Ramanagara: ಕೊಲೆಗಟುಕರ ಎನ್​ಕೌಂಟರ್​ಗೂ ರೆಡಿ ಎಂದ ಅಶ್ವತ್ಥ್ ನಾರಾಯಣ್

ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ಸ್ಪಷ್ಟವಾಗಿ ಹೇಳಿದೆ.‌ಯಾವುದೇ ಕಾರಣಕ್ಕೂ ಕೊಲೆಗಡುಕರಿಗೆ ಅನುಕೂಲಕರವಾಗಿ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಎನ್ಕೌಂಟರ್  (Encounter) ಮಾಡೋದಕ್ಕೂ ನಾವು ಈಗಾಗಲೇ ತಯಾರಿದ್ದೇವೆ ಅಂತ ತಿಳಿಸಿದ್ದೇವೆ ಎಂದಿದ್ದಾರೆ.

ಸಚಿವ ಅಶ್ವತ್ಥ​ ನಾರಾಯಣ್

ಸಚಿವ ಅಶ್ವತ್ಥ​ ನಾರಾಯಣ್

  • Share this:
ರಾಮನಗರ(ಜು.30): ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ (CN Ashwath Narayan) ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ನಂತರ ಇದೇ ಸಂದರ್ಭದಲ್ಲಿ ಪ್ರವೀಣ್ ಹತ್ಯೆ (Praveen Nettar Murder) ಬಳಿಕ ಮತ್ತೊಂದು ಮುಸ್ಲಿಂ ಯುವಕನ ಹತ್ಯೆ ವಿಚಾರವಾಗಿ ಮಾತನಾಡಿ ಇದು ನಿಜಕ್ಕೂ ಕೂಡ ಜನರ ತಾಳ್ಮೆಯನ್ನ ಕೆಲವರು ಪ್ರಚೋದಕರು ಪರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರ ಸ್ಪಷ್ಟವಾಗಿ ಹೇಳಿದೆ.‌ಯಾವುದೇ ಕಾರಣಕ್ಕೂ ಕೊಲೆಗಡುಕರಿಗೆ ಅನುಕೂಲಕರವಾಗಿ ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಎನ್ಕೌಂಟರ್  (Encounter) ಮಾಡೋದಕ್ಕೂ ನಾವು ಈಗಾಗಲೇ ತಯಾರಿದ್ದೇವೆ ಅಂತ ತಿಳಿಸಿದ್ದೇವೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಹ ಹತ್ಯೆಕೋರರಿಗೆ ನಡುಕ ಹುಟ್ಟಿಸುವಂತಹ ಕೆಲಸ ಆಗುತ್ತೆ,  ಕನಸುಮನಸ್ಸಿನಲ್ಲೂ ಯಾವುದೇ ಕಾರಣಕ್ಕೂ ಕೊಲೆ ಬಗ್ಗೆ ಯೋಚನೆ ಸಹ ಮಾಡಬಾರದು. ಎನ್ಕೌಂಟರ್ ಆಗುವಂತಹ ಕಾಲ ಈಗಾಗಲೇ ಹತ್ತಿರ ಬಂದಿದೆ. ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸಗಳನ್ನ ಮಾಡಿ ಜಾಗೃತಿ ಮೂಡಿಸುತ್ತೇವೆ. ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಗಳನ್ನ ಮಾಡೋ ಜೊತೆಗೆ ಇನ್ನೂ ಎಚ್ಚರಿಕೆ ಕ್ರಮಗಳನ್ನ ಮಾಡೋ ಮೂಲಕ ನಮ್ಮ ಗೃಹ ಇಲಾಖೆಯಿಂದ ಅಮಾಯಕರ ಜೀವ ರಕ್ಷಣೆ ಮಾಡುತ್ತೇವೆ ಎಂದಿದ್ದಾರೆ.‌

ಬಿಜೆಪಿ ಕಾರ್ಯಕರ್ತರ ರಾಜೀನಾಮೆ

ಪ್ರವೀಣ್ ನೆಟ್ಟೂರು ಅವರ ಮನೆಗೆ ಬಂದಂತಹ ಪರಿಸ್ಥಿತಿ ಯಾವ ಕಾರಣಕ್ಕೂ ಬೇರೆಯವರಿಗೆ ಬರದಂತಹ ಕ್ರಮ ಆಗುತ್ತೇ ಎಂದರು. ಬಿಜೆಪಿ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿ ಮಾತನಾಡಿ ತುಂಬಾ ನೋವಾಗಿರುತ್ತೆ ಆಕ್ರೋಶಕ್ಕೆ ಒಳಗಾಗಿರುತ್ತಾರೆ. ಅಂತಹ ಕೊಲೆಯಂತಹ ಪ್ರಕರಣ ಆದಾಗ ಬಂಧಿಸುವಂತಹ ಕೆಲಸಗಳು ಆಗಿವೆ. ಈಗಲೂ ಆಗಿದೆ. ನಮ್ಮ ಸರ್ಕಾರದ ಹಾಗೂ ಗೃಹ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಆಕ್ರೋಶ ಇದೆ ಎಂದಿದ್ದಾರೆ.

ಆಕ್ರೋಶವನ್ನ ಗೌರವಿಸುವಂತೆ ತೀವ್ರವಾಗಿ ಕ್ರಮ

ಆ ಆಕ್ರೋಶವನ್ನ ಗೌರವಿಸುವಂತೆ ತೀವ್ರವಾಗಿ ಕ್ರಮ ಜರುಗಿಸುತ್ತೇವೆ. ಈಗಾಗಲೇ ಬಂಧಿಸುವಂತ ಕಾರ್ಯ ಆಗಿದೆ ಇನ್ನುಮುಂದೆ ಇಂತಹ ಘಟನೆ ನಡೆಯಬಾರದು ಅನ್ನೋದು ನಮ್ಮ ಕಾರ್ಯಕರ್ತರ, ಜನರ ಅಪೇಕ್ಷೆ ಇದೆ. ಅವರ ಅಪೇಕ್ಷೆ ತಕ್ಕಂತೆ ಇನ್ನೂ ತೀವ್ರವಾಗಿ ಕ್ರಮ ಜರುಗಿಸುವಂತಹ ಕೆಲಸ ಆಗಲಿದೆ. ಇನ್ನೂ ಯಾರೂ ಎಲ್ಲೇ ಇದ್ರೂ ಹುಡುಕಿ ಏನ್ ಮಾಡಬೇಕೋ ಮಾಡ್ತೀವಿ ನೋಡಿ, ಉತ್ತರಪ್ರದೇಶಕ್ಕಿಂತ ಐದು ಹೆಜ್ಜೆ ಮುಂದುಹೋಗುತ್ತೇವೆ ಎಂದಿದ್ದಾರೆ.

ಉತ್ತರಪ್ರದೇಶಕ್ಕಿಂತ ಒಳ್ಳೆ ಮಾಡಲ್ ಸರ್ಕಾರ

ಉತ್ತರಪ್ರದೇಶಕ್ಕಿಂತ ಒಳ್ಳೆ ಮಾಡಲ್ ಸರ್ಕಾರದ ಮಾಡುತ್ತೇವೆ.‌ ಕರ್ನಾಟಕ ಮುಂದುವರೆದ ರಾಜ್ಯ, ಪ್ರಗತಿಪರ ರಾಜ್ಯ, ಎಲ್ಲರಿಗೂ ಮಾದರಿ ರಾಜ್ಯವಾಗಿರುತ್ತೆ. ನಮ್ಮ ಸರ್ಕಾರ ಶಕ್ತಿ ಇರುವಂತವರು, ಕಾಳಜಿ ಇರುವರು, ಉತ್ಸಾಹ ಇರುವವರು ನಮ್ಮ ಸರ್ಕಾರ ಎಂದರು.ನಮ್ಮ ತಾಳ್ಮೆಗೂ ಒಂದು ಇತಿಮಿತಿ ಇದೆ, ನಡುಕ ಹುಟ್ಟಾಕೋಕೆ ನಾವು ರೆಡಿ ಇದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: Kodagu: ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಪ್ರಕರಣ! ಬೃಹತ್ ಪ್ರತಿಭಟನೆ

ಡಬಲ್ ಇಂಜಿನ್ ಸರ್ಕಾರ ಇದೆ ಪಿಎಫ್ಐ, ಎಸ್ ಡಿಪಿಐ ಸಂಘನೆ ಬ್ಯಾನ್ ಮಾಡಲಿ ಎಂಬ ಕಾಂಗ್ರೆಸ್ ಸವಾಲ್ ವಿಚಾರವಾಗಿ ಮಾತನಾಡಿ ಕಾಂಗ್ರೆಸ್ ನವರಿಗೆ ಯಾವ ನೈತಿಕತೆಯೂ ಇಲ್ಲ, ನೈತಿಕತೆ ಇಲ್ಲದ ಯಾವುದಾದರೂ ಒಂದು ಪಕ್ಷ ಇದ್ರೆ ಅದು ಕಾಂಗ್ರೆಸ್ ಪಕ್ಷ. ಪಿಎಫ್ಐ ವಿರುದ್ಧವಾಗಿದ್ದ ಕೇಸ್ ಗಳನ್ನ ವಿತ್ ಡ್ರಾ ಮಾಡಿದವರಿಗೆ ಮಾತಾಡೋಕೆ ಯಾವ ನೈತಿಕತೆ ಇದೆ ಎಂದರು. ಇನ್ನು ಕಾಂಗ್ರೆಸ್ ಅವರಿಗೂ ಸಮಾಜದ್ರೋಹಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆ ರೀತಿಯ ಒಂದು ಕ್ಯಾಟಗರಿಗೆ ಸೇರಿದವರು ಕಾಂಗ್ರೆಸ್ ಪಕ್ಷದವರು, ಸಮಾಜಕ್ಕೆ ಈ ರೀತಿಯ ಪರಿಸ್ಥಿತಿ ಬರೋದಕ್ಕೆ ಮುಖ್ಯ ಕಾರಣಕರ್ತರು ಅವರೇ ಎಂದಿದ್ದಾರೆ.

Pramod Muthalik entry in Dakshina Kannada district banned mrq
ಪ್ರವೀಣ್ ನೆಟ್ಟಾರು


ನಮ್ಮ ಕರ್ನಾಟಕ ಅನ್ನೋದು ಏನು ಅನ್ನೋದನ್ನ ನಾವು ತೋರಿಸ್ತೀವಿ

ಸೃಷ್ಟೀಕರಣದ ರಾಜಕಾರಣ ಮಾಡಿಕೊಂಡು ಬಂದವರು ಅವರು, ಈ ಘಟನೆ ವಿಚಾರದಲ್ಲಿ ಮಾತಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ. ಕಾಂಗ್ರೆಸ್ ಪಕ್ಷದವರಿಂದ ಕಲಿಯುವ ನೈತಿಕತೆ ನಮಗೆ ಇಲ್ಲ. ನಮ್ಮ ಕರ್ನಾಟಕ ಅನ್ನೋದು ಏನು ಅನ್ನೋದನ್ನ ನಾವು ತೋರಿಸ್ತೀವಿ.‌ಕರ್ನಾಟಕ ಮಾಡೆಲ್ ಬೇರೆಯವರಿಗೆ ಕೊಡೋರು ನಾವು, ಬೇರೆಯವರ ಮಾಡೆಲ್ ನಾವು ಪಡೆಯೋರಲ್ಲ, ಮತ್ತೆ ಖೆಡ್ಡಾಗೆ ಕೆಡವುತ್ತಿದ್ದಾರೆಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ ಯಾರೂ ಯಾರನ್ನೂ ಕೆಡವುದೇನಿಲ್ಲ, ಎಲ್ಲಾ ಅವರವರೇ ಕೆಡವಿಕೊಂಡಿದ್ದಾರೆ.

ಏನೇನ್ ಕರ್ಮ ಮಾಡಿರುತ್ತೇವೆ ಅದನ್ನ ಅನುಭವಿಸುತ್ತೇವೆ ಅಷ್ಟೇ

ಅವರವರ ನಡವಳಿಕೆ, ಅವರವರ ಭವಿಷ್ಯವನ್ನ ನಿರ್ಧಾರ ಮಾಡುತ್ತೆ.‌ಏನೇನ್ ಕರ್ಮ ಮಾಡಿರುತ್ತೇವೆ ಅದನ್ನ ಅನುಭವಿಸುತ್ತೇವೆ ಅಷ್ಟೇ. ವೈರಿಗಳನ್ನ ನಾಶ ಮಾಡು ಅಂತ ಡಿಕೆಶಿ ಚಾಮುಂಡೇಶ್ವರಿ ಬೇಡಿಕೆ ವಿಚಾರವಾಗಿ ಮಾತನಾಡಿಅವರ ಶತ್ರು ಅವರೇ, ಅವರನ್ನೇ ನಾಶ ಮಾಡು ಅಂತ ಕೇಳಿಕೊಂಡಿದ್ದಾರೆ ಅಷ್ಟೇ.  ಯಾವುದೇ ವ್ಯಕ್ತಿಗೆ ಶತ್ರು ಯಾರು ಅಂದ್ರೆ ನಮ್ಮ ನಡವಳಿಕೆಗಳು, ನಮ್ಮ‌ಚಿಂತನೆಗಳೇ ಶತ್ರು. ದೇವರನ್ನ ಕೇಳಿಕೊಳ್ಳುವುದು ಏನು ಅಂದ್ರೆ, ನಮ್ಮ ಅರ್ಹತೆ, ಯೋಗ್ಯತೆ ಒಳ್ಳೆ ಚಿಂತನೆ ಎಲ್ಲವನ್ನೂ ಹೆಚ್ಚಿಸು. ಹೆಚ್ಚು ಶಕ್ತಿ ಕೊಟ್ಟು ಜನ ಕಲ್ಯಾಣ ಮಾಡು, ನಮ್ಮಲ್ಲಿರುವ ಕೆಟ್ಟ ಗುಣಗಳನ್ನ, ವಿವೇಚನೆ ಕೊಡಪ್ಪ ಅಂತ ಕೇಳಬೇಕು. ನಮ್ಮಲ್ಲಿ ಆತ್ಮಶಕ್ತಿ ಅನ್ನೋದು ಇದ್ರೆ ಯಾರೂ ನಮ್ಮನ್ನ ತಡೆಯೋದಕ್ಕೆ ಸಾಧ್ಯವಿಲ್ಲ, ಆ ಸ್ಫೂರ್ತಿ ನಮ್ಮಲ್ಲಿ ಇಟ್ಟುಕೊಂಡರೆ ಏನುಬೇಕಾದರೂ ಸಾಧಿಸುವ ಶಕ್ತಿ ಭಗವಂತ ಕೊಡುತ್ತಾನೆ ಎಂದಿದ್ದಾರೆ.ರಾಮನಗರ ಕ್ಲೀನ್ ಮಾಡ್ತೀನಿ ಎಂದವರು ಎಲ್ಲಿ..? ಡಿಕೆಶಿ ಪ್ರಶ್ನೆಗೆ ಅಶ್ವತ್ಥ್ ನಾರಾಯಣ್ ಟಾಂಗ್ ನೀಡಿದರು. ಮಾಡುತ್ತಲೇ ಇದ್ದೀನಿ ಅದನ್ನ, ಎಲ್ಲಾ ಡಿಕೆ ಶಿವಕುಮಾರ್ ಸೋದರರು ಎಲ್ಲಾ ಭ್ರಷ್ಟಾಚಾರಿಗಳ ಸಂಸ್ಕೃತಿ.‌ಭ್ರಷ್ಟಾಚಾರ ಅನ್ನೋದು ಸಂಸ್ಕೃತಿಯಾಗಿಬಿಟ್ಟಿದೆ, ಅದನ್ನ ಬೆಳೆಸಿರೋದು ಕಾಂಗ್ರೆಸ್ ಸಂಸ್ಕೃತಿ, ಅದನ್ನೆಲ್ಲಾ ಕಿತ್ತೊಗೆಯೋದಕ್ಕೆ ನಮ್ಮ ಬಿಜೆಪಿ ಪಕ್ಷ ಭದ್ರವಾಗಿದ್ದೇವೆ. ಈ ದಿಕ್ಕಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವವನ್ನ ಮಾಡ್ತಿರುವಂತವರು, ಭ್ರಷ್ಟಾಚಾರವನ್ನ ತುಂಬಿ ತುಳುಕಲು ಮೂಲ ಕಾರಣ ಈ ಪುರಷರು ಎಂದಿದ್ದಾರೆ.

ಇದನ್ನೂ ಓದಿ: Police Brutality: ರೈಲ್ವೇ ನಿಲ್ದಾಣದಲ್ಲಿ ವೃದ್ಧರೊಬ್ಬರಿಗೆ ಕಾಲಿನಿಂದ ಒದ್ದು, ಥಳಿಸಿದ ಪೊಲೀಸ್! ವಿಡಿಯೋ ವೈರಲ್

ಈ ಮಹಾಪುರುಷರನ್ನೆಲ್ಲಾ ಕಿತ್ತೆಸೆದು ಇವರನ್ನೆಲ್ಲಾ ನಿರ್ನಾಮ ಮಾಡಿ ಯೋಗ್ಯವಾಗಿರುವ ವ್ಯಕ್ತಿಗಳನ್ನ ತರಲಿದ್ದೆವೆಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಅಶ್ವತ್ಥ್ ನಾರಾಯಣ್75 ವರ್ಷ ಆಗಿದ್ರೂ ಕೂಡ ನಾನೇ ನಾನೇ ಅಂತಾರೆ, ಇವರಿಗೆ ಎಪ್ಪತೈದು ಆಗಿದೆ ಇವರು ನಿವೃತ್ತಿ ಪಡೆಯಲಿ, ಇಂತಹ ಭ್ರಷ್ಟರು ತೊಲಗಲಿ ಅಂತ ಹೇಳ್ತೀನಿ. ಒಂದೊಂದು ಕೆಲಸಕ್ಕೂ ಒಂದೊಂದು ರೇಟ್ ಫಿಕ್ಸ್ ವಿಚಾರವಾಗಿ ಮಾತನಾಡಿ ಅವೆಲ್ಲವೂ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸಂಸ್ಕೃತಿ. ಹಾಗಾಗಿ ಅದರ ಬಗ್ಗೆ ಮಾತಾಡುತ್ತಲೇ ಇರುತ್ತಾರೆ ಎಂದರು.
Published by:Divya D
First published: