ಮುನಿಸು ಮರೆತ ನಾಯಕರು; ಕುಂದಗೋಳ ಗೆಲುವಿಗೆ ಡಿಕೆ ಶಿವಕುಮಾರ್​​-ಸತೀಶ್​ ಜಾರಕಿಹೊಳಿ ರಣತಂತ್ರ

ಕುಂದಗೋಳ ಉಸ್ತುವಾರಿಯನ್ನು ಡಿಕೆ ಶಿವಕುಮಾರ್​​ ಅವರಿಗೆ ನೀಡಿದ್ದರ ಕುರಿತು ಈ ಹಿಂದೆ ಸತೀಶ್​ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇಂದು ಇಬ್ಬರು ನಾಯಕರು ತಮ್ಮ ನಡುವಿನ ಮುನಿಸು ಮರೆತು ಒಟ್ಟಿಗೆ ಸಭೆ ನಡೆಸಿದ್ದಾರೆ.

Seema.R | news18
Updated:May 8, 2019, 3:01 PM IST
ಮುನಿಸು ಮರೆತ ನಾಯಕರು; ಕುಂದಗೋಳ ಗೆಲುವಿಗೆ ಡಿಕೆ ಶಿವಕುಮಾರ್​​-ಸತೀಶ್​ ಜಾರಕಿಹೊಳಿ ರಣತಂತ್ರ
ಡಿಕೆ ಶಿವಕುಮಾರ್​-ಸತೀಶ್​ ಜಾರಕಿಹೊಳಿ
  • News18
  • Last Updated: May 8, 2019, 3:01 PM IST
  • Share this:
ಹುಬ್ಬಳ್ಳಿ (ಮೇ.08): ಕುಂದಗೋಳ ಉಸ್ತುವಾರಿ  ಹಂಚಿಕೆ ವಿಷಯದಲ್ಲಿ ವೈಮನಸ್ಸು ತೋರಿದ್ದ ಕಾಂಗ್ರೆಸ್​ ನಾಯಕರಾದ ಡಿಕೆ ಶಿವಕುಮಾರ್​, ಸತೀಶ್​ ಜಾರಕಿಹೊಳಿ  ತಮ್ಮ ನಡುವಿನ ಮುನಿಸು ಮರೆತು ಒಂದಾಗಿದ್ದಾರೆ.  ಉಪಚುನಾವಣೆಯಲ್ಲಿ ಗೆಲುವಿನ ಕುರಿತು ಇಬ್ಬರು ನಾಯಕರು ಇಂದು ಮಹತ್ವದ ಸಭೆ ನಡೆಸಿರುವುದು ವಿಶೇಷ.

ಕುಂದಗೋಳ ಉಪಚುನಾವಣೆ ಉಸ್ತುವಾರಿಯನ್ನು ಡಿಕೆ ಶಿವಕುಮಾರ್​ಗೆ ವಹಿಸಿದ್ದರ ಬಗ್ಗೆ ಸಚಿವ ಸತೀಶ್​ ಜಾರಕಿಹೊಳಿ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅವರ ಮುಂದೆ ಕೂಡ ಅಸಮಾಧಾನ ಹೊರಹಾಕಿದ್ದರು. ದಕ್ಷಿಣ ಕರ್ನಾಟಕದಲ್ಲಿ ಮೊದಲು ಕಾಂಗ್ರೆಸ್​ ಬಲ  ಹೆಚ್ಚಿಸಲಿ ನಂತರ ಉತ್ತರ ಕರ್ನಾಟಕದ ಕಡೆ ಮುಖ ಮಾಡಲಿ ಎಂದಿದ್ದರು. ಆದಾದ ಬಳಿಕ ಸಿದ್ದರಾಮಯ್ಯ ಇಬ್ಬರು ನಾಯಕರ ಮನವೊಲಿಕೆ ಮಾಡಿ ಒಟ್ಟಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು.

ಇದಾದ ನಂತರ ಇಬ್ಬರು ನಾಯಕರು ಕೂಡ ಕುಂದಗೋಳದಲ್ಲಿ ಪ್ರತ್ಯೇಕವಾಗಿ ಪ್ರಚಾರ ನಡೆಸಿದ್ದರು. ಇಂದು ಅವರು ಒಟ್ಟಾಗಿ ಕಾಣಿಸಿಕೊಂಡಿದ್ದು ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿಗೆ ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ರೆಸಾರ್ಟ್​ನಲ್ಲಿ ಕೈ ನಾಯಕರ ಮಹತ್ವದ ಸಭೆ ನಡೆಸಿ ಚುನಾವಣಾ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ.

ಇದನ್ನು ಓದಿ: ಪಿಯುಸಿಯಲ್ಲಿ ನನ್ನ ಮಗಳು ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ; ಉಮೇಶ್​ ಜಾಧವ್

ಈ ಹಿಂದೆ ಪಿಎಲ್​ಡಿ ಬ್ಯಾಂಕ್​ ಚುನಾವಣೆ ವಿಚಾರವಾಗಿ ತಮ್ಮ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್​ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸತೀಶ್​ ಜಾರಕಿಹೊಳಿ ದೂರಿದ್ದರು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಸತೀಶ್​ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್​ ನಡುವಿನ ವೈಮನಸ್ಸು ಕರಗಿದೆ. ಅಲ್ಲದೇ ಬರ ನಿರ್ವಹಣೆ ಸಂಬಂಧ ಜಲಸಂಪನ್ಮೂಲ ಇಲಾಖೆ ಸಭೆ ಕರೆದ ಡಿಕೆ ಶಿವಕುಮಾರ್​ ಕ್ರಮವನ್ನು ಸತೀಶ್​ ಪ್ರಶಂಸಿದ್ದರು.

ಇನ್ನು ಸಭೆಗೂ ಮುನ್ನ ಮಾತನಾಡಿದ ಅವರು,  ಸಿದ್ದರಾಮಯ್ಯ ನಮ್ಮ ನಾಯಕರು. ಇದರಲ್ಲಿ ಎರಡು ಮಾತಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಆಗುವ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ಕಾರಣ ಕುಮಾರಸ್ವಾಮಿ ಈ ಸಿಎಂ ಆಗಿದ್ದಾರೆ. ನಾಯಕರು ಎನ್ನುವುದು ಬೇರೆ. ಸಿಎಂ ಎನ್ನುವುದು ಬೇರೆ ಎಂದು ಸ್ಪಷ್ಟಪಡಿಸಿದರು.

 
First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading