ನಮ್ಮಣ್ಣ ಶ್ರೀರಾಮುಲು ಅವರಿಂದ ಪಾಠ ಕಲಿಯಬೇಕಾಗಿದೆ; ಸಚಿವ ಡಿ ಕೆ ಶಿವಕುಮಾರ್​ ವ್ಯಂಗ್ಯ

Latha CG
Updated:July 12, 2019, 4:02 PM IST
ನಮ್ಮಣ್ಣ ಶ್ರೀರಾಮುಲು ಅವರಿಂದ ಪಾಠ ಕಲಿಯಬೇಕಾಗಿದೆ; ಸಚಿವ ಡಿ ಕೆ ಶಿವಕುಮಾರ್​ ವ್ಯಂಗ್ಯ
ಡಿಕೆಶಿ
  • Share this:
ಬೆಂಗಳೂರು,(ಜು.12): ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಶ್ರೀರಾಮುಲು ನಮ್ಮಣ್ಣ. ನಮ್ಮ ಮೇಲೆ ಯಾರಿಗೆ ಜಾಸ್ತಿ ಪ್ರೀತಿ ಇರುತ್ತದೆಯೋ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ನನಗೂ ಬೆಳಗ್ಗೆ ಶ್ರೀರಾಮುಲು ನೆನಪಾಗಿತ್ತು. ಅವರು ಬೇರೆ ಬೇರೆ ನಾಯಕರೊಂದಿಗೆ ಡೀಲ್ ಕುದುರಿಸುತ್ತಿರುವ ಆಡಿಯೋ ನನ್ನ ಮೊಬೈಲ್​ಗೆ ಬಂದಿತ್ತು. ಹಾಗಾಗಿ, ನಾನೂ ಅವರನ್ನು ನೆನಪಿಸಿಕೊಂಡಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು,  "ಏನೇನೋ ಹೊಸ ಸುದ್ದಿ ಬರ್ತಿದೆ‌. ರಾಜೀನಾಮೆ ಕೊಡದೆ ಮಂತ್ರಿಯಾಗಿ ಮುಂದುವರೆಯಬಹುದಂತೆ.  ಈ ವಿಷಯದಲ್ಲಿ ನನಗೆ ಜ್ಞಾನ ಕಡಿಮೆ ಇದೆ‌. ನಾನು ಇನ್ನೂ ಸ್ವಲ್ಪ ವಿದ್ಯೆ ಕಲಿಯೋದಿದೆ. ನಾನು 7 ಬಾರಿ ಗೆದ್ದರೂ ಇದೆಲ್ಲಾ ಗೊತ್ತೇ ಇಲ್ಲ. ಈ ವಿಚಾರದಲ್ಲಿ ನನಗೆ ವಿದ್ಯೆ ಕಡಿಮೆ ಇದೆ. ಹಾಗಾಗಿ ನಾನು ಶ್ರೀರಾಮುಲು ಅವರಿಂದ ಸ್ವಲ್ಪ ಕಲಿಯೋದಿದೆ. ಹಾಗಾಗಿ ಯಾರೋ ವ್ಯಾಟ್ಸಪ್​ನಲ್ಲಿ ಕಳುಹಿಸಿದ್ದನ್ನು  ಪ್ರಿಂಟ್ ಔಟ್ ತೆಗೆದುಕೊಂಡಿದ್ದೇನೆ. ಅದನ್ನು ಸದನದಲ್ಲಿ ಇಟ್ಟು ಚರ್ಚೆ ಮಾಡುತ್ತೇನೆ," ಎಂದರು.

ಇಂದು ಮೂವರು ಅತೃಪ್ತ ಶಾಸಕರ ವಿಚಾರಣೆಗೆ ಸಮಯ ನೀಡಿದ್ದ ಸ್ಪೀಕರ್; ಈವರೆಗೆ ವಿಧಾನಸೌಧದತ್ತ ಒಬ್ಬ ಶಾಸಕರ ಸುಳಿವೂ ಇಲ್ಲ!

ಸರ್ಕಾರಕ್ಕೆ ಸಂಕಷ್ಟ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ 'ಹೌದಾ' ಎಂದು ಡಿಕೆಶಿ ಔಹಾರಿದರು. "ಯಾರು ಯಾರನ್ನ ಭೇಟಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಯಾರು ಯಾರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೋ ಅದು ಕೂಡ ನನಗೆ ಗೊತ್ತಿಲ್ಲ. ರಾಮುಲು ಮಾತನಾಡಿದ್ದಾರೋ, ಬಿ.ಸಿ.ಪಾಟೀಲ್ ಮಾತಾಡಿದ್ದಾರೋ ಗೊತ್ತಿಲ್ಲ. ನೋಡೋಣ ಸೋಮವಾರದಿಂದ ಅಧಿವೇಶನ ಇದೆ. ಅಲ್ಲಿ ಅವರವರ ಬಹುಮತ, ಅವರವರ ಶಕ್ತಿ, ಕಾರ್ಯಾಚರಣೆ ಎಲ್ಲವನ್ನೂ ನೋಡೋಣ ಎಂದರು.

First published:July 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ