ನನಗೆ 7th ಸೆನ್ಸ್ ಇದೆ; ನಾನು ಹೇಳಿದಾಗೆ ಬಿಜೆಪಿ 12 ಸೀಟು ಗೆದ್ದಿದೆ; ಸಚಿವ ಎಚ್​​. ನಾಗೇಶ್​​

ರಾಜ್ಯದ ಜನರಿಗೆ ಬಿಜೆಪಿ ಪರ ಒಲವಿದೆ ಎಂಬುದು ಉಪಚುನಾವಣೆಯಲ್ಲಿ ಸಾಬೀತಾಗಿದೆ. ನನ್ನ ಅಬಕಾರಿ ಇಲಾಖೆ ಕೈತಪ್ಪುವ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ. ಹಾಗೇನಾದರೂ ಮುಂದೆ ಆದರೆ ನೋಡೋಣ ಎಂದು ಎಚ್​​ ನಾಗೇಶ್​​​ ತಿಳಿಸಿದರು.

news18-kannada
Updated:December 12, 2019, 3:36 PM IST
ನನಗೆ 7th ಸೆನ್ಸ್ ಇದೆ; ನಾನು ಹೇಳಿದಾಗೆ ಬಿಜೆಪಿ 12 ಸೀಟು ಗೆದ್ದಿದೆ; ಸಚಿವ ಎಚ್​​. ನಾಗೇಶ್​​
ಸಚಿವ ಹೆಚ್.​ ನಾಗೇಶ್​
  • Share this:
ಕೋಲಾರ(ಡಿ.12): "ನನಗೆ 6th ಮತ್ತು 7th ಸೆನ್ಸ್​ ಜಾಸ್ತಿಯಿದೆ. ನಾನು ಹೇಳಿದಂತೆಯೀಗ ಭಾರತೀಯ ಜನತಾ ಪಕ್ಷವೂ ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಹನ್ನೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ" ಎಂದು ಅಬಕಾರಿ ಇಲಾಖೆ ಸಚಿವ ಎಚ್. ನಾಗೇಶ್ ಹೇಳಿಕೆ ನೀಡಿದ್ದಾರೆ.

ಇಂದು ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಮಾತಾಡಿದ ಸಚಿವ ಎಚ್​​. ನಾಗೇಶ್​​​, ನಮ್ಮದೀಗ ಪೂರ್ಣ ಪ್ರಮಾಣ ಸರ್ಕಾರ. ಒಂದು ಡಜನ್​​(12) ಶಾಸಕರು ಗೆದಿದ್ದಾರೆ. ಸುಭದ್ರ ಸರ್ಕಾರಕ್ಕಾಗಿ ನಾನು ಬಿಜೆಪಿಗೆ ಬೆಂಬಲಿಸಿದ್ದೇನೆ. ಈ ಮೊದಲೇ ನಾನು ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ಈಗ ಬಿಜೆಪಿ 15 ಕ್ಷೇತ್ರಗಳ ಪೈಕಿ 12ರಲ್ಲಿ ಗೆಲುವು ದಾಖಲಿಸಿದೆ ಎಂದು ಸಂತಸಪಟ್ಟರು.

ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ಬಿಜೆಪಿ 118 ಶಾಸಕರನ್ನು ಹೊಂದಿದೆ. ಮುಂದೆ ಎದುರಾಗಲಿರುವ ಇನ್ನೆರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಗೆಲ್ಲುತ್ತೇವೆ. ಆಗ ನಮ್ಮ ಶಾಸಕರ ಸಂಖ್ಯಾಬಲ 120 ಆಗಲಿದೆ ಎಂದರು.

ಉಪಚುನಾಣೆಯಲ್ಲಿ ಗೆದ್ದಿರುವ 12 ಶಾಸಕರು ಸಚಿವ ಸ್ಥಾನ ನೀಡಲು ಸಿಎಂ ಬಿ.ಎಸ್​ ಯಡಿಯೂರಪ್ಪ ಚಿಂತಿಸಿದ್ದಾರೆ. ಸೋತವರಿಗೂ ಸಚಿವ ಸ್ಥಾನ ನೀಡಲು ತೀರ್ಮಾನ ತೆಗೆದುಕೊಂಡಿದ್ದಾರೆ. 15ಕ್ಕೆ 15 ಕ್ಷೇತ್ರವೂ ಗೆಲ್ಲುವುದು ಕಷ್ಟ. ಆಸ್ಪತ್ರಗೆ ಹೋಗುವ ನೂರು ಜನ ಬದುಕಿ ಬರುತ್ತಾರೆ ಎಂದು ಹೇಳಲಿಕ್ಕಾಗುವುದಿಲ್ಲ ಎನ್ನುತ್ತಾರೆ ಸಚಿವ ಆಚ್. ನಾಗೇಶ್​​.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ; 2 ದಿನಗಳ ಭಾರತದ ಪ್ರವಾಸ ಮೊಟಕುಗೊಳಿಸಿದ ಬಾಂಗ್ಲಾ ವಿದೇಶಾಂಗ ಸಚಿವ

ರಾಜ್ಯದ ಜನರಿಗೆ ಬಿಜೆಪಿ ಪರ ಒಲವಿದೆ ಎಂಬುದು ಉಪಚುನಾವಣೆಯಲ್ಲಿ ಸಾಬೀತಾಗಿದೆ. ನನ್ನ ಅಬಕಾರಿ ಇಲಾಖೆ ಕೈತಪ್ಪುವ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ. ಹಾಗೇನಾದರೂ ಮುಂದೆ ಆದರೆ ನೋಡೋಣ ಎಂದು ತಿಳಿಸಿದರು.

ಡಿಸೆಂಬರ್​​ 5ನೇ ತಾರೀಕಿನಂದು ನಡೆದ ರಾಜ್ಯ ವಿಧಾನಸಭಾ ಉಪಚುನಾವಣೆ ಫಲಿತಾಂಶವೂ ಡಿ.9ರಂದೇ ಹೊರ ಬಿದ್ದಿದೆ. ಬಿಜೆಪಿ 12 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ಭದ್ರಪಡಿಸಿಕೊಂಡಿದೆ. ಕನಿಷ್ಠ 9 ಕ್ಷೇತ್ರಗಳಲ್ಲಿ ಗೆಲುವು ಕಾಣುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದ ಕ್ಷೇತ್ರಗಳು ಪಕ್ಷದ ಕೈ ತಪ್ಪಿವೆ.
First published: December 12, 2019, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading