• Home
 • »
 • News
 • »
 • state
 • »
 • Minister Sudhakar: ಕಾಂಗ್ರೆಸ್ ಅವಧಿಯಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರ! ಸಚಿವ ಸುಧಾಕರ್ ಗಂಭೀರ ಆರೋಪ

Minister Sudhakar: ಕಾಂಗ್ರೆಸ್ ಅವಧಿಯಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರ! ಸಚಿವ ಸುಧಾಕರ್ ಗಂಭೀರ ಆರೋಪ

ಸಚಿವ ಸುಧಾಕರ್-ಸಿದ್ದರಾಮಯ್ಯ

ಸಚಿವ ಸುಧಾಕರ್-ಸಿದ್ದರಾಮಯ್ಯ

40 ಪರ್ಸೆಂಟ್ ಸಿಎಂ (40% CM), ಭ್ರಷ್ಟ ಬಿಜೆಪಿ ಸಕ್ಕಾರ ಅಂತ ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ (Congress Leaders) ಇಂದು ಸಚಿವ ಡಾ. ಕೆ.ಸುಧಾಕರ್ (Minister Dr. K. Sudhakar) ತಿರುಗೇಟು ನೀಡಿದ್ದಾರೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆ (Karnataka Assembly elections) ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿ (BJP) ಹಾಗೂ ವಿರೋಧ ಪಕ್ಷ ಕಾಂಗ್ರೆಸ್ (Congress) ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ. 40 ಪರ್ಸೆಂಟ್ ಸಿಎಂ (40% CM), ಭ್ರಷ್ಟ ಬಿಜೆಪಿ ಸಕ್ಕಾರ ಅಂತ ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ (Congress Leaders) ಇಂದು ಸಚಿವ ಡಾ. ಕೆ.ಸುಧಾಕರ್ (Minister Dr. K. Sudhakar) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2018ರಲ್ಲಿ ಫೈನಾನ್ಸಿಯಲ್ ಅಡಿ ಸಿಎಜಿ ವರದಿ (CAG Report) ಬಂದಿದೆ, ಇದರಲ್ಲಿ 2013, 2018ರಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರವಿದೆ ಎಂದು ಹೇಳಿದೆ. ರೀಡೂ ಅಂತ ಕಾಂಗ್ರೆಸ್‌ನವರು ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.


ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್ ಆರೋಪ


ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಡಾ. ಕೆ.ಸುಧಾಕರ್ ಗುಡುಗಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಕಳೆದ 60 ವರ್ಷ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಆಗ ಯಾವ ರೀತಿಯ ಭ್ರಷ್ಟಾಚಾರ ನಡೆಸಿತ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಅಂತ ವ್ಯಂಗ್ಯವಾಡಿದರು.
35 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ


35 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅಂತ ಆರೋಪಿಸಿರುವ ಸುಧಾಕರ್, 2018ರಲ್ಲಿ ಫೈನಾನ್ಸಿಯಲ್ ಅಡಿ ಸಿಎಜಿ ವರದಿ ಬಂದಿದೆ, 2013, 2018 ರಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಾಂಗ್ರೆಸ್‌ನವರು ರೀಡೂ ಅಂತ ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ ಅಂತ ವ್ಯಂಗ್ಯವಾಡಿದರು.


ಇದನ್ನೂ ಓದಿ: Bengaluru: ಬೆಂಗಳೂರಿನ 300 ಸ್ಥಳಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ; ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದ್ದಲ್ಲ!


10 ಸಾವಿರ ಬೆಂಗಳೂರಿಗರಿಗೆ ಅನ್ಯಾಯ


ಕಾಂಗ್ರೆಸ್‌ ಸರ್ಕಾರವಿದ್ದಾಗ  10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಸುಧಾಕರ್ ಆರೋಪಿಸಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದರು. ಸಿದ್ದರಾಮಯ್ಯನವರ ಬಲಗೈ ಬಂಟ ಕೆ.ಜೆ ಜಾರ್ಜ್‌ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಅಂದಾಜು ಇತ್ತು, ಅದನ್ನ 374 ಕೋಟಿಗೆ ಹೆಚ್ಚಿಸಿದರು. ಕೆಜೆ ಜಾರ್ಜ್‌ರವರೇ ಯಾಕೆ ಶೇ.23%ರಷ್ಟು ಹೆಚ್ಚಳವಾಗಿ ಕೊಟ್ಟಿದ್ದೀರಿ ಉತ್ತರಿಸಿ ಅಂತ ಸವಾಲು ಹಾಕಿದ್ರು.


ಕಾಂಗ್ರೆಸ್ ಹೈಕಮಾಂಡ್‌ಗೆ ಸಾವಿರ ಕೋಟಿ ಹೇಗೆ ಹೋಯ್ತು?


ಇನ್ನು 2017 ಕಾರಲ್ಲಿ ರೇಡ್ ಆದಾಗ ಡೈರಿ ಸಿಕ್ಕಿತ್ತು. ಅದರಲ್ಲಿ 1000 ಕೋಟಿ ಹೈಕಮಾಂಡ್‌ಗೆ ಹೇಗೆ ಹೋಯ್ತು ಎನ್ನುವುದು ಇತ್ತು. ಕಾಂಗ್ರೆಸ್ ನ್ನು ಇಡೀ ದೇಶದಲ್ಲಿ ತಿರಸ್ಕಾರ ಮಾಡಿದ್ದಾರೆ, ಕರ್ನಾಟಕದಲ್ಲೂ ಕಾಂಗ್ರೆಸ್ ಅನ್ನು ಜನರು ತಿರಸ್ಕಾರ ಮಾಡ್ತಾರೆ. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೂರಕ್ಕೆ ನೂರರಷ್ಟು ಮತ್ತೆ ಅಧಿಕಾರಕ್ಕೆ ಬರುತ್ತದೆ ಕಾಂಗ್ರೆಸ್ 85 ರಿಂದ 90 ಸ್ಥಾನಕ್ಕೆ ಅಷ್ಟೇ ಸೀಮಿತ ಆಗುತ್ತದೆ ಅಂತ ಭವಿಷ್ಯ ನುಡಿದ್ರು.


ರಮೇಶ್ ಕುಮಾರ್ ಮಾತು ಪ್ರಸ್ತಾಪಿಸಿ ಟಾಂಗ್


ಕೋಲಾರದ ಮಹಾನ್ ನಾಯಕ ಒಬ್ಬರೇ ಹೇಳಿದ್ದಾರಲ್ಲ. ರಮೇಶ್ ಕುಮಾರ್ ಅವರು ಮೂರು ತಲೆಮಾರಿಗೆ ಆಗುವಷ್ಟು ಮಾಡಿದ್ದೀವಿ ಅಂತಾ ಅವರ ಅನುಭವ, ಅಂತಃಕರಣದ ಮಾತನ್ನು ಆಡಿದ್ದಾರೆ. ಇವ್ರು ಈ ರೀತಿ ಹೇಳಿದ್ದಾರೆ ಅಂದರೆ ನಾವು ಭ್ರಷ್ಟಾಚಾರ ಅಂತಾ ಹೇಳುವ ಅವಶ್ಯಕತೆ ಇಲ್ಲ. ಜನರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ರಮೇಶ್ ಕುಮಾರ್ ಮೂಲಕ ಕಾಂಗ್ರೆಸ್ ನ ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ ಪ್ರಜಾಧ್ವನಿಗೆ ಟಾಂಗ್


ನಾವು 125 ಸ್ಥಾನ ಗೆಲ್ಲುತ್ತೇವೆ, ಕಾಂಗ್ರೆಸ್ ನವ್ರು 80 ರಿಂದ‌ 90 ಸ್ಥಾನಗಳಲ್ಲಿ ‌ಬರ್ತಾರೆ, ಜೆಡಿಎಸ್ ನವರದ್ದು ಎಷ್ಟು ಅಂತಾ ಗೊತ್ತಿಲ್ಲ,  ಯಾರು ಎರಡೂವರೆ, ಎರಡೂವರೆ ವರ್ಷ ಸಿಎಂ ಆಗ್ತೀನಿ ಅಂತಾ ಅಂದುಕೊಂಡಿದ್ದೀರೋ ಅವರಿಗೆ ನಾನು ಮಾರ್ಮಿಕವಾಗಿ ಹೇಳ್ತಿದ್ದೇನೆ. ಯಾವುದೇ ಹಗಲುಗನಸು ಕಾಣಬೇಡಿ ಎಂದು. ಇಂದು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪ್ರಜಾಧ್ವನಿ ಮಾಡ್ತಿದ್ಸಾರೆ ಅವರದ್ದು ಪ್ರಜಾಧ್ವನಿ ಪ್ರವಾಸ ಅಲ್ಲ, ಇದು ಪ್ರಜಾದ್ರೋಹದ ಪ್ರವಾಸ ಎಂದು ಸುಧಾಕರ್ ಟಾಂಗ್ ಕೊಟ್ಟರು.

Published by:Annappa Achari
First published: