• Home
  • »
  • News
  • »
  • state
  • »
  • ವಿಧಾನ ಪರಿಷತ್ ಗದ್ದಲ - ಸಿದ್ಧರಾಮಯ್ಯ, ಡಿಕೆಶಿ ಕ್ಷಮೆ ಕೇಳಬೇಕು: ಸಚಿವ ಈಶ್ವರಪ್ಪ ಆಗ್ರಹ

ವಿಧಾನ ಪರಿಷತ್ ಗದ್ದಲ - ಸಿದ್ಧರಾಮಯ್ಯ, ಡಿಕೆಶಿ ಕ್ಷಮೆ ಕೇಳಬೇಕು: ಸಚಿವ ಈಶ್ವರಪ್ಪ ಆಗ್ರಹ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ ಎಂದು ಮೊದಲೇ ಸ್ಪಷ್ಟವಾಗಿ ಹೇಳಿದ್ದೇವೆ. ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಯವರು ಸಜ್ಜನ ರಾಜಕಾರಣಿ. ಅವರಿಗೂ ಕಪ್ಪುಚುಕ್ಕೆ ಬರುವಂತೆ‌ ಕಾಂಗ್ರೆಸ್‌ನವರು ಮಾಡಿದ್ದಾರೆ.

  • Share this:

ಹುಬ್ಬಳ್ಳಿ(ಡಿಸೆಂಬರ್​. 18): ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ಸಭಾಪತಿ ಯಾರಾಗಬೇಕೆಂದು ಜೆಡಿಎಸ್ ಮತ್ತು ಬಿಜೆಪಿಯವರು ಕುಳಿತು ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆ ವಿಷಾಧನೀಯ. ವಿಧಾನ ಪರಿಷತ್ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದದ್ದು ಇದೇ ಮೊದಲು.‌ ಪರಿಷತ್‌ನಲ್ಲಿ ಬಿಜೆಪಿ ಜೆಡಿಎಸ್‌ಗೆ ಬಹುಮತ  ಇರಲಿಲ್ಲವೆಂದು ರಾಜ್ಯದ ಜನರೆದುರು ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಮೊದಲು ಸ್ಪಷ್ಟಪಡಿಸಲಿ. ಅವಿಶ್ವಾಸದ ಪತ್ರವನ್ನ ಮೊದಲೇ ಕೊಡಲಾಗಿತ್ತು. ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಜೆಂಡಾದಲ್ಲಿ ತರಲಿಲ್ಲ. ಇದೊಂದು ಕಾಂಗ್ರೆಸ್ ಪಕ್ಷದ ವ್ಯವಸ್ಥಿತ ಸಂಚು. ಭಂಡತನದಿಂದ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಾಡಿದ ಕುತಂತ್ರ ರಾಜಕಾರಣ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು. 


ಈ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ ಎಂದು ಮೊದಲೇ ಸ್ಪಷ್ಟವಾಗಿ ಹೇಳಿದ್ದೇವೆ. ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಯವರು ಸಜ್ಜನ ರಾಜಕಾರಣಿ. ಅವರಿಗೂ ಕಪ್ಪುಚುಕ್ಕೆ ಬರುವಂತೆ‌ ಕಾಂಗ್ರೆಸ್‌ನವರು ಮಾಡಿದ್ದಾರೆ.‌ ಇದೊಂದು ಪೂರ್ವನಿಯೋಜಿತ ಸಂಚು. ಬಹುಮತವಿಲ್ಲದ ಬಳಿಕ ರಾಜಿನಾಮೆ ಕೊಡಬೇಕಿತ್ತು.‌ ಸಿದ್ದರಾಮಯ್ಯ ಮತ್ತು ಡಿಕ ಕೆ ಶಿವಕುಮಾರ್​ ಜನರ ಕ್ಷಮೆ ಯಾಚಿಸಿ, ಮುಂದೆ ಈ ರೀತಿ ಮಾಡಲ್ಲವೆಂದು ಹೇಳಿಕೆ ನೀಡಬೇಕು. ಬಹುಮತ ಇಲ್ಲದಿರುವವರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದರು.


ದಾದಾಗಿರಿ ಮಾಡಿಕೊಂಡು ಸಭಾಪತಿ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದನ್ನು ಜನ ಕ್ಷಮಿಸಲ್ಲ. ಈ ಕುತಂತ್ರ ರಾಜಕಾರಣ ದೇಶದ ಜನರಿಗೆ ಮಾಡಿದ ದ್ರೋಹ. ‌ಪ್ರತಾಪ್‌ಚಂದ್ರ ಶೆಟ್ಟಿಯವರು ತಾವಾಗೇ ರಾಜಿನಾಮೆ ಕೊಡಬೇಕಿತ್ತು. ಅವರು ರಾಜೀನಾಮೆ ಕೊಟ್ಟ ಬಳಿಕ ಯಾರು ಸಭಾಪತಿ ಆಗಬೇಕು ಅಂತಾ ನಿರ್ಧರಿಸುತ್ತೇವೆ. ಜೆಡಿಎಸ್ ಮತ್ತು ಬಿಜೆಪಿಯವರು ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 80ರಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಡಿವೈಎಸ್‌ಪಿ ಸಾವಿನ ಕುರಿತು ಸತ್ಯಾಸತ್ಯತೆ ಬಯಲಿಗೆ ಬರಲಿದೆ: ಬಸವರಾಜ್ ಬೊಮ್ಮಾಯಿ


ಡಿವೈಎಸ್‌ಪಿ ಲಕ್ಷ್ಮೀ ಸಾವಿನ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ಇದನ್ನೂ ಓದಿ : ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ 10 ಅರ್ಥಶಾಸ್ತ್ರಜ್ಞರು


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದ್ದು, ಸಂಬಂಧಪಟ್ಟವರು ಮತ್ತು ಆತ್ಮೀಯರ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.


‌ಉಜಿರೆ ಬಾಲಕನ ಅಪಹರಣ ಪ್ರಕರಣ ಬಗ್ಗೆಯೂ ತಂಡ ಮಾಡಿ ತನಿಖೆ ಮಾಡುತ್ತಿದ್ದೇವೆ.‌ ಆದಷ್ಟು ಬೇಗ ಪ್ರಕರಣ ಬೇಧಿಸುತ್ತೇವೆ. ವೈಯಕ್ತಿಕ ವ್ಯವಹಾರದಲ್ಲಿ ಈ ರೀತಿ ಮಾಡುತ್ತಾ ಇರುತ್ತಾರೆ . ಇದುವರೆಗೂ ಈ ರೀತಿಯ ಎಲ್ಲಾ ಪ್ರಕರಣಗಳನ್ನು ಬೇಧಿಸಿದ್ದೇವೆ, ಇದನ್ನೂ ಬೇಧಿಸುತ್ತೇವೆ ಎಂದವರು ಹೇಳಿದ್ದಾರೆ.

Published by:G Hareeshkumar
First published: