ನೆಲಮಂಗಲ(ಆಗಸ್ಟ್. 25): ಮುಂಬರುವ ಒಂದು ವಾರದಲ್ಲಿ ಪಬ್, ಬಾರ್, ಕ್ಲಬ್ಗಳು ತೆರೆಯುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ತಿಳಿಸಿದ್ದಾರೆ. ಅವರು ನೆಲಮಂಗಲದ ಯುನೈಟೆಡ್ ಬ್ರಿವೆರೀಸ್ ಅಂಡ್ ಡಿಸ್ಟಿಲರೀಸ್ಗೆ ಅಬಕಾರಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದ ವೇಳೆ ಈ ವಿಚಾರ ಹೇಳಿದ್ದಾರೆ.
ಕ್ಲಬ್ಗಳಲ್ಲಿ ಕ್ರೀಡಾ ಚಟುವಟಿಗಳು ಇಂದಿನಿಂದ ಶುರುವಾಗಿವೆ. ಊಟ ಹಾಗೂ ಡ್ರಿಂಕ್ಸ್ ಕ್ಯಾರಿ ಮಾಡುವ ಪದ್ದತಿ ಇದೆ. ಎಲ್ಲಾ ಕಡೆ ಅಲ್ಲೇ ಕುಳಿತುಕೊಳ್ಳಲು ಅನುಮತಿ ಕೊಟ್ಟಿದ್ದೀರಿ. ಅದೇ ರೀತಿ ಕ್ಲಬ್ಗಳಲ್ಲೂ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಅನುಮತಿ ನೀಡುತ್ತಾರೆ ಎನ್ನುವ ಆಶಾಭಾವನೆ ಇದೆ ಎಂದರು.
ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ಬರಬೇಕಾದ ಆದಾಯದಲ್ಲಿ ಅರ್ಧದಷ್ಟು ಕಡಿಮೆಯಾಗಿರುವ ಬಗ್ಗೆ ಮಾತನಾಡಿ, ನಮ್ಮ ಇಲಾಖೆಯಲ್ಲಿ 3000 ಕೋಟಿ ಆದಾಯ ಖೋತಾ ಆಗಿದೆ. ಈಗ ನಷ್ಟ ಎರಡು ಸಾವಿರ ಕೋಟಿಗೆ ಬಂದು ನಿಂತಿದೆ. ಇನ್ನು 8 ತಿಂಗಳಲ್ಲಿ ನಷ್ಟ ಸರಿದೂಗಿಸಬೇಕು. ಬಾರ್, ಕ್ಲಬ್ಗಳು ಆರಂಭಿಸಿ ಸಭೆ ಸಮಾರಂಭಗಳು ಎಲ್ಲ ಶುರುವಾದರೆ ಮಾರಾಟ ಹೆಚ್ಚಾಗುತ್ತದೆ. ಆಗ ಸರ್ಕಾರದ ಬೊಕ್ಕಸಕ್ಕೆ ಹಣ ಬರುತ್ತದೆ. ಅದರ ಬಗ್ಗೆ ನಾವು ಅಧಿಕಾರಿಗಳೊಡನೆ ನಿರಂತರ ಸಭೆ ನಡೆಸುತ್ತಿದ್ದೇವೆ. ನಮ್ಮ ಮುಂದೆ 25 ಸಾವಿರ ಕೋಟಿ ಟಾರ್ಗೆಟ್ ಇದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ಕರ್ನಾಟಕ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ; ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮದ್ಯಮಾರಾಟ :
ಬೇರೆ ರಾಜ್ಯಗಳಲ್ಲಿ ಪ್ರಯೋಗಿಕವಾಗಿ ಆನ್ಲೈನ್ ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳನ್ನ ನೇಮಕ ಮಾಡಿ ಈ ಯೋಜನೆ ಎಷ್ಟು ಯಶಸ್ವಿಯಾಗಿದೆ, ಜನರ ಅನಿಸಿಕೆ ಹೇಗಿದೆ, ಇದರ ಸಾಧಕ ಬಾಧಕಗಳ ಪರಿಶೀಲನೆ ಮಾಡಿ ವರದಿ ನೀಡಲು ಆಯುಕ್ತರಿಗೆ ಸೂಚಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಯೋಜನೆ ಯಶಸ್ವಿಯಾಗಿ ಜನಗಳು ಒಪ್ಪಿಕೊಂಡ್ರೆ ಇಲ್ಲಿಯೂ ಜನರಿಗೆ ಇದರ ಬಗ್ಗೆ ತಿಳಿಸಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ