HOME » NEWS » State » MINISTER H NAGESH HITS OUT AT OPPOSITION PARTY LEADERS IN KOLAR RRK LG

ನನಗೆ ರಾಜಕೀಯ ಗೊತ್ತಿಲ್ಲ ಅನ್ಕೊಂಡಿದಾರೆ; ಆದ್ರೆ ಈಗ ನನ್ನಾಟ ಶುರುವಾಗಿದೆ; ಸಚಿವ ಎಚ್​.ನಾಗೇಶ್

ಕೆಲವರು ಅಪಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು. ಅವರು ಯಾರು? ಅವರ ಕಥೆ ಏನೆಂದು  ಮುಳಬಾಗಿಲಿನಲ್ಲಿ ಈಗ ಗೊತ್ತಾಗಿದೆ. ನಾನು ಏನೆಂದು ಎಲ್ಲರಿಗೂ ತೋರಿಸಿದ್ದೇನೆ, ನಾನು ಏನೂ ಹೇಳಿ ಮಾಡೋನಲ್ಲ, ಯಾಕೆಂದರೆ ನಾನು ಉಪೇಂದ್ರ ಎ ಸಿನಿಮಾಹಾಗೆ ಸಸ್ಪೆನ್ಸ್  ಉಳ್ಳವನು ಎಂದು ಹೇಳಿದರು.

news18-kannada
Updated:November 2, 2020, 1:14 PM IST
ನನಗೆ ರಾಜಕೀಯ ಗೊತ್ತಿಲ್ಲ ಅನ್ಕೊಂಡಿದಾರೆ; ಆದ್ರೆ ಈಗ ನನ್ನಾಟ ಶುರುವಾಗಿದೆ; ಸಚಿವ ಎಚ್​.ನಾಗೇಶ್
ಅಬಕಾರಿ ಸಚಿವ ಎಚ್.ನಾಗೇಶ್
  • Share this:
ಕೋಲಾರ(ನ.02): ಕೋಲಾರ ಜಿಲ್ಲಾ ಉಸ್ತುವಾರಿ ಹಾಗು ಅಬಕಾರಿ ಸಚಿವ ನಾಗೇಶ್ ಮೊದಲ ಬಾರಿಗೆ ತಮ್ಮ ರಾಜಕೀಯ ಒಡನಾಡಿ ಕೊತ್ತೂರು ಮಂಜುನಾಥ್ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.  ಅಲ್ಲದೆ ಕೋಲಾರ ಸಂಸದರ ವಿರುದ್ದವು ಮೊದಲ ಬಾರಿಗೆ ಬಹಿರಂಗವಾಗಿ ಕಿಡಿಕಾರಿದ್ದಾರೆ. ಈ ಮೂಲಕ ತಾವು ಎಲ್ಲವನ್ನು ಎದುರಿಸಲು ಸಿದ್ದ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ‌. ಮುಳಬಾಗಿಲು ನಗರಸಭೆ ಅಧ್ಯಕ್ಷ್ಯ, ಉಪಾಧ್ಯಕ್ಷ  ಚುನಾವಣೆ ವೇಳೆ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಸಚಿವರ ವಿರುದ್ಧ ನಗರಸಭೆ ಎದುರೇ ಧಿಕ್ಕಾರಗಳನ್ನ ಕೂಗಿ ಪ್ರತಿಭಟನೆಗೆ ಮುಂದಾಗಿದ್ದರು. ಜನರು ಅವರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದು, ಚುನಾವಣೆ ದಿನ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಇಷ್ಟಾದರೂ ಸಚಿವ ನಾಗೇಶ್ ಯಾವುದೇ ಪ್ರತಿಕ್ರಿಯೆ ನೀಡದೆ ಮನೆಗೆ ವಾಪಾಸ್ ತೆರಳಿದ್ದರು. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಸಚಿವರು, ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಕೀಳಾಗಿ ವರ್ತಿಸಿದ್ದಾರೆ ಎಂದರು.

ಉಪೇಂದ್ರ 'ಎ' ಸಿನಿಮಾ ಹಾಗೆ ನಾನು ಸಾಕಷ್ಟು ಸಸ್ಪೆನ್ಸ್ ಕೊಡುವಂತಹ ಗುಣ ಇರುವವನು. ನಾನು ಮಾಡೋದು ಕಡೆವರೆಗೂ ರಹಸ್ಯವಾಗಿಯೇ ಇರುತ್ತೆ. ಮುಳಬಾಗಿಲು ನಗರಸಭೆ ಅಧ್ಯಕ್ಷ್ಯ ಉಪಾಧ್ಯಕ್ಷ್ಯರಾಗಿ ಆಯ್ಕೆಯಾಗಿರುವರು ನನ್ನ ಬೆಂಬಲಿಗರೇ, ನಾನೇ ಅವರ ಆಯ್ಕೆಗೆ ಬೆಂಬಲ ನೀಡಿದೆ, ಎಲ್ಲಾ ನಾಯಕರ ಒಮ್ಮತದಿಂದ  ಇದೆಲ್ಲಾ ಸಾಧ್ಯವಾಯಿತು, ಈ ಮೂಲಕ ಮುಳಬಾಗಿಲು ತಾಲೂಕಿನ ಕೆಲ ಮುಖಂಡರ ಬಣ್ಣ ಬಯಲಾಗಿದೆ. ಕೆಲವರು ಅಪಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು. ಅವರು ಯಾರು? ಅವರ ಕಥೆ ಏನೆಂದು  ಮುಳಬಾಗಿಲಿನಲ್ಲಿ ಈಗ ಗೊತ್ತಾಗಿದೆ. ನಾನು ಏನೆಂದು ಎಲ್ಲರಿಗೂ ತೋರಿಸಿದ್ದೇನೆ, ನಾನು ಏನೂ ಹೇಳಿ ಮಾಡೋನಲ್ಲ, ಯಾಕೆಂದರೆ ನಾನು ಉಪೇಂದ್ರ ಎ ಸಿನಿಮಾಹಾಗೆ ಸಸ್ಪೆನ್ಸ್  ಉಳ್ಳವನು ಎಂದು ಹೇಳಿದರು.

Mysuru Dasara 2020: ಈ ಬಾರಿಯ ಸರಳ ದಸರಾಗೆ ಖರ್ಚಾದ ಹಣ ಎಷ್ಟು?; ಇಲ್ಲಿದೆ ಸಚಿವರು ಕೊಟ್ಟ ಲೆಕ್ಕ..!

ಕೊತ್ತೂರು ಮಂಜುನಾಥ್, ಎಸ್ ಮುನಿಸ್ವಾಮಿ ವಿರುದ್ದ ಕಿಡಿ.

ಸಚಿವ ಎಚ್ ನಾಗೇಶ್ ಅವರು ಕೇವಲ 11 ದಿನದಲ್ಲೆ ಮುಳಬಾಗಿಲು ಪಕ್ಷೇತರ ಶಾಸಕರಾಗಿ ಆಯ್ಕೆಯಾಗಲು, ಮಾಜಿ ಶಾಸಕ  ಕೊತ್ತೂರು ಮಂಜುನಾಥ್ ಅವರ ಪರಿಶ್ರಮ ಅತ್ಯಮೂಲ್ಯವಾದದ್ದು. ಆದರೆ ಚುನಾವಣೆ ನಂತರ  ನಾಗೇಶ್ ಹಾಗೂ ಕೊತ್ತೂರು ಮಂಜುನಾಥ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ. ಆದರೆ ಇಷ್ಟು ದಿನ  ಕೊತ್ತೂರು ಮಂಜುನಾಥ್ ವಿರುದ್ದ ಮಾತನಾಡದ ಸಚಿವರು, ಇದೀಗ ವಾಗ್ದಾಳಿ ಆರಂಭಿಸಿದ್ದಾರೆ, ನಾನು ಆಯ್ಕೆಯಾದ ಮೊದಲ 2 ವರ್ಷ ಅವರು ಹೇಳಿದಂತೆ ನಡೆದಿದ್ದೆ, ನನ್ನನ್ನ ಓವರ್ ಟೇಕ್ ಮಾಡುವ ಸಾಕಷ್ಟು ಕೆಲಸ ಮಾಡಿದ್ದಾರೆ, ಮಗುವಿಗೆ ಊಟವಿಟ್ಟು ಬೆಳೆಸಿದ್ದಾರೆಂದು, ಬೆಳೆದವನಿಗೆ ಕಿರುಕುಳ ಕೊಟ್ಟರೆ ಯಾರು ಸಹಿಸಲ್ಲ ಎಂದು ಕೊತ್ತೂರು ವಿರುದ್ದ ಬಹಿರಂಗವಾಗಿ ಕಿಡಿಕಾರಿದ್ದಾರೆ.

ಇನ್ನು ಸಂಸದ ಎಸ್ ಮುನಿಸ್ವಾಮಿ ಇತ್ತೀಚಿಗೆ ಸಚಿವ ನಾಗೇಶ್ ಅವರು ಕೊತ್ತೂರು ಮಂಜುನಾಥ್​​ರನ್ನ ಮರೆಯಬಾರದು ಎಂದಿದ್ದರು, ಇದಕ್ಕೆ ತಿರುಗೇಟು ನೀಡಿರುವ ಸಚಿವರು, ಸಂಸದ ಮುನಿಸ್ವಾಮಿ ವಿರುದ್ದವೇ ತಿರುಗಿಬಿದ್ದಿದ್ದಾರೆ, ನಾನೊಬ್ಬ ಮಂತ್ರಿ, ನನಗೂ ಬೆಲೆಯಿದೆ. ನಾವೇನು ಹೂಳಾ ಪಾರ್ಟಿಯಲ್ಲ. ಏನೋ ಸಂಬಂಧಿ, ಸ್ನೇಹಿತ ಮನೋಭಾವದಿಂದ ಎಲ್ಲಾ ಟೀಕೆಗಳನ್ನು ಮನ್ನಿಸಿದ್ದೇನೆ, ಇನ್ನು ಒಂದು ವರ್ಷ ನೋಡ್ತೇನೆ, ಹಾಗೆ ಇದ್ದರೆ ನಾನೇನು ಮಾಡೋಕೆ ಆಗಲ್ಲ ಎಂದ ಸಂಸದ ಮುನಿಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.

ನಾನು ಕಾಲೇಜಿನಲ್ಲೆ ಯೂತ್ ಲೀಡರ್, ರಾಜಕೀಯ ನನಗೂ ಗೊತ್ತಿದೆ.ಮುಳಬಾಗಿಲು ಕ್ಷೇತ್ರದಲ್ಲಿ ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ನನಗ್ಯಾರು ರಾಜಕೀಯ ವಿರೋಧಿಗಳು ಇಲ್ಲ, ಆದರೆ ನನ್ನಿಂದ ದೂರವಿರುವ  ಕೆಲವರು ನನನ್ನು ಮಣಿಸಲು ಪ್ರಯತ್ನ ಮಾಡ್ತಿದ್ದಾರೆ, ನನಗೂ ಎಲ್ಲವು ಗೊತ್ತಿದೆ, ಕಾಲೇಜಿನಲ್ಲೇ ನಾನು ಲೀಡರ್ ಆಗಿದ್ದವನು,  ತಂತ್ರಗಾರಿಕೆ ಮಾಡೋದು ನನಗೂ ಗೊತ್ತಿದೆ, ಎಲ್ಲವನ್ನು ಹೇಳಿ ಮಾಡಲ್ಲ ನಾನು ಆಟ ಆರಂಭಿಸಿದ್ದೇನೆ,  ಪ್ರೊಡಕ್ಷನ್ ನಂದೆ, ಡೈರೆಕ್ಷನ್ ನಂದೆ, ಉಪೇಂದ್ರ 'ಎ' ಸಿನಿಮಾ ಹಾಗೆ ಪ್ರತಿ ಸೀನ್​ನಲ್ಲೂ ನನ್ನದು ಸಸ್ಪೆನ್ಸ್ ಇರುತ್ತೆ ಕಾದು ನೋಡಿ ಎಂದರು.

ಒಟ್ಟಿನಲ್ಲಿ ಮುಳಬಾಗಿಲು ತಾಲೂಕಿನಲ್ಲಿ ರಾಜಕೀಯ ನಾಯಕರ ಮಧ್ಯೆ ಪ್ರತಿಷ್ಟೆ ರಾಜಕಾರಣ ಆರಂಭವಾಗಿದ್ದು, ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್, ಕೊತ್ತೂರು ಮಂಜುನಾಥ್ ಮೈತ್ರಿಯನ್ನ ತಡೆಯುವ ಮೂಲಕ ಸಚಿವ ಎಚ್ ನಾಗೇಶ್ ಇದೀಗ ಚರ್ಚೆಯಲ್ಲಿದ್ದಾರೆ. ಆದರೆ ಈ ತಂತ್ರಗಾರಿಕೆ ಸಾಧ್ಯವಾದದ್ದು  ಜೆಡಿಎಸ್ ನಲ್ಲಿ‌ನ ಒಳಜಗಳದಿಂದಲೇ ಎನ್ನುವುದು ಗುಟ್ಟಾಗಿಯೇನು ಉಳಿದಿಲ್ಲ.
Published by: Latha CG
First published: November 2, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories