ಬಿಜೆಪಿ ಶ್ರೀಮಂತ್ ಪಾಟೀಲ್​​ರನ್ನು ಕಿಡ್ನಾಪ್​​ ಮಾಡಿದೆ; ನಮಗೆ ರಕ್ಷಣೆ ಕೊಡಿಸಿ ಎಂದು ಸ್ಪೀಕರ್​​ಗೆ ಮನವಿ ಮಾಡಿದ ಡಿಕೆಶಿ

ಮೈತ್ರಿ ಸರಕಾರ ಪತನದ ಭೀತಿ ಎದುರಿಸುತ್ತಿರುವ ಜೆಡಿಎಸ್‌ ಕೊನೇ ಅಸ್ತ್ರವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಬಳಸಲು ಮುಂದಾಗಿದೆ. ತನ್ನ ಮೂವರು ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದೆ.

Ganesh Nachikethu | news18
Updated:July 18, 2019, 4:14 PM IST
ಬಿಜೆಪಿ ಶ್ರೀಮಂತ್ ಪಾಟೀಲ್​​ರನ್ನು ಕಿಡ್ನಾಪ್​​ ಮಾಡಿದೆ; ನಮಗೆ ರಕ್ಷಣೆ ಕೊಡಿಸಿ ಎಂದು ಸ್ಪೀಕರ್​​ಗೆ ಮನವಿ ಮಾಡಿದ ಡಿಕೆಶಿ
ಡಿ.ಕೆ. ಶಿವಕುಮಾರ್
  • News18
  • Last Updated: July 18, 2019, 4:14 PM IST
  • Share this:
ಬೆಂಗಳೂರು(ಜುಲೈ.18): ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಿಂದ ಹೇಗೆ ನಾಪತ್ತೆಯಾಗಿದ್ದಾರೆ ಎಂಬುದರ ಬಗ್ಗೆ ಸದನದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. "ಶ್ರೀಮಂತ ಪಾಟೀಲ್​ ಅವರನ್ನು ಬಿಜೆಪಿಯವರೇ ಕಿಡ್ನಾಪ್​​ ಮಾಡಿದ್ದಾರೆ. ಈಗಲೇಬೇಕಾದರೆ ನಾನು ಅಪಹರಣದ ದಾಖಲೆ ಕೊಡಬಲ್ಲೇ" ಎಂದು ಸಚಿವ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರ ಮೇಲೆ​ ಗಂಭೀರ ಆರೋಪ ಎಸಗಿದ್ದಾರೆ.

ಶ್ರೀಮಂತ ಪಾಟೀಲ್​​ ಸದನಕ್ಕೆ ಹಾಜರಾಗುತ್ತೇನೆ ಎಂದರೂ ಬಿಜೆಪಿ ಬಿಡುತ್ತಿಲ್ಲ. ಇಂಡಿಗೋ ವಿಮಾನದಲ್ಲಿ ಕರೆದೊಯ್ದು ಮುಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಮಲಗಿರೋ ತರ ಫೋಟೊ ಹೊಡೆದು ಫೋಟೊ ರಿಲೀಸ್ ಮಾಡಿದ್ದಾರೆ. ತಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದರೂ, ಬಲವಂತವಾಗಿ ಅಪಹರಿಸಲಾಗಿದೆ. ಹಾಗಾಗಿ ನೀವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಕಾಂಗ್ರೆಸ್​​ ಶಾಸಕರಿಗೆ ರಕ್ಷಣೆ ಕೊಡಿಸಬೇಕು ಎಂದು ಸ್ಪೀಕರ್​​ಗೆ ಸಚಿವ ಡಿ.ಕೆ ಶಿವಕುಮಾರ್​​ ಮನವಿ ಮಾಡಿದ್ದಾರೆ.

ಹೌದು, ಶಾಸಕ ಶ್ರೀಮಂತ್ ಪಾಟೀಲ್ ನಿನ್ನೆ (ಬುಧವಾರ) ರಾತ್ರಿಯೇ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎದೆ ನೋವಿನ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ: ಶ್ರೀರಾಮುಲುಗೆ ಡಿಸಿಎಂ ಆಫರ್ ಕೊಟ್ರಾ ಡಿಕೆಶಿ?; ಅನುಮಾನಕ್ಕೆ ಕಾರಣವಾಗಿದೆ ಸದನದಲ್ಲಿ ಇಬ್ಬರು ನಾಯಕರ ನಡುವಿನ ಮಾತುಕತೆ!

ರಮೇಶ್ ಜಾರಕಿಹೊಳಿ ಬೆಂಬಲಿಗರಾದ ಶ್ರೀಮಂತ್ ಪಾಟೀಲ್ ಹೆಸರು ಅತೃಪ್ತ ಶಾಸಕರ ಪಟ್ಟಿಯಲ್ಲಿತ್ತು. ಸದ್ಯದ ಮಾಹಿತಿ ಪ್ರಕಾರ ಅರಬಾವಿ ಬಿಜೆಪಿ‌‌ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಯತ್ನದಿಂದ, ಶ್ರೀಮಂತ್ ಪಾಟೀಲ್ ಕಾಂಗ್ರೆಸ್‌ಗೆ ಕೈ ಕೊಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೈತ್ರಿ ಸರಕಾರ ಪತನದ ಭೀತಿ ಎದುರಿಸುತ್ತಿರುವ ಜೆಡಿಎಸ್‌ ಕೊನೇ ಅಸ್ತ್ರವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಬಳಸಲು ಮುಂದಾಗಿದೆ. ತನ್ನ ಮೂವರು ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಸದ್ಯಕ್ಕೆ ಆಡಳಿತ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳೆರಡೂ ಸಂಖ್ಯಾಬಲ ತಮ್ಮ ಪರವಾಗಿಯೇ ಇದೆ ಎಂದು ಪ್ರತಿಪಾದಿಸುತ್ತಿವೆ.
-------------
First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading