ಮಧ್ಯರಾತ್ರಿಯೂ ಸಂಧಾನಕ್ಕೆ ಪ್ರಯತ್ನಿಸಿ ಸೋತ ಡಿ.ಕೆ. ಶಿವಕುಮಾರ್; ರಹಸ್ಯ ಸ್ಥಳದಲ್ಲಿ ಆಶ್ರಯಪಡೆದ ಅತೃಪ್ತರು!

ಯಶವಂತಪರ ಶಾಸಕ ಎಸ್.ಟಿ. ಸೋಮಶೇಖರ್ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಡಿಕೆಶಿ ಬಿಟಿಎಂ ಲೇಔಟ್​ನಲ್ಲಿರುವ ಅವರ ಮನೆಗೆ ತೆರಳಿದ್ದಾರೆ. ರಾತ್ರಿ 1.30 ಗಂಟೆಗೆ ಡಿಕೆಶಿ ಮನೆಗೆ ಬಂದಿರುವ ವಿಚಾರ ತಿಳಿದ ತಕ್ಷಣ ಎಸ್.ಟಿ. ಸೋಮಶೇಖರ್ ಏರ್​ಪೋರ್ಟ್​ನಿಂದ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.

MAshok Kumar | news18
Updated:July 11, 2019, 8:36 AM IST
ಮಧ್ಯರಾತ್ರಿಯೂ ಸಂಧಾನಕ್ಕೆ ಪ್ರಯತ್ನಿಸಿ ಸೋತ ಡಿ.ಕೆ. ಶಿವಕುಮಾರ್; ರಹಸ್ಯ ಸ್ಥಳದಲ್ಲಿ ಆಶ್ರಯಪಡೆದ ಅತೃಪ್ತರು!
ಎಸ್​.ಟಿ. ಸೋಮಶೇಖರ್, ಡಿ.ಕೆ. ಶಿವಕುಮಾರ್.
  • News18
  • Last Updated: July 11, 2019, 8:36 AM IST
  • Share this:
ಬೆಂಗಳೂರು (ಜುಲೈ.11); ಅತೃಪ್ತ ಶಾಸಕರ ಮನವೊಲಿಸಿ ಬೆಂಗಳೂರಿಗೆ ಕರೆದುಕೊಂಡು ಬರುವ ಸಲುವಾಗಿ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಮುಂಬೈಗೆ ತೆರಳಿದ್ದ ಪ್ರಯತ್ನ ವಿಫಲವಾದ ಹಿನ್ನೆಲೆ ಬೆಂಗಳೂರಿನಲ್ಲೂ ಮಧ್ಯರಾತ್ರಿ ಸಂಧಾನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದಾರೆ.

ಮುಂಬೈ ಪೊಲೀಸರು ಡಿ.ಕೆ. ಶಿವಕುಮಾರ್ ಅವರನ್ನು ನಿನ್ನೆ ಒತ್ತಾಯಪೂರ್ವಕವಾಗಿ ಬಂಧಿಸಿ ನಂತರ ವಿಮಾನ ಹತ್ತಿಸಿ ಬೆಂಗಳೂರಿಗೆ ಕಳಿಸಿದ್ದರು. ಡಿಕೆಶಿ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಂತೆ ಅತ್ತ ಕಡೆ ಅತೃಪ್ತರ ತಂಡ ಸಹ ರಹಸ್ಯವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ಪ್ರಸ್ತುತ ಅತೃಪ್ತ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರ ಮನವೊಲಿಸಲು ಡಿಕೆಶಿ ಮಧ್ಯರಾತ್ರಿ ಅವರ ಮನೆಗೆ ತೆರಳಿದ್ದಾರೆ.

ಯಶವಂತಪರ ಶಾಸಕ ಎಸ್.ಟಿ. ಸೋಮಶೇಖರ್ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಡಿಕೆಶಿ ಬಿಟಿಎಂ ಲೇಔಟ್​ನಲ್ಲಿರುವ ಅವರ ಮನೆಗೆ ತೆರಳಿದ್ದಾರೆ. ರಾತ್ರಿ 1.30 ಗಂಟೆಗೆ ಡಿಕೆಶಿ ಮನೆಗೆ ಬಂದಿರುವ ವಿಚಾರ ತಿಳಿದ ತಕ್ಷಣ ಎಸ್.ಟಿ. ಸೋಮಶೇಖರ್ ಏರ್​ಪೋರ್ಟ್​ನಿಂದ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದೆ ಡಿಕೆಶಿ ಸೋಮಶೇಕರ್ ಸೋಮಶೇಖರ್ ಮನೆಯಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಾ ಬಂಡಾಯ ಶಾಸಕರು ನಿನ್ನೆ ರಾತ್ರಿ ಬೆಂಗಳೂರಿಗೆ ತಲುಪಿದ್ದಾರೆ. ಆದರೆ, ಮನೆಯ ಬಳಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಜಮಾಯಿಸುವ ಸಾಧ್ಯತೆಯನ್ನು ಅರಿತು ಎಲ್ಲರೂ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಇನ್ನೂ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಎಲ್ಲಾ ಶಾಸಕರ ಮನೆಗೂ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಇದನ್ನೂ ಓದಿ : ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆ

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading