ಬೆಂಗಳೂರು: ಸಚಿವರಾಗಿ (Minister) ಪ್ರಮಾಣ ವಚನ (Oath) ಸ್ವೀಕರಿಸಿದ ಬಳಿಕ ಮಾತನಾಡಿರುವ ಸಚಿವ ಎಂಸಿ ಸುಧಾಕರ್ (MC Sudhakar), ನಾಡಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ನೂತನ ಸಚಿವ ಅವರು, ನಾನು ಒಬ್ಬ ದಂತ ವೈದ್ಯ (Dental Doctor), ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ (Medical Education) ಖಾತೆ ನಿಭಾಯಿಸಬಲ್ಲೆ. ಬೇರೆ ಯಾವುದೇ ಖಾತೆ ನೀಡಿದರು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಪಕ್ಷದಲ್ಲಿ ಇರಲಿ, ನಮ್ಮನ್ನ ಬೆಳಸಿದವರನ್ನ ಗೌರವಿಸಬೇಕು
ಕಳೆದ 10 ವರ್ಷ ದಿಂದ ಚಿಕ್ಕಬಳ್ಳಾಪುರ ಜನತೆ ಕಷ್ಟದ ದಿನಗಳನ್ನ ನೋಡಿದ್ದಾರೆ. ಪ್ರದೀಪ್ ಈಶ್ವರ್ ದೇವರಂತೆ ನಮಗೆ ಸಿಕ್ಕರೂ. ಒಬ್ಬ ಅನಾಥ ಹುಡುಗನ ಮೇಲೆ ಕೇಸ್ ಗಳನ್ನ ದಾಖಲಿಸಿ ಕಿರುಕುಳ ನೀಡಿದ್ದರು. ಸುಧಾಕರ್ರನ್ನ ಮಣಿಸಲು ಅವರೇ ಸೂಕ್ತ ವ್ಯಕ್ತಿಯಾಗಿದ್ದರು. ನಾವು ಯಾವುದೇ ಪಕ್ಷದಲ್ಲಿ ಇರಲಿ, ನಮ್ಮನ್ನ ಬೆಳಸಿದವರನ್ನ ಗೌರವಿಸಬೇಕು. ಅಧಿಕಾರ ಸಿಕ್ಕಿದ ಕೂಡಲೇ ಬಾಯಿಗೆ ಬಂದ ಹಾಗೆ ಮಾತನಾಡಬಾರದು ಎಂದು ಎಂಸಿ ಸುಧಾಕರ್ ಎಚ್ಚರಿಕೆ ನೀಡಿದರು.
ಅಲ್ಲದೆ, ಚಿಕ್ಕಬಳ್ಳಾಪುರ ಮೊದಲಿನಿಂದಲೂ ಕಾಂಗ್ರೆಸ್ ಕೋಟೆಯಾಗಿತ್ತು. ಈಗ ಮತ್ತೆ ಜಿಲ್ಲೆಯ ಜನ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಿಂದೆ ಇದ್ದವರು ಡಾ. ಕೆ ಸುಧಾಕರ್ ಮೆಡಿಕಲ್ ಮಿನಿಸ್ಟರ್, ಈಗ ಇರುವವರು ಡಾ. ಎಂಸಿ ಸುಧಾಕರ್ ಮೆಡಿಕಲ್ ಮಿನಿಸ್ಟರ್. ಆದರೆ ಪಕ್ಷ ಬೇರೆ, ಇದು ಒಂದು ಕೋ ಇನ್ಸಿಡೆಂಟ್ ಅಷ್ಟೇ ಎಂದು ನೂತನ ಸಚಿವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ