ಸಿದ್ದರಾಮಯ್ಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್​​ನಿಂದ ಜನಾಂದೋಲನ; ಸಚಿವ ಈಶ್ವರಪ್ಪ ಟೀಕೆ

ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಜಲಪ್ರವಾಹ ಹಾನಿ ಸೃಷ್ಟಿಯಾಗಿದೆ. ಆ ರಾಜ್ಯಗಳು ಕೂಡ ಪರಿಹಾರ ನಿರೀಕ್ಷೆಯಲ್ಲಿದ್ದು, ಎಲ್ಲ ರಾಜ್ಯಗಳಲ್ಲಿ ಪರಿಹಾರ ಘೋಷಣೆ ಸಂದರ್ಭದಲ್ಲಿ ರಾಜ್ಯಕ್ಕೂ ಕೂಡ ಪರಿಹಾರವನ್ನು ಕೇಂದ್ರ ಘೋಷಿಸಲಿದೆ.

Seema.R | news18-kannada
Updated:September 19, 2019, 12:12 PM IST
ಸಿದ್ದರಾಮಯ್ಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್​​ನಿಂದ ಜನಾಂದೋಲನ; ಸಚಿವ ಈಶ್ವರಪ್ಪ ಟೀಕೆ
ಸಚಿವ ಕೆ.ಎಸ್​. ಈಶ್ವರಪ್ಪ
  • Share this:
ದಾವಣಗೆರೆ (ಸೆ.19): ಕಾಂಗ್ರೆಸ್​ನಲ್ಲಿ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವೆ ತಿಕ್ಕಾಟ ಆರಂಭವಾಗಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ತಮ್ಮ ಅಸ್ತಿತ್ವಕ್ಕಾಗಿ ಜನಾಂದೋಲನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಟೀಕಿಸಿದ್ದಾರೆ. 

ರಾಜ್ಯದಲ್ಲಿ ಉದ್ಭವಿಸಿರುವ ಬರ ಮತ್ತು ನೆರೆ ಕುರಿತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕುರಿತು ಪ್ರದೇಶವಾರು ಜನಾಂದೋಲನಕ್ಕೆ ಮುಂದಾಗಿರುವ ಕಾಂಗ್ರೆಸ್​ ಕ್ರಮಕ್ಕೆ ಟೀಕಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ನೆರೆ ಕುರಿತು ಸೂಕ್ತ ಕ್ರಮ ಕೈಗೊಂಡಿದೆ. ಸಂತ್ರಸ್ತರಿಗೆ ಬೇಕಾದ ಅವಶ್ಯಕತೆಗಳ ಕುರಿತು ಸಮರೋಪಾದಿಯಲ್ಲಿ ಕಾರ್ಯ ನಡೆಯುತ್ತಿವೆ

ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಕೇಂದ್ರದ ತಂಡಗಳು ಕೂಡ ಸಮೀಕ್ಷೆ ಮುಗಿಸಿದ್ದು, ಕೇಂದ್ರ ಸರ್ಕಾರ ಶೀಘ್ರದಲ್ಲಿ ಪರಿಹಾರ ಘೋಷಣೆ ಮಾಡಲಿದೆ.

ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಜಲಪ್ರವಾಹ ಹಾನಿ ಸೃಷ್ಟಿಯಾಗಿದೆ. ಆ ರಾಜ್ಯಗಳು ಕೂಡ ಪರಿಹಾರ ನಿರೀಕ್ಷೆಯಲ್ಲಿದ್ದು, ಎಲ್ಲ ರಾಜ್ಯಗಳಲ್ಲಿ ಪರಿಹಾರ ಘೋಷಣೆ ಸಂದರ್ಭದಲ್ಲಿ ರಾಜ್ಯಕ್ಕೂ ಕೂಡ ಪರಿಹಾರವನ್ನು ಕೇಂದ್ರ ಘೋಷಿಸಲಿದೆ ಎಂದರು.

ಇದನ್ನು ಓದಿ: ನೆರೆ ಪರಿಹಾರ ಕುರಿತು ಚರ್ಚಿಸಲು ಸಿಎಂಗೆ ಅವಕಾಶ ನೀಡದಿರುವುದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ; ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಉತ್ತರ ಕರ್ನಾಟಕದ ಜನರ ಅನುಕೂಲಕ್ಕಾಗಿ ಬೆಳಾವಿಯಲ್ಲಿ ಆಡಳಿತಾತ್ಮಕ ಕೇಂದ್ರ ತೆರೆಯಲು ತೀರ್ಮಾನಿಸಿದ್ದೇವೆ. ಈ ಮೂಲಕ ಅಲ್ಲಿನ ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದರು.

First published: September 19, 2019, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading