ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಆಪರೇಷನ್​ ಮಾಡಿದ್ದನ್ನು ಒಪ್ಪಿಕೊಳ್ಳಲಿ; ಡಿಕೆಶಿ​ ಕಿಡಿ

Latha CG | news18
Updated:July 14, 2019, 4:54 PM IST
ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಆಪರೇಷನ್​ ಮಾಡಿದ್ದನ್ನು ಒಪ್ಪಿಕೊಳ್ಳಲಿ; ಡಿಕೆಶಿ​ ಕಿಡಿ
ಸಚಿವ ಡಿ.ಕೆ.ಶಿವಕುಮಾರ್​
  • News18
  • Last Updated: July 14, 2019, 4:54 PM IST
  • Share this:
ಬೆಂಗಳೂರು,(ಜು.14): ಕಾಂಗ್ರೆಸ್​-ಜೆಡಿಎಸ್​ ಅತೃಪ್ತ ಶಾಸಕರು ದೋಸ್ತಿ ನಾಯಕರಿಗೆ ಕೈಕೊಟ್ಟು ಮುಂಬೈಗೆ ಹಾರಿದ್ದಾರೆ. ಅತೃಪ್ತ ಕಾಂಗ್ರೆಸ್​ ಶಾಸಕ ಎಂಟಿಬಿ ನಾಗರಾಜ್​,  ಸುಧಾಕರ್​ ಮುಂಬೈಗೆ ಹೋಗುವಾಗ ಬಿಜೆಪಿ ನಾಯಕ ಆರ್. ಅಶೋಕ್ ಉಪಸ್ಥಿತರಿದ್ದ ಹಿನ್ನೆಲೆ ಬಿಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.


'ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಆದರೆ ಹೋಟೆಲ್, ಬಾಂಬೆ, ದೆಹಲಿ, ಏರ್ ಪೋರ್ಟ್, ಫ್ಲೈಟ್​ ವ್ಯವಸ್ಥೆ ಸೇರಿದಂತೆ ಎಲ್ಲಾ ಆಪರೇಷನ್ ಬಿಜೆಪಿಯವರದ್ದೇ', ಎಂದು ಕಿಡಿಕಾರಿದರು.'ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬೇಕು. ನಾವು ಮಾಡುತ್ತಿದ್ದೇವೆ, ಈ ಆಪರೇಷನ್ ನಮ್ಮದೇ, ನಮಗೆ ಸಿಎಂ ಕುರ್ಚಿ ಬೇಕು ಅಂತ ಬಿಜೆಪಿ ನಾಯಕರು ‌ಒಪ್ಪಿಕೊಳ್ಳಬೇಕು. ಪಂಚಾಯಿತಿಗಳಲ್ಲಿ ನಡೆದ ಹಾಗೆ ನಾವು ಮಾಡುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಿ,' ಎಂದು ಆಗ್ರಹಿಸಿದರು. 'ನಾವು ಶಾಂತಿಪ್ರಿಯರು ಅಂತ ಬಿಜೆಪಿಯವರು ಇಂತಹ ಕೆಲಸ ಮಾಡಿದ್ದಾರೆ. ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ನಮಗೆ ಈಗಲೂ ವಿಶ್ವಾಸವಿದೆ. ವಿಶ್ವಾಸಮತ ಸಂದರ್ಭದಲ್ಲಿ ನಮ್ಮ ಶಾಸಕರು ನಮಗೆ ಬೆಂಬಲ ನೀಡುತ್ತಾರೆ. ಈಗಾಗಲೇ ಕಾರ್ಯಕರ್ತರು, ಜನರು ಶಾಸಕರಿಗೆ ರಾಜೀನಾಮೆ ನೀಡದಂತೆ ಮನವಿ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಕರುಣೆ ಬಂದು ನಮ್ಮ ಸರ್ಕಾರ ಉಳಿಸಿಕೊಳ್ಳುತ್ತಾರೆ. 

ನಮ್ಮ ಪರವಾಗಿ ಶಾಸಕರು ಮತ ಹಾಕುತ್ತಾರೆ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.


'ಎಂಟಿಬಿ ನಾಗರಾಜ್ ತಮ್ಮ‌ನೋವನ್ನು,ಕಷ್ಟವನ್ನು ಹೇಳಿಕೊಂಡಿದ್ದಾರೆ. ಯಾರ್ಯಾರ ಒತ್ತಡ ಏನು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಯಾವ ಒತ್ತಡ ಎಂಬುದನ್ನು ಹೇಳುವುದು ಈಗ ಬೇಡ,' ಎಂದರು.


ಬಿಎಸ್​ವೈಗೆ ತಿರುಗೇಟು:


ಸೋಮವಾರವೇ ವಿಶ್ವಾಸ ಮತ ಸಾಬೀತು ಪಡಿಸಬೇಕು ಎಂಬ ಬಿಎಸ್ ವೈ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. 'ಅವರು‌ ಮೊದಲು ಬಿಸ್ನೆಸ್ ಅಡ್ವೈಸರಿ ಕಮಿಟಿ ಮೀಟಿಂಗ್ ಗೆ ಬರಲಿ. ಮೀಟಿಂಗ್​​ಗೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೂಲ್ ಬುಕ್​​ನ್ನು ನೋಡಲಿ.  ಹಿಂದೆ ಮೀಟಿಂಗ್ ಅನ್ನು ಅವರು ಬಹಿಷ್ಕರಿಸಿದ್ದರು. ರೂಲ್ ಪುಸ್ತಕದ ಬಗ್ಗೆ ಅವರಿಗೆ ಗೌರವವಿಲ್ಲ. ಮೊದಲು ಕಾನೂನಿಗೆ ಗೌರವ ಕೊಡುವ ಕೆಲಸವನ್ನು ಬಿಜೆಪಿಯವರು ಮಾಡಲಿ,' ಎಂದು ಕಿಡಿಕಾರಿದರು.

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ