್ನು ಬಿಜೆಪಿ ಗುರುತಿಸುತ್ತಿದೆ. ರಾಜ್ಯಸಭೆ ಸದಸ್ಯರ ಆಯ್ಕೆಯಲ್ಲೂ ಇದನ್ನು ಮಾಡಲಾಗಿತ್ತು. ಇದೀಗ ಪರಿಷತ್ ಟಿಕೆಟ್ ನಲ್ಲಿಯೂ ಸಾಮಾನ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ. ಕೊಪ್ಪಳದಲ್ಲಿ ಆಯ್ಕೆ ಮಾಡಿರುವ ಮಹಿಳೆ ಕಳೆದ ಹತ್ತು ವರ್ಷಗಳಿಂದ ಬಿಜೆಪಿಗಾಗಿ ದುಡಿಯುತ್ತಿದ್ದಾಳೆ. ಆ ಮಹಿಳೆಗೆ ಯಾವುದೇ ಹಿನ್ನೆಲೆಯಿಲ್ಲ, ಹೀಗಾಗಿ ಆ ಮಹಿಳೆಗೆ ಅವಕಾಶ ಮಾಡಿಕೊಡಲಾಗಿದೆ.


ಅವಕಾಶಗಳು ನಿರಂತರವಾಗಿ ಬರುತ್ತಿರುತ್ತವೆ


ಎಲ್ಲಾ ವಿಭಾಗಕ್ಕೂ ಒಂದೊಂದು ಟಿಕೆಟ್ ಕೊಡಬೇಕೆಂದು ನಿರ್ಧಾರವಾಗಿತ್ತು. ಅದರ ಪ್ರಕಾರ ಈ ವಿಭಾಗದಲ್ಲಿ ಬೆಳಗಾವಿಗೆ ಟಿಕೆಟ್ ನೀಡಲಾಗಿದೆ. ಕಲಬುರಗಿ ವಿಭಾಗದಲ್ಲಿ ಕೊಪ್ಪಳ ಮಹಿಳೆಗೆ ಟಿಕೆಟ್ ನೀಡಲಾಗಿದೆ. ಲಿಂಗರಾಜ್ ಪಾಟೀಲರಿಗೆ ಇದೇನು ಕೊನೆ ಅವಕಾಶವಲ್ಲ. ಅವಕಾಶಗಳು ನಿರಂತರವಾಗಿ ಬರುತ್ತವೆ. ದುಡಿದಂತಹ ಕಾರ್ಯಕರ್ತರಿಗೆ ಬಿಜೆಪಿ ಎಂದೂ ಕೈ ಬಿಡಲ್ಲ ಎಂದು ಹಾಲಪ್ಪ ಆಚಾರ್ ತಿಳಿಸಿದ್ದಾರೆ.

top videos
    First published: