ಪಕ್ಷ ಮೀರಿ ಬೆಳೆಯಲು ಹೋದವರು ಉದ್ಧಾರವಾಗಲ್ಲ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಕೆಳಗೆ ಬಿದ್ದಿರುವ ಸಿದ್ದರಾಮಯ್ಯ ಮೇಲೆ ಈಗ ಆಳಿಗೊಂದು ಕಲ್ಲಂತೆ ಒಬ್ಬಬ್ಬರೆ ನಾಯಕರು ತಿರುಗಿ ಬೀಳುತ್ತಿದ್ದಾರೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲವಿಲ್ಲದೇ ಮೇಲೆರಲು ಸಾಧ್ಯವಿಲ್ಲ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಹೋದರು ಉದ್ದಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ನಾಶವಾಗುವುದು ಅವರೇ ಹೊರತು ವಿನಃ ಸಂಘಟನೆಯಲ್ಲ.

Seema.R
Updated:September 28, 2019, 6:19 PM IST
ಪಕ್ಷ ಮೀರಿ ಬೆಳೆಯಲು ಹೋದವರು ಉದ್ಧಾರವಾಗಲ್ಲ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಸಚಿವ ಈಶ್ವರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಶಿವಮೊಗ್ಗ (ಸೆ.28): ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಮಾಡಿಕೊಂಡು ಐದು ವರ್ಷ ಅಧಿಕಾರ ನಡೆಸಿದರು. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದ್ದು ಎಂಬ ಸೊಕ್ಕು ಅವರ ತಲೆಗೆ ಏರಿತ್ತು. ಸಂಘಟನೆಯನ್ನು ಮೀರಿ ಅವರು ಬೆಳೆಯಲು ಹೋಗಿ ಅವರು ಎಡವಿ ಬಿದ್ದಿದ್ದಾರೆ ಎಂದು ಸಚಿವ ಈಶ್ವರಪ್ಪ ಹೀಗಳೆದರು. 

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಈಗ ಮೂಲ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಅವರು ಮಾಡಿದ ಕುತಂತ್ರ. ಸಿಎಂ ಆಗಿದ್ದಾಗ ಅವರು ಹೇಗಿದ್ದರು ಎಂಬುದು ಇಂದು ಅವರು ಪಕ್ಷದೊಂದಿಗೆ ಹೊಂದಿರುವ ಸಂಬಂಧದಿಂದ ತಿಳಿಯುತ್ತಿದೆ. ಅವರ ಕುತಂತ್ರ ರಾಜಕೀಯದಿಂದ ಸರ್ಕಾರ ಬಿದ್ದು ಹೋಯಿತು ಎಂದರು.

ಕೆಳಗೆ ಬಿದ್ದಿರುವ ಸಿದ್ದರಾಮಯ್ಯ ಮೇಲೆ ಈಗ ಆಳಿಗೊಂದು ಕಲ್ಲಂತೆ ಒಬ್ಬಬ್ಬರೆ ನಾಯಕರು ತಿರುಗಿ ಬೀಳುತ್ತಿದ್ದಾರೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲವಿಲ್ಲದೇ ಮೇಲೆರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಪಕ್ಷ ಕಟ್ಟಿ ಎಷ್ಟು ಸೀಟು ಪಡೆದಿದ್ದಾರೆ. ಯಡಿಯೂರಪ್ಪ ಪಕ್ಷ ಕಟ್ಟಿ ಎಷ್ಟು ಸೀಟು ಪಡೆದಿದ್ದಾರೆ ಎಂಬುದು ಗೊತ್ತಿದೆ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಹೋದರು ಉದ್ದಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ನಾಶವಾಗುವುದು ಅವರೇ ಹೊರತು ವಿನಃ ಸಂಘಟನೆಯಲ್ಲ ಎಂದರು.

ಇದನ್ನು ಓದಿ: ಹೈಕಮಾಂಡ್​ ಮಟ್ಟದಲ್ಲಿ ಕುಗ್ಗಿದ ರಮ್ಯಾ ವರ್ಚಸ್ಸು; ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನದಿಂದ ಔಟ್

ಆರ್​ಎಸ್​ಎಸ್​ ಮಾದರಿಯಲ್ಲಿ ಯುಟಿ ಖಾದರ್  ಸಂಘಟನೆ ಮಾಡಲುಹೊರಟಿದ್ದಾರೆ ಎಂಬ  ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದ ಅವರು,  ಆರ್.ಎಸ್.ಎಸ್. ತರಾನಾದರೂ ಮಾಡಲಿ. ಏಳ್.ಎಸ್.ಎಸ್. ತರನಾದರೂ ಮಾಡಲಿ. ಆದರೆ, ಆ ಸಂಘಟನೆ ರಾಷ್ಟ್ರಭಕ್ತಿಗೆ ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ  ನೀಡಿದರು.

First published: September 28, 2019, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading