Mekedatu Padayatreಗೆ ಮತ್ತೊಂದು ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಬಿಜೆಪಿ!

ಕಾಂಗ್ರೆಸ್ ನಾಯಕರು (Congress Leaders) ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ (Mekedatu Padayatre) ಮತ್ತೊಂದು ದಾಖಲೆ ಬಿಡುಗಡೆ ಮಾಡುವ ಬಿಜೆಪಿ (BJP) ಟಾಂಗ್ ನೀಡಿದೆ.

ಸಚಿವ ಗೋವಿಂದ ಕಾರಜೋಳ

ಸಚಿವ ಗೋವಿಂದ ಕಾರಜೋಳ

  • Share this:
ಬಾಗಲಕೋಟೆ: ಕಾಂಗ್ರೆಸ್ ನಾಯಕರು (Congress Leaders) ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ (Mekedatu Padayatre) ಮತ್ತೊಂದು ದಾಖಲೆ ಬಿಡುಗಡೆ ಮಾಡುವ ಬಿಜೆಪಿ (BJP) ಟಾಂಗ್ ನೀಡಿದೆ. ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Minister Govind Karjol), ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ದಾಖಲೆ ಬಿಡುಗಡೆ ಮಾಡಿ ಟಾಂಗ್ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಮೇಕೆದಾಟು ಗಿಮಿಕ್ ಮಾಡುತ್ತಿದ್ದೀರಿ. ಮೇಕೆದಾಟು ಯೋಜನೆ ಬಗ್ಗೆ ಬೆಂಗಳೂರಿನಲ್ಲಿ ಈಗಾಗಲೇ ದಾಖಲೆ ಬಿಡುಗಡೆ ಮಾದಿದ್ದೇನೆ. ಇವತ್ತೂ ಕೂಡ ಮತ್ತೊಂದು ವಿಷಯ ಹೇಳ್ತೀನಿ, ನಾನು ಇವತ್ತೂ ಪೂರ್ಣ ವಿಷಯ ಹೇಳೋದಿಲ್ಲ. ಅವರು ಏನೇನು ಮಾಡ್ತಾರೋ ಮಾಡಲಿ ಎಂದರು. 

12/11/2014ರಂದು ಅನುಮೋದನೆ ನೀಡಿದರು ಯೋಜನೆ ಯಾಕೆ ಪ್ರಾರಂಭ ಮಾಡಲಿಲ್ಲ..! 

2014ರಲ್ಲೇ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾನೂನು ಸಲಹೆ ಪಡೆದು ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ. ಅದರ ದಾಖಲೆ ನೀಡುತ್ತಿದ್ದೇನೆ. ದಾಖಲೆಯಲ್ಲಿ ಏನಿದೆ ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಬೇಕು. ದಾಖಲೆ ಓದಿ ಹೇಳುತ್ತೇನೆ ಎಂದ ಕಾರಜೋಳ. 12/11/2014ರಂದು ಅನುಮೋದನೆ ನೀಡಿದರು ಯೋಜನೆ ಯಾಕೆ ಪ್ರಾರಂಭ ಮಾಡಲಿಲ್ಲ. ಬರೀ ಡಿಪಿಆರ್ ಮಾಡಲಿಕ್ಕೆ ನಾಲ್ಕು ವರ್ಷ ತಗೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

ಇನ್ನು ಇವತ್ತು ನೋಡಿದ್ದೀನಿ ಜಾಹೀರಾತು ಕೊಟ್ಟಿದ್ದಾರೆ.. ಅವರಿಗೆ ಅದೇ ರೀತಿ ಉತ್ತರ ಕೊಡ್ತೇನೆ. ಈಗ ಟೂರ್ ನಲ್ಲಿ ಇದ್ದೇನೆ ಮುಗಿದ ಬಳಿಕ ಉತ್ತರ ಕೊಡ್ತೇನೆ. ಆಡಳಿತ ಮಾಡುವವರಿಗೆ ಕನಿಷ್ಠ ಜ್ಞಾನ ಇರಬೇಕಾಗುತ್ತೆ. ಪಿಎಫ್ ಆರ್ ಮೊದಲು ಕಳಿಸಬೇಕೋ? ಡಿಪಿಆರ್ ಮೊದಲು ಕಳಿಸಬೇಕೋ? ಅನ್ನೋದು ಜ್ಞಾನ ಇರಬೇಕು.

ಇವರು ಡಿಪಿಆರ್ ಕಳಿಸಿಕೊಡ್ತಾರೆ ಕೇಂದ್ರದವರು ಡಿಪಿಆರ್ ನ್ನ ವಾಪಸ್ ಕಳಿಸುತ್ತಾರೆ. ನೀವು ಕಳಿಸಬೇಕಿರುವುದು ಡಿಪಿಆರ್ ಅಲ್ಲ. ಪಿಎಫ್ ಆರ್ ಎಂದು ಕೇಂದ್ರ ಸರ್ಕಾರ ಹೇಳುತ್ತೆ. ಪೂರ್ವ ಸಿದ್ಧತಾ ವರದಿ ಸಲ್ಲಿಸಬೇಕು. ಯಾವುದೇ ಪ್ರಾಜೆಕ್ಟ್ ತೆಗೆದುಕೊಳ್ಳಬೇಕಾದರೆ, ಇದು ಯೋಗ್ಯ ಇದೆ ಅಂತ ಪರಿಶೀಲನೆ ಆಗಬೇಕಾಗುತ್ತೆ. ಅದಕ್ಕೆ ಒಂದು ವರದಿ ಕೊಡಬೇಕು. ಆದ್ರೆ, ಇವರು ಅದನ್ನೇ ಕೊಡದೇ ಡ್ರಾಮಾ ಮಾಡಿ, ಡಿಪಿಆರ್ ಕಳಿಸಿದರೆ, ನಿಮಗೆ ಆಡಳಿತ ಮಾಡುವವರಿಗೆ ಏನು ಎನ್ನಬೇಕು ನಾವು ಎಂದು ದಾಖಲೆ ಬಿಡುಗಡೆ ಮಾಡಿ ಟಾಂಗ್ ನೀಡಿದ್ರು.

ಸಿದ್ದರಾಮಯ್ಯಗೆ ತೀವ್ರ ಜ್ವರ – ಕಾರಜೋಳ ಕಳವಳ!

ಇದೇ ವೇಳೆ ಮಾತನಾಡಿದ ಕಾರಜೋಳ, ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಹನ್ನೆರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರು ರಾಜಕೀಯ ಹೋರಾಟಕ್ಕಾಗಿ, ತಮ್ಮೊಳಗಿನ ನಾಯಕತ್ವದ ಪೈಪೋಟಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  Mekedatu Padayatra: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಖರ್ಗೆ, ಸಿದ್ದರಾಮಯ್ಯ

ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಮಾಡುವ ಪ್ರಾಮಾಣಿಕ ಪಾದಯಾತ್ರೆ ಅಲ್ಲ. ನಾನು ಇವತ್ತು ಕೂಡ ಕಾಂಗ್ರೆಸ್ ನ ಪ್ರತಿಪಕ್ಷದ ನಾಯಕರಿಗೆ ವಿನಂತಿ ಮಾಡುತ್ತೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೆಚ್ಚು ಜನ ಸೇರಬಾರದು ಎಲ್ಲರೂ ಮಾಸ್ಕ್ ಧರಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ.

ಆ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ನಮ್ಮ ಸರ್ಕಾರ ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ನಿನ್ನೆ ನನಗೆ ಬಹಳ ಆತಂಕವಾಯ್ತು. ಮಾಜಿ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಹಿಂದುಳಿದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ತೀವ್ರ ಜ್ವರ ಕಾಣಿಸಿಕೊಂಡು ವಾಪಸ್ಸಾದರು. ನಾನು ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ. ಅವರು ಆರೋಗ್ಯದ ಕಡೆ ಗಮನ ಕೊಡಬೇಕು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದರು.

ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ

ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಗೋವಿಂದ್ ಕಾರಜೋಳ ಅವರ ಜಲಸಂಪನ್ಮೂಲ ಸಚಿವರಾಗಲು ಅರ್ಹರಲ್ಲ ಎಂದು ಹೇಳಿಕೆ ನೀಡಿದ್ದರು. ನನ್ನ ಬಗ್ಗೆ ಮಾತನಾಡೋವಾಗ ಎಚ್ಚರಿಕೆಯಿಂದ ಮಾತನಾಡಿ.

ನೀವು ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ. ಎಂ.ಬಿ.ಪಾಟೀಲ್ ಅವರಿಗೆ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದೇ ಹೊಟ್ಟೆ ಉರಿ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ವಿಧಾನಸೌಧ ಮೆಟ್ಟಿಲೇರಿದವನು ಎಂದು ತಿರುಗೇಟು ನೀಡಿದರು.

ವರದಿ : ಮಂಜುನಾಥ್ ತಳವಾರ
Published by:Mahmadrafik K
First published: