ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ; ಸಚಿವ ಡಿ ಕೆ ಶಿವಕುಮಾರ್

ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ. ಅತೃಪ್ತ ಶಾಸಕರು ರಾಜೀನಾಮೆ ವಾಪಸ್​ ಪಡೆಯುತ್ತಾರೆ ಎಂಬ ನಂಬಿಕೆ ನನಗಿದೆ-ಡಿಕೆಶಿ

Latha CG | news18
Updated:July 11, 2019, 12:50 PM IST
ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ; ಸಚಿವ ಡಿ ಕೆ ಶಿವಕುಮಾರ್
ಸಚಿವ ಡಿ.ಕೆ.ಶಿವಕುಮಾರ್​
  • News18
  • Last Updated: July 11, 2019, 12:50 PM IST
  • Share this:
ಬೆಂಗಳೂರು,(ಜು.11):  ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ಜರುಗುತ್ತಿವೆ. ಮೈತ್ರಿ ಸರ್ಕಾರದ ಉಳಿವಿಗಾಗಿ ದೋಸ್ತಿ ನಾಯಕರು ಪಣತೊಟ್ಟು ನಿಂತಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿ ಮಾಡಲು ನಿನ್ನೆ ಮಂಬೈಗೆ ತೆರಳಿದ್ದ ಸಚಿವ ಡಿಕೆ ಶಿವಕುಮಾರ್​ ಅತೃಪ್ತರ ಮೇಲೆ ಇನ್ನೂ ಸಹ ಭರವಸೆ ಇಟ್ಟಿದ್ದಾರೆ. ಇಂದು ಸಂಜೆ 6 ಗಂಟೆಗೆ ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್​ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕೆಂದು  ಸುಪ್ರೀಂ ಕೋರ್ಟ್​​ ಸೂಚನೆ ನೀಡಿದೆ. 

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿಕೆಶಿ, ಇಂದು ಸಂಜೆಯವರೆಗೆ ಸಮಯವಿದೆ. ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆದೀತು. ಶಾಸಕರು ನಮ್ಮೊಂದಿಗಿರುವ ಬಗ್ಗೆ ವಿಶ್ವಾಸವಿದೆ. ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಅತೃಪ್ತ ಶಾಸಕರು ಸಂಜೆ ಆರುಗಂಟೆ ಒಳಗೆ ಸ್ಪೀಕರ್ ಮುಂದೆ ಬರುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಸಂಜೆವರೆಗೆ ನಮಗೆ ಸಮಯವಿದೆ.  ರಾಜಕೀಯದಲ್ಲಿ ಯಾವ ಕ್ಷಣದಲ್ಲೂ ಬದಲಾವಣೆ ಆಗಬಹುದು. ಶಾಸಕರು ನಮ್ಮ ಜೊತೆ ಇದ್ದಾರೆ. ನಮಗೆ ನಂಬಿಕೆ ಇದೆ. ಎಲ್ಲರೂ ವಾಪಾಸ್​ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಸಂಜೆಯೊಳಗೆ ರಾಜಧಾನಿಗೆ ಬಂದು ಮತ್ತೊಮ್ಮೆ ರಾಜೀನಾಮೆ ನೀಡುತ್ತೇವೆ; ಬಿಸಿ ಪಾಟೀಲ್​​

ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ. ಅತೃಪ್ತ ಶಾಸಕರು ರಾಜೀನಾಮೆ ವಾಪಸ್​ ಪಡೆಯುತ್ತಾರೆ ಎಂಬ ನಂಬಿಕೆ ನನಗಿದೆ. ಸುಪ್ರೀಂಕೋರ್ಟ್ ಏನು ಹೇಳುತ್ತೋ ನೋಡೋಣ, ಸಂಜೆ 6ಗಂಟೆಯವರೆಗೆ ಸಮಯವಿದೆ.   ಶಾಸಕರನ್ನು ವಾಪಾಸ್ ಕರೆಸಿಕೊಳ್ಳುತ್ತೇವೆ. ನಮ್ಮ‌ ಕಡೆ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ನಿನ್ನೆ ಸಚಿವ ಡಿಕೆ ಶಿವಕುಮಾರ್​ ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದರು. ಡಿಕೆಶಿ ಮುಂಬೈಗೆ ಬರುತ್ತಿರುವ ವಿಷಯ ತಿಳಿದು ಅವರಿಂದ ರಕ್ಷಣೆ ಕೋರಿ ರೆಬೆಲ್​ ನಾಯಕರು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್​ ಸುತ್ತಮುತ್ತ 2000ಕ್ಕೂ ಅಧಿಕ ಪೊಲೀಸರು ಬೀಡು ಬಿಟ್ಟಿದ್ದು, ಡಿಕೆ ಶಿವಕುಮಾರ್​ಗೆ ನಿರ್ಬಂಧ ವಿಧಿಸಿದ್ದರು. ಹೋಟೆಲ್​ ಒಳಗೆ ತೆರಳಲು ಯತ್ನಿಸಿದ್ದ ಡಿಕೆ ಶಿವಕುಮಾರ್​ರನ್ನು ಪೊಲೀಸರು ಮತ್ತು ಹೋಟೆಲ್​ ಸಿಬ್ಬಂದಿ ತಡೆದಿದ್ದರು. ಇದರ ಬೆನ್ನಲ್ಲೇ ಹೋಟೆಲ್​ ಒಳಕ್ಕೆ ಬಿಡುವವರೆಗೂ ಹೋಟೆಲ್​ ಮುಂದೆಯೇ ಕುಳಿತು ಪ್ರತಿಭಟನೆ ಮಾಡಲು ಆರಂಭಿಸಿದ್ದರು. ಬಳಿಕ ಮುಂಬೈ ಪೊಲೀಸರು ಸಚಿವ ಡಿಕೆಶಿವಕುಮಾರ್​, ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ ಅವರನ್ನು ವಶಕ್ಕೆ ಪಡೆದಿದ್ದರು.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ