HOME » NEWS » State » MINISTER DR SUDHAKAR ASKED SIDDARAMAIH TO NOT PROTECT ANYONE WHO INVOLVED IN DRUG CASE GNR

‘ಸಿದ್ದರಾಮಯ್ಯನವರೇ ಡ್ರಗ್ಸ್​ ಕೇಸಲ್ಲಿ ಯಾರನ್ನು ರಕ್ಷಿಸಬೇಡಿ‘ - ಸಚಿವ ಡಾ. ಸುಧಾಕರ್​​ ಮನವಿ

ಸಿದ್ದರಾಮಯ್ಯನವರೇ ಯಾರನ್ನೂ ರಕ್ಷಿಸಬೇಡಿ. ಸಿದ್ದರಾಮಯ್ಯನವರು ಇದನ್ನು ಬುಡಸಮೇತವಾಗಿ ಕಿತ್ತು ಹಾಕಲು ಸಹಕಾರ ನೀಡಬೇಕು. ಯಾರೂ ಇದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ಹಾಗೇ ನೀವು ಯಾರನ್ನು ರಕ್ಷಣೆ ಮಾಡಬೇಡಿ ಎಂದು ಮನವಿ ಮಾಡಿದರು.

news18-kannada
Updated:September 12, 2020, 8:40 PM IST
‘ಸಿದ್ದರಾಮಯ್ಯನವರೇ ಡ್ರಗ್ಸ್​ ಕೇಸಲ್ಲಿ ಯಾರನ್ನು ರಕ್ಷಿಸಬೇಡಿ‘ - ಸಚಿವ ಡಾ. ಸುಧಾಕರ್​​ ಮನವಿ
ಸಚಿವ ಡಾ.ಕೆ.ಸುಧಾಕರ್
  • Share this:
ಚಿಕ್ಕಬಳ್ಳಾಪುರ(ಸೆ.12): ನಾನು ಅಲ್ಪಾಸಂಖ್ಯಾತ ಎಂಬ ಕಾರಣಕ್ಕೆ ಡ್ರಗ್‌ ವಿಚಾರದಲ್ಲಿ ಟಾರ್ಗೆಟ್‌ ಮಾಡಲಾಗಿದೆ ಎಂಬ ಜಮೀರ್ ಅಹಮದ್ ಹೇಳಿಕೆಗೆ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ. ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗಾ? ಅದೇನು ಅವರ ಐಡಿ ಕಾರ್ಡಾ? ಎಂದು ಸಚಿವ ಡಾ.ಕೆ. ಸುಧಾಕರ್ ಪ್ರಶ್ನಿಸಿದರು. ಇಂದು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಬಳಿಕ ಮಾತನಾಡಿದ ಅವರು, ಅಲ್ಪಸಂಖ್ಯಾತ ಎನ್ನೋದು ರಕ್ಷಣೆಯ ಟ್ಯಾಗ್ ಅಲ್ಲ. ಅದೇನು ಐಡಿನಾ? ನಾನು ನನ್ನ ಜಾತಿ ಹೇಳಿಕೊಂಡು ಐಡಿ ಇಟ್ಟುಕೊಳ್ಳಬೇಕಾ? ಡ್ರಗ್ ದಂಧೆಯಲ್ಲಿ ತಪ್ಪಿತಸ್ಥರು ಯಾವ ಜನಾಂಗ, ಜಾತಿಯವರೇ ಆಗಲಿ ಶ್ರೀಮಂತರೇ ಇರಲಿ, ಬಡವರೇ ಇರಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಬಿಜೆಪಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಡ್ರಗ್‌ ವಿಷಯವನ್ನು ಬಿಜೆಪಿ‌ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಸುಧಾಕರ್​​, ಹಿಂದಿನ ಸರ್ಕಾರ ಡ್ರಗ್ ಮಾಫಿಯಾ ವಿರುದ್ಧ ಏಕೆ ಕ್ರಮ ವಹಿಸಲಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಡ್ರಗ್ ದಂಧೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಯಾರೇ ಪ್ರಭಾವಿ ವ್ಯಕ್ತಿ ಇದರಲ್ಲಿ ಭಾಗಿಯಾಗಿದ್ದರು ಮುಲಾಜಿಲ್ಲದೇ ಕ್ರಮ ವಹಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ದೊಡ್ಡ ಹೆಜ್ಜೆ ಇಟ್ಟಿದ್ದಾರೆ ಎಂದರು.

ಡ್ರಗ್ ನಿಯಂತ್ರಣಕ್ಕೆ ಕಾನೂನು: ಮುಂದಿನ ದಿನಗಳ ಡ್ರಗ್‌ ನಿಯಂತ್ರಣಕ್ಕೆ ಸ್ಪಷ್ಟ ಕಾನೂನು ತಂದು, ಯುವ ಪೀಳಿಗೆಯನ್ನು ಇದರಿಂದ ರಕ್ಷಣೆ ಮಾಡುವ ಅಗತ್ಯವಿದೆ. ಯುವ ಜನರನ್ನು ರಕ್ಷಣೆ ಮಾಡದೇ ಹೋದರೆ ಸಮಾಜದ ಸ್ವಾಸ್ಯ್ಥ ಹಾಳಾಗುತ್ತದೆ. ಡ್ರಗ್ ವಿಚಾರವನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಿ ಎಂದೆನಿಸುತ್ತಿದೆ. ಆದರೆ ಇದು ಗಂಭೀರ ಪ್ರಕರಣ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ‌ ನೇತೃದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಗಡಿ ಭಾಗದ 20 ಕಡೆ ದಾಳಿ ಮಾಡಿ 20 ಜನರನ್ನು ಬಂಧಿಸಿ 60 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಮಾಫಿಯಾ ಬಗ್ಗೆ ವಿಸ್ತಾರವಾದ ತನಿಖೆ ಆಗುತ್ತಿದ್ದು, ಯಾರ ರಕ್ಷಣೆ ಮಾಡಲಾಗುತ್ತಿಲ್ಲ ಎಂದು ಸಮರ್ಥನೆ ನೀಡಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ನವೋದ್ಯಮ ರ‍್ಯಾಂಕಿಂಗ್ ಪ್ರಕಟ: ಅಗ್ರಗಣ್ಯ ಸಾಧಕ ಗೌರವಕ್ಕೆ ಪಾತ್ರವಾದ ಕರ್ನಾಟಕ

ಸಿದ್ದರಾಮಯ್ಯನವರೇ ಯಾರನ್ನೂ ರಕ್ಷಿಸಬೇಡಿ. ಸಿದ್ದರಾಮಯ್ಯನವರು ಇದನ್ನು ಬುಡಸಮೇತವಾಗಿ ಕಿತ್ತು ಹಾಕಲು ಸಹಕಾರ ನೀಡಬೇಕು. ಯಾರೂ ಇದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ಹಾಗೇ ನೀವು ಯಾರನ್ನು ರಕ್ಷಣೆ ಮಾಡಬೇಡಿ ಎಂದು ಮನವಿ ಮಾಡಿದರು.
Published by: Ganesh Nachikethu
First published: September 12, 2020, 8:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories