ಬಜೆಟ್​ನಲ್ಲಿ Mekedatu Project ಘೋಷಣೆ ಕುರಿತು ಪರೋಕ್ಷ ಸುಳಿವು ನೀಡಿದ ಸಚಿವ ಕಾರಜೋಳ

ಮೇಕೆದಾಟು ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ಕೊರೊನಾ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಹಂತದಲ್ಲಿ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪಾದಯಾತ್ರೆ ಕಾರಣವಾಗಿದೆ.

ಸಚಿವ ಗೋವಿಂದ ಕಾರಜೋಳ

ಸಚಿವ ಗೋವಿಂದ ಕಾರಜೋಳ

 • Share this:
  ಮೇಕೆದಾಟು ಯೋಜನೆ (Mekedatu Project) ಕುರಿತು ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆ ರಾಜಕಾರಣದ ಉದ್ದೇಶಕ್ಕಾ ಅಥವಾ ನಾಯಕತ್ವದ ವಿಚಾರಕ್ಕ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govinda Karjol) ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನ ಎರಡನೇ ಹಂತದ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ (Basavaraja Bommai Government) ಸರ್ಕಾರದ ಜಲಸಂಪನ್ಮೂಲ ಇಲಾಖೆಗೆ ಆದ್ಯತೆ ನೀಡಿದೆ. ಇನ್ನೆರಡು ದಿನಗಳಲ್ಲಿ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಆಗ ಯಾವ್ಯಾವ ಯೋಜನೆಗೆ ಏನೇನು ಸಿಗಲಿದೆ ಎಂಬುದು ಸ್ಪಷ್ಟವಾಗಿ ಆಗಲಿದೆ. ಸರ್ಕಾರ ಜಲಸಂಪನ್ಮೂಲ ಇಲಾಖೆಯಿಂದ ಮಾಡಬೇಕಾದ ಎಲ್ಲಾ ಕೆಲಸಗಳ ಕುರಿತು ಮಾಹಿತಿ ಸಿಗಲಿದೆ ಎನ್ನುವ ಮೂಲಕ ಬಜೆಟ್​ನಲ್ಲಿ ಮೇಕೆದಾಟು ಯೋಜನೆ ಕುರಿತು ಮಹತ್ವದ ವಿಷಯ ಘೋಷಿಸುವ ಕುರಿತು ಪರೋಕ್ಷ ಸುಳಿವನ್ನು ನೀಡಿದರು.

  ಹಠಕ್ಕೆ ಬಿದ್ದು ಪಾದಯಾತ್ರೆ

  ಕಾಂಗ್ರೆಸ್​ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿದೆ. ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಅವರು ನಿರ್ಧರಿಸಿದ್ದಾರೆ. ಈ ಬಾರಿ ರಣದೀಪ್ ಸುರ್ಜೇವಾಲ ಅವರನ್ನು ಕರೆಸಿ  ಪ್ರಾರಂಭಿಸಿರುವುದು ವಿಶೇಷ. ತಮ್ಮ ಅಧಿಕಾರ ಅವಧಿಯಲ್ಲಿ ಈ ಯೋಜನೆ ಕುರಿತು ಏನನ್ನೂ ಮಾಡದ ಕಾಂಗ್ರೆಸ್​ ಇದೀಗ ಪಾದಯಾತ್ರೆ ಮೂಲಕ ಜನರಿಗೆ ಮೋಸ ಮಾಡಲು ಮುಂದಾಗಿದ್ದಾರೆ. ತಮ್ಮ ನಾಯಕತ್ವಕ್ಕಾಗಿ ಇದನ್ನು ಮಾಡುತ್ತಿದ್ದಾರೆ. 2023 ರ ಚುನಾವಣೆಗೆ ನಾಯಕನಿಲ್ಲದ ಮನೆಯಂತೆ ಆಗಿದೆ ಕಾಂಗ್ರೆಸ್​​. 2023 ರ ಚುನಾವಣೆ ನಂತರ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಡ್ರೆಸ್ ಕೂಡ ಇರುವುದಿಲ್ಲ ಎಂದ ವಾಗ್ದಾಳಿ ನಡೆಸಿದರು.

  ಪಾದಯಾತ್ರೆ ಉದ್ಧೇಶ ಸ್ಪಷ್ಟಪಡಿಸಿ
  2008 ರಿಂದ 2013 ರವರೆಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಕಾಂಗ್ರೆಸ್‌ನ ನಡೆಗೆ, ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. 5,94,000 ಲಕ್ಷ ಹೆಕ್ಟೇರ್‌ಗೆ ನೀರು ಕೊಡುತ್ತೇವೆ ಎಂದಿದ್ದರು. ಆದರೆ, ವರ್ಷದಲ್ಲಿ 2300 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. ಪ್ರತಿ ವರ್ಷ 10 ಸಾವಿರ ಕೋಟಿ ಕೃಷ್ಣೆಗೆ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ, ಅದನ್ನು ಮಾಡಿಲ್ಲ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈ ಮೋಸದಾಟವನ್ನು ಕಾಂಗ್ರೆಸ್​ ನಿಲ್ಲಿಸಬೇಕು. ಕೃಷ್ಣೆಯ ನೀರಿನ ಬಳಕೆ ಕುರಿತಂತೆ ಮಾಡಿದ್ದ ಪ್ರಮಾಣ ಏನಾಯಿತು ಎಂದು ಉತ್ತರಿಸುವ ಜೊತೆಗೆ ಈ ಪಾದಯಾತ್ರೆ ಮಾಡುವ ಉದ್ದೇಶ ಸ್ಪಷ್ಟಪಡಿಸಬೇಕಿದೆ ಎಂದರು.

  ಇದನ್ನು ಓದಿ: ಶೀತದಿಂದ ಬಳಲುತ್ತಿದ್ದ ಎರಡು ತಿಂಗಳ ಮಗು ಸಾವು

  ಸತ್ಯ ಹೇಳಿದ್ರೆ  ಸಿಟ್ಟು
  ಸಿಂದಗಿ ಉಪ-ಚುನಾವಣೆಯಲ್ಲಿ ಗೋವಿಂದ ಕಾರಜೋಳ ಹೊಟ್ಟೆ ಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದಿದ್ದರು. ರಮೇಶ್ ಜಿಗಜಿಣಗಿ ಕೂಡ ಅವರ ಕಡೆ ಹೋಗಿದ್ದಾರೆ ಎಂದರು. ಈ ರೀತಿ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಹಾಗೇ ಮಾತನ್ನಾಡಬಾರದು. ನಾವು ಬಡವರು ಇರಬಹುದು. ನಾವು ಅವರ ಜೊತೆಗೆ ಇದ್ದವರು. ಈಗ ಅಲ್ಲಿಂದ ಹೊರ ಬಂದಿದ್ದೇವವೆ ಎನ್ನುವ ಮಾತ್ರಕ್ಕೆ ಸುಳ್ಳುಗಳನ್ನು ಹೇಳಬಾರದು. ಜನರು ಕೂಡ ಅವರ ಸುಳ್ಳುಗಳನ್ನು ನಂಬಬಾರದು. ಅವರಿಗೆ ಉತ್ತರ ಕೊಡಲು ನಾನು ಇಂದು ಬಂದಿದ್ದೇನೆ. ನಾನು ಸತ್ಯ ಹೇಳಿದ್ರೆ ಕಾಂಗ್ರೆಸ್​ನವರಿಗೆ ಸಿಟ್ಟು ಬರುತ್ತದೆ ಎಂದು ಕಿಡಿಕಾರಿದರು.

  ಇದನ್ನು ಓದಿ:  ಸರ್ಕಾರದ ನಿರ್ಲಕ್ಷ್ಯದಿಂದ ನವೀನ್​ ಸಾವು ಎಂದ Siddaramaiah; ರಕ್ಷಣಾ ಕಾರ್ಯ ಚುರುಕಿಗೆ HDK ಒತ್ತಾಯ

  ಶ್ರೀನಿವಾಸ್​​ ಪೂಜಾರಿ ಲೇವಡಿ

  ಇನ್ನು ಈ ಕಾಂಗ್ರೆಸ್​ ಪಾದಯಾತ್ರೆ ಕುರಿತು ಸಚಿವ ಶ್ರೀನಿವಾಸ್​​ ಪೂಜಾರಿ ಕೂಡ ಟೀಕಿಸಿದ್ದಾರೆ. ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಪಾದಯಾತ್ರೆ. ಕೃಷ್ಣ ಮೇಲ್ದಾಂಡೆ ಯೋಜನೆ ಕುರಿತು ಅವರು ಆಡಿದ ಮಾತುಗಳನ್ನು ಅಧಿಕಾರಕ್ಕೆ ಬಂದ ಮೇಲೆ  ಪೂರ್ಣ ಮಾಡಲೇ ಇಲ್ಲ. ಮೇಕೆದಾಟು ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ಕೊರೊನಾ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಹಂತದಲ್ಲಿ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪಾದಯಾತ್ರೆ ಕಾರಣವಾಗಿದೆ. ಕಾಂಗ್ರೆಸ್ ಸದನಕ್ಕೆ ಬಂದು ಈ ಯೋಜನೆಯ ಕುರಿತಾಗಿ ಚರ್ಚೆ ನಡೆಸಲಿ. ಸದನವನ್ನು ಬಹಿಷ್ಕರಿಸಿ ಕಾಂಗ್ರೆಸ್ ಏನನ್ನೂ ಸಾಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
  Published by:Seema R
  First published: