ನನ್ನನ್ನು ಒಳಗೆ ಕರೆಸಿಕೊಳ್ಳೋಕೆ ನಮ್ಮವರು ಪ್ರಯತ್ನಿಸಿದರೂ ಬಿಜೆಪಿ ಬಿಡಲಿಲ್ಲ; ಬೆಂಗಳೂರಿನಲ್ಲಿ ಆಕ್ರೋಶ ಹೊರಹಾಕಿದ ಸಚಿವ ಡಿಕೆಶಿ

 ನಮ್ಮ ಮಿತ್ರರನ್ನು ಬಂಧನದಲ್ಲಿಟ್ಟು ಬಿ.ಜೆ.ಪಿಯವರು ಕಾವಲು ಕಾಯುತ್ತಿದ್ದಾರೆ. ನಮ್ಮವರು ನನ್ನನ್ನ ಒಳಗೆ ಕರೆದುಕೊಂಡು ಬರೋಕೆ ಸಾಕಷ್ಟು ಪ್ರಯತ್ನ ಪಡ್ತಾ ಇದ್ದರು. ಅವರನ್ನು ಗನ್​ ಪಾಯಿಂಟ್​ನಲ್ಲಿಟ್ಟು ಒಳಗೆ ಹೇಳಿಕೆ ಕೊಡಿಸ್ತಾ ಇದ್ದರು ಎಂದು ಡಿಕೆಶಿ ಆರೋಪಿಸಿದ್ದಾರೆ.

Sushma Chakre | news18
Updated:July 11, 2019, 8:12 AM IST
ನನ್ನನ್ನು ಒಳಗೆ ಕರೆಸಿಕೊಳ್ಳೋಕೆ ನಮ್ಮವರು ಪ್ರಯತ್ನಿಸಿದರೂ ಬಿಜೆಪಿ ಬಿಡಲಿಲ್ಲ; ಬೆಂಗಳೂರಿನಲ್ಲಿ ಆಕ್ರೋಶ ಹೊರಹಾಕಿದ ಸಚಿವ ಡಿಕೆಶಿ
ಡಿ.ಕೆ ಶಿವಕುಮಾರ್​​
  • News18
  • Last Updated: July 11, 2019, 8:12 AM IST
  • Share this:
ಬೆಂಗಳೂರು (ಜು.11): ಅತೃಪ್ತ ಶಾಸಕರ ಮನವೊಲಿಕೆಗೆ ಮುಂಬೈಗೆ ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ನಿನ್ನೆ ತಡರಾತ್ರಿ ಬರಿಗೈಯಲ್ಲಿ ಬೆಂಗಳೂರಿಗೆ  ವಾಪಾಸಾಗಿದೆ.

ಮುಂಬೈನ ರೆನೈಸನ್ಸ್​ ಹೋಟೆಲ್ ಎದುರು ಅತೃಪ್ತರ ಭೇಟಿಗಾಗಿ ನಿನ್ನೆ ಬೆಳಗ್ಗೆಯಿಂದ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್​ ಅವರಿಂದ ಮುಂಬೈನಲ್ಲಿ ಹೈಡ್ರಾಮ ಸೃಷ್ಟಿಯಾಗಿತ್ತು. ಅತೃಪ್ತರ ಭೇಟಿಗೆ ಗೇಟಿನ ಒಳಗೆ ಹೋಗಲು ಅವಕಾಶ ನೀಡದ ಪೊಲೀಸರು ಡಿಕೆಶಿ ಅವರನ್ನು ರಸ್ತೆಯಲ್ಲೇ ಕುಳಿತು ಕಾಯುವಂತೆ ಮಾಡಿದ್ದರು. ಬಳಿಕ, ಮಧ್ಯಾಹ್ನದ ವೇಳೆಗೆ ಮುಂಬೈ ಪೊಲೀಸರು ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಗೆಸ್ಟ್​ಹೌಸ್​ಗೆ ಕರೆದೊಯ್ದಿದ್ದರು. ಇದರಿಂದ ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರು ರೊಚ್ಚಿಗೆದ್ದಿದ್ದರು.

ಈ ಎಲ್ಲ ಬೆಳವಣಿಗೆಗಳ ನಂತರ ನಿನ್ನೆ ತಡರಾತ್ರಿ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಆಗಮಿಸಿದ್ದಾರೆ. ಟ್ರಬಲ್ ಶೂಟರ್ ಡಿಕೆಶಿಯ ಪ್ರಯತ್ನವೂ ವಿಫಲವಾಗಿರುವುದರಿಂದ ಕಾಂಗ್ರೆಸ್​ ನಾಯಕರು ಕಂಗಾಲಾಗಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್ ಜೊತೆಗೆ ತೆರಳಿದ್ದ ಸಚಿವ ಜಿ.ಟಿ. ದೇವೇಗೌಡ, ಶಿವರಾಮೇಗೌಡ ಕೂಡ ಬೆಂಗಳೂರಿಗೆ ವಾಪಾಸಾಗಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರಗಳ ಸಾಧ್ಯತೆ

ಈ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿರುವ ಸಚಿವ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಗಳಿಗೆ ತೀರಾ ಹತ್ತಿರದವರೇ ಅತೃಪ್ತಿ ಹೊರ ಹಾಕಿದ್ದಾರೆ. ಅವರ ಹೆಸರನ್ನು ನಾನು ಬಹಿರಂಗಪಡಿಸುವುದಿಲ್ಲ. ನಾನು ಮೊದಲೇ ಹೋಗಬೇಕು ಅನ್ನೋ ತೀರ್ಮಾನ ಮಾಡಿದ್ದೆ. ಮುಖ್ಯಮಂತ್ರಿಗಳ ಜೊತೆ ನಾನು ಹೋಗೋಕೆ ತೀರ್ಮಾನ ಆಗಿತ್ತು. ಒಂದು ಸಂಸಾರದ ಒಂದೇ ಕುಟುಂಬದಲ್ಲಿ ಬೇಸರಗಳು ಅಣ್ಣ-ತಮ್ಮಂದಿರ ಮಧ್ಯೆ ಉಂಟಾಗುತ್ತವೆ. ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಶಾಶ್ವತವಲ್ಲ ಎಂದಿದ್ದಾರೆ.

ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆ

ಬಹಳ ಕಷ್ಟಪಟ್ಟು ಚುನಾವಣೆಗಳಲ್ಲಿ ಗೆದ್ದಿದಾರೆ. 30-40 ವರ್ಷಗಳ ಹೋರಾಟದ ಫಲವಾಗಿ ಗೆದ್ದಿದಾರೆ. ಗೆಲುವಿನ ಹಿಂದೆ ಸಾಕಷ್ಟು ಕಾರ್ಯಕರ್ತರ ಶ್ರಮ ಇದೆ. ಮತ್ತೆ ಚುನಾವಣೆ ಮಾಡಿದರೆ ಸಾರ್ವಜನಿಕರ ಹಣ ಪೋಲಾಗುತ್ತದೆ. ಮಂಗಳವಾರ ರಾತ್ರಿ ಬಿಜೆಪಿ ನಾಯಕರಾದ ಆರ್. ಅಶೋಕ್, ಬೋಪಯ್ಯ 4-5 ಜನರ ಹತ್ತಿರ ಸಹಿ ಮಾಡಿಸ್ಕೊಂಡು ನಾವು ಬಂದ್ರೆ ಬಿಡದ ಹಾಗೆ ದೂರು ನೀಡಿಸಿದ್ದರು. ನಮ್ಮ ಮಿತ್ರರನ್ನು ಬಂಧನದಲ್ಲಿಟ್ಟು ಬಿ.ಜೆ.ಪಿಯವರು ಕಾವಲು ಕಾಯುತ್ತಿದ್ದಾರೆ. ನಮ್ಮವರು ನನ್ನನ್ನ ಒಳಗೆ ಕರೆದುಕೊಂಡು ಬರೋಕೆ ಸಾಕಷ್ಟು ಪ್ರಯತ್ನ ಪಡ್ತಾ ಇದ್ದರು. ಅವರನ್ನು ಗನ್​ ಪಾಯಿಂಟ್​ನಲ್ಲಿಟ್ಟು ಒಳಗೆ ಹೇಳಿಕೆ ಕೊಡಿಸ್ತಾ ಇದ್ದರು ಎಂದು ಡಿಕೆಶಿ ಆರೋಪಿಸಿದ್ದಾರೆ.ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಶುಕ್ರವಾರ ರಾಜೀನಾಮೆ? ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ಮೇಲೆ ಹೆಚ್​ಡಿಕೆ ಮುನಿಸು

ಶಾಸಕರೊಂದಿಗೆ ಭೇಟಿ ಮಾಡಲು ಬಿಜೆಪಿ ಸರ್ಕಾರ, ಮುಂಬೈ ಪೊಲೀಸರು ಬಿಡಲಿಲ್ಲ. ಅದಕ್ಕೆ ನಾನು ಜಗ್ಗದಿದ್ದಾಗ ಪೊಲೀಸರು ಗೆಸ್ಟ್ ಹೌಸ್ ನಲ್ಲಿ ಇಟ್ಟು ನಮ್ಮನ್ನ ಹೊರಗೆ ಹಾಕಿದರು. ಸಾವಿರಾರು ಜನ ಸ್ನೇಹಿತರು, ಬೆಂಬಲಿಗರು ಬಂದು ಸಹಕಾರ ಕೊಟ್ರೆ ನಾವೇನು ಮಾಡೋಕೆ ಆಗುತ್ತದೆ? 144 ಸೆಕ್ಷನ್ ಜಾರಿ ಮಾಡಿ ಹೊರಗೆ ಹಾಕಿದರು. ನಾವು ಶಿಸ್ತಿನ ಜನ, ಕಾನೂನು ಕಾಪಾಡೋ ಜನ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಕಾಂಗ್ರೆಸ್​ ನಾಯಕರು ಮುಂದಿನದ್ದನ್ನು ನೋಡಿಕೊಳ್ಳುತ್ತಾರೆ. ಇನ್ನೇನಿದ್ದರೂ ಸಂಧಾನವಿಲ್ಲ, ಹೋರಾಟ ಮಾಡುವುದಷ್ಟೇ ನಮ್ಮ ಮುಂದಿರುವ ಆಯ್ಕೆ ಎಂದು ಹೇಳಿದ್ದಾರೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ