• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Budget 2023: ರೈತರು, ಮಹಿಳೆಯರು, ದೀನ ದಲಿತರ ಪರವಾದ ಬಜೆಟ್ ಕೊಟ್ಟಿದ್ದಾರೆ: ಡಾ ಅಶ್ವತ್ಥ್‌ ನಾರಾಯಣ್

Budget 2023: ರೈತರು, ಮಹಿಳೆಯರು, ದೀನ ದಲಿತರ ಪರವಾದ ಬಜೆಟ್ ಕೊಟ್ಟಿದ್ದಾರೆ: ಡಾ ಅಶ್ವತ್ಥ್‌ ನಾರಾಯಣ್

ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್

ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್

ರೈತರು, ಮಹಿಳೆಯರು, ದೀನ ದಲಿತರ ಪರವಾಗಿ ಭರವಸೆ ಮೂಡಿಸುವ ಬಜೆಟ್ ಅನ್ನು ಕೊಟ್ಟಿದ್ದಾರೆ. ತೆರಿಗೆ ವಿನಾಯಿತಿಯನ್ನ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಿರೋದು ಸಂತಸದ ವಿಚಾರ. ತೆರಿಗೆ ಕಟ್ಟಲು ಉತ್ತೇಜನ ಆಗುವ ರೀತಿಯಲ್ಲಿ ಮಾಡಿದ್ದಾರೆ. ಮೂಲಭೂತ ಸೌಕರ್ಯಗಳನ್ನ ಹೆಚ್ಚಿಸಲು 10 ಲಕ್ಷ ಕೋಟಿ ಖರ್ಚು ಮಾಡಲಾಗ್ತಿದೆ ಎಂದು ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಸಂತಸ ವ್ಯಕ್ತಪಡಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2023-24 ನೇ ಸಾಲಿನ ಬಜೆಟ್‌ (India Budget 2023) ಮಂಡಿಸಿದ್ದಾರೆ. ಸಹಜವಾಗಿಯೇ ಒಂದಷ್ಟು ವಲಯಗಳಿಗೆ ಬಿಸಿ ಏರಿಕೆಯ ಬಿಸಿ ತಟ್ಟಿದರೆ, ಇನ್ನೊಂದಷ್ಟು ವಲಯಗಳಿಗೆ ನಿಟ್ಟುಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಎಂದಿನಂತೆ ಆಡಳಿತ ಪಕ್ಷದ ನಾಯಕರು ಕೇಂದ್ರ ಸರ್ಕಾರದ ಈ ಬಜೆಟ್‌ನ್ನು (Budget 2023) ಹೊಗಳಿದರೆ, ವಿರೋಧ ಪಕ್ಷದ ಮುಖಂಡರುಗಳು ಟೀಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್ (Dr CN Ashwath Narayan) ಅವರು ಕೇಂದ್ರದ ಬಜೆಟ್‌ ಕುರಿತು ಭರಪೂರ ಹೊಗಳಿಕೆಯ ಮಾತನ್ನಾಡಿದ್ದಾರೆ.


ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್, ಅದ್ಭುತವಾದ ಬಜೆಟ್‌ ಅನ್ನು ದೇಶಕ್ಕೆ ಕೊಟ್ಟಂತಹ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಸಂಪುಟಕ್ಕೆ ಧನ್ಯವಾದಗಳು. ರೈತರು, ಮಹಿಳೆಯರು, ದೀನ ದಲಿತರ ಪರವಾಗಿ ಭರವಸೆ ಮೂಡಿಸುವ ಬಜೆಟ್ ಅನ್ನು ಕೊಟ್ಟಿದ್ದಾರೆ. ತೆರಿಗೆ ವಿನಾಯಿತಿಯನ್ನ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಿರೋದು ಸಂತಸದ ವಿಚಾರ. ತೆರಿಗೆ ಕಟ್ಟಲು ಉತ್ತೇಜನ ಆಗುವ ರೀತಿಯಲ್ಲಿ ಮಾಡಿದ್ದಾರೆ. ಮೂಲಭೂತ ಸೌಕರ್ಯಗಳನ್ನ ಹೆಚ್ಚಿಸಲು 10 ಲಕ್ಷ ಕೋಟಿ ಖರ್ಚು ಮಾಡಲಾಗ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Nirmala Sitharaman Saree: ಇಳಕಲ್ ರೇಷ್ಮೆ ಸೀರೆಗೆ ನವಲಗುಂದದ ಕಸೂತಿ, ಕರುನಾಡಿನ ಸೀರೆಯುಟ್ಟು ಬಜೆಟ್ ಮಂಡಿಸಿದ ನಿರ್ಮಲಾ


'ಬಜೆಟ್‌ ತುಂಬಾ ಖುಷಿ ತಂದಿದೆ'


ಇನ್ನು, ರೈತರಿಗೆ 20 ಲಕ್ಷ ಕೋಟಿ ತನಕ ಕೃಷಿ ಕ್ಷೇತ್ರದ ಸಾಲವನ್ನು ಏರಿಕೆ ಮಾಡಿರುವುದು, ರೈತರಿಗೆ ಸಾಲದ ಸೌಲಭ್ಯಗಳನ್ನ ಹೆಚ್ಚಿಸಿರುವುದು, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಟ್ಟಿರೋದು ಸಂತೋಷದ ವಿಚಾರ ಎಂದ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ್, ಆ್ಯಪ್ಸ್‌ಗಳಿಗೆ ವಿನಾಯಿತಿ ಕೊಟ್ಟು ಉತ್ತೇಜನ ಮಾಡಿರೋದು, ವ್ಯವಸಾಯದಲ್ಲಿ ಆದಾಯ ಹೆಚ್ಚಿಸಲು ಉತ್ತಮ ಮಾರುಕಟ್ಟೆ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ ಎಂದರು.


ಇದನ್ನೂ ಓದಿ: Budget 2023: ಬಡವರಿಗೆ ಸರ್ಕಾರದ ಗಿಫ್ಟ್​, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!


ಅಲ್ಲದೇ, ವ್ಯವಸಾಯದಲ್ಲಿ ಡಿಜಿಟಿಲ್  ಫಾರ್ಮಿಂಗ್‌ಗೆ ಕೂಡ ಆದ್ಯತೆ ಕೊಟ್ಟಿದ್ದಾರೆ. ಸಸಿ, ಮರಗಳಿಗೆ ರೋಗ ಬಂದರೂ ಪತ್ತೆ ಹಚ್ಚಿ ಚಿಕಿತ್ಸೆ ಕೊಡುವ ತಂತ್ರ, ಕೌಶಲ್ಯಾಭಿವೃದ್ದಿಗೆ ಹೆಚ್ಚು ಉತ್ತೇಜನ ಕೊಟ್ಟಿರೋದು ಖುಷಿ ತಂದಿದೆ. ನಾಡಿನ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಹೇಳಿದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಸಕಾರಾತ್ಮಕ ಬಜೆಟ್ 


ಹುಬ್ಬಳ್ಳಿ : ಇನ್ನು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್‌ನಿಂದ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನ್ನು ಸ್ವಾಗತಿಸಲಾಗಿದೆ. ಈ ಸಂಬಂಧ ಮಾತನಾಡಿರುವ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ ಜವಳಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಸಕಾರಾತ್ಮಕ ಬಜೆಟ್ ಆಗಿದೆ. ಎಲ್ಲಾ ವಲಯಗಳ ಪ್ರಗತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳಲಾಗಿದೆ. ಚುನಾವಣಾ ಬಜೆಟ್ ಆಗಿರದೆ ದೇಶದ ಪ್ರಗತಿಗೆ ಪೂರಕವಾಗಿದೆ. ಕೃಷಿ, ಕೈಗಾರಿಕೆ, ನವೋದ್ಯಮ, ಡಿಜಿಟಲ್ ಎಲ್ಲ ಕ್ಷೇತ್ರಗಳ ಮೇಲೂ ಗಮನಕೊಟ್ಟಿದ್ದಾರೆ. ರೈಲ್ವೆ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಎಂದು ಹೇಳಿದರು.

Published by:Avinash K
First published: