Govind Karjol: ಕಾಂಗ್ರೆಸ್ ಭವಿಷ್ಯ ನುಡಿದ ಸಚಿವ ಗೋವಿಂದ್ ಕಾರಜೋಳ

ಕಾಂಗ್ರೆಸ್ ನವರಿಗೆ ೭೫ ವರ್ಷಗಳ ಆಡಳಿತದಲ್ಲಿ ಅವರ ಸಾಧನೆ ಶೂನ್ಯ. ಏನಾದ್ರೂ ಸಾಧನೆ ಮಾಡಿದ್ದೀವಿ ಅಂತ ಹೇಳೋದಕ್ಕೆ ಅವರಲ್ಲಿ ಏನೂ ಇಲ್ಲ. ಅದರಲ್ಲಿ ವಿಶೇಷವಾಗಿ ೧೦ ವರ್ಷಗಳ ಮನಮೋಹನ್ ಸಿಂಗ್ ಕಾಲದಲ್ಲಿ ಏನೂ ಮಾಡೋಕೆ ಆಗಿಲ್ಲ

 ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

  • Share this:
ಬಾಗಲಕೋಟೆ: ಸಚಿವ ಗೋವಿಂದ್ ಕಾರಜೋಳ (Minister Govind Karjol) ಮುಂದಿನ ಎರಡ್ಮೂರು ವರ್ಷಗಳಲ್ಲಿ ಕಾಂಗ್ರೆಸ್ (Congress) ಹೇಗಿರುತ್ತೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಯುಕೆಪಿ ಯೋಜನೆ (Upper Krishna Project) ಪೂರ್ಣ ಮಾಡಿ ನೀರು ಕೊಡಿಸುವೆ ಎಂದು ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಹೇಳಿದ್ದರು. 6336 ಕೋಟಿ ರೂಪಾಯಿ ಯುಕೆಪಿ ೩ನೇ ಹಂತದ ಕಾಮಗಾರಿಗೆ ಕಾಂಗ್ರೆಸ್ ಕೊಟ್ಟಿಲ್ಲ. ಕಾಂಗ್ರೆಸ್ ನವರು ಯುಕೆಪಿ ೩ನೇ ಹಂತದ ಕಾಮಗಾರಿ ಏನು ಮಾಡಿಲ್ಲ. ನಾವು 2012-13 ರಲ್ಲಿ ಯುಕೆಪಿ ೩ನೇ ಹಂತದ ಆರ್ ಆ್ಯಂಡ್ ಆರ್ ಅಭಿವೃದ್ಧಿಗೆ 17 ಸಾವಿರ 207 ಕೋಟಿ ರೂ ಅನುಮೋದನೆ ನೀಡಿದ್ದೇವೆ ಎಂದು ಹೇಳಿದರು.

ಮೂರನೇ ಹಂತದ ಕಾಮಗಾರಿಯಲ್ಲಿ ಕಾಲುವೆ ಕೆಲಸ ಹಾಗೂ ಯುಕೆಪಿ ೩ನೇ ಹಂತದ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇವುಗಳನ್ನ ಆವತ್ತು ಮಾಡಿದ್ರ ಇಂದು 60 ಸಾವಿರ ಕೋಟಿಗೆ ಹೋಗುತ್ತಿರಲಿಲ್ಲ. ಕಾಂಗ್ರೆಸ್ ನವರು ಕೆಲಸ ಮಾಡದಿರೋದ್ರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಗೋವಿಂದ್ ಕಾರಜೋಳ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕೈಯಲ್ಲಿ ಏನೂ ಮಾಡೋಕೆ ಆಗಿಲ್ಲ

ಪೆಟ್ರೋಲ್ ದರ ಇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೋವಿಂದ್ ಕಾರಜೋಳ, ಕಾಂಗ್ರೆಸ್ ನವರಿಗೆ ೭೫ ವರ್ಷಗಳ ಆಡಳಿತದಲ್ಲಿ ಅವರ ಸಾಧನೆ ಶೂನ್ಯ. ಏನಾದ್ರೂ ಸಾಧನೆ ಮಾಡಿದ್ದೀವಿ ಅಂತ ಹೇಳೋದಕ್ಕೆ ಅವರಲ್ಲಿ ಏನೂ ಇಲ್ಲ. ಅದರಲ್ಲಿ ವಿಶೇಷವಾಗಿ ೧೦ ವರ್ಷಗಳ ಮನಮೋಹನ್ ಸಿಂಗ್ ಕಾಲದಲ್ಲಿ ಏನೂ ಮಾಡೋಕೆ ಆಗಿಲ್ಲ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ:  ಬೆಲೆ ಏರಿಕೆ ಬಳಿಕ Hotel Food ಹೊಸ ದರ ಪಟ್ಟಿ ಹೀಗಿದೆ; ಪರಿಷ್ಕೃತ Auto Fare ಕೂಡ ಎಷ್ಟಾಗಿದೆ ನೋಡಿ!

ಕಾಂಗ್ರೆಸ್ ನಾಯಕರಿಗೆ ಯಾವುದೇ ಸಾಧನೆ ಮಾಡದೇ ಇರೋದರಿಂದ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದಂತಹದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪಗಳನ್ನು ತಳ್ಳಿ ಹಾಕಿದರು.

ಕಾಂಗ್ರೆಸ್ ಭವಿಷ್ಯ ನುಡಿದ ಗೋವಿಂದ್ ಕಾರಜೋಳ

ಕಾಂಗ್ರೆಸ್ ನವರು ಈ ರೀತಿ ಗಿಮಿಕ್ ಮಾಡಿದರಿಂದಲೇ ದೇಶದ ೨೬ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ. ಮುಂದಿನ ಚುನಾವಣೆಯಲ್ಲಿ ಇನ್ನುಳಿದ ಒಂದೆರಡು ರಾಜ್ಯಗಳಲ್ಲೂ ಕಾಂಗ್ರೆಸ್ ಮುಕ್ತ ಆಗುತ್ತೆ. ಪ್ರಧಾನ ಮಂತ್ರಿ ನರೇಂದ್ರ‌‌ ಮೋದಿ ೭ ವರ್ಷಗಳ ಹಿಂದೆ ದೇಶ ಕಾಂಗ್ರೆಸ್ ಮುಕ್ತ ಆಗುತ್ತೆ ಅಂತಾ ಹೇಳಿದ್ದರು. ಆ ಕಾಲ ಬಹಳ ದೂರ ಇಲ್ಲ ಸನಿಹದಲ್ಲಿದೆ. ಅದು ಆಗಲಿಕ್ಕೆ ಒಂದು ವರ್ಷ ಕಾಯಿರಿ ಎಂದು  ಕಾಂಗ್ರೆಸ್ ಭವಿಷ್ಯ ನುಡಿದರು.

ಇದನ್ನೂ ಓದಿ:  ಅರಸು ನಂತರ ನಾನೊಬ್ಬನೇ 5 ವರ್ಷ ಮುಖ್ಯಮಂತ್ರಿ ಆಗಿದ್ದೆ ಅಂತ ಅವರಿಗೆಲ್ಲಾ ಹೊಟ್ಟೆಕಿಚ್ಚು: Siddaramaiah

ತೈಲ ಬೆಲೆಯಲ್ಲಿ ಇಳಿಕೆ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್ (Petrol And Diesel Price)‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 5 ರೂ ಕಡಿಮೆ ಆದರೆ, ಡೀಸೆಲ್ ಮೇಲಿನ ಸುಂಕದಲ್ಲಿ 10 ರೂ ಕಡಿತಗೊಂಡಿದೆ.

ಆಟೋ ದರ ಏರಿಕೆ

ಮೊದಲ 2 kmಗೆ 30 ರೂಪಾಯಿ ನಿಗದಿ ಮಾಡಲಾಗಿದೆ.  ನಂತರದ ಪ್ರತಿ km ಗೆ 15 ರೂಪಾಯಿ ಏರಿಕೆಯಾಗುತ್ತದೆ.  ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿರಲಿದೆ.  ಐದು ‌ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ. ಚಾರ್ಜ್ ಮಾಡಲಾಗುತ್ತದೆ.

ಡಿಸೆಂಬರ್ 1ರಿಂದ ಹೊಸ ದರ ಅನ್ವಯವಾಗಲಿದೆ. ಹೊಸ ದರಕ್ಕೆ ತಕ್ಕಂತೆ 90 ದಿನಗಳೊಳಗಾಗಿ ಮೀಟರ್ ಬದಲಿಸಿಕೊಳ್ಳಲು ಆಟೋ ಚಾಲಕರಿಗೆ ಅವಕಾಶ ನೀಡಲಾಗಿದೆ. ಕೊರೊನಾ ಹಿನ್ನೆಲೆ ಬಹುತೇಕ ಆಟೋ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ದರವನ್ನು ಹೆಚ್ಚಿಸಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದರು.
Published by:Mahmadrafik K
First published: