• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ವಾರಣಾಸಿಗೆ ಬಾರದ ಅಚ್ಚೆದಿನ ಭಾರತಕ್ಕೆ ಬಂದೀತೆ?; ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನೆ

ವಾರಣಾಸಿಗೆ ಬಾರದ ಅಚ್ಚೆದಿನ ಭಾರತಕ್ಕೆ ಬಂದೀತೆ?; ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನೆ

ಸಚಿವ ಡಿ.ಕೆ. ಶಿವಕುಮಾರ್

ಸಚಿವ ಡಿ.ಕೆ. ಶಿವಕುಮಾರ್

lok sabha elections 2019: ಮೋದಿಯ 5 ವರ್ಷದ ಆಡಳಿತ ಅವಧಿ ಮುಗಿದರು ವಾರಣಾಸಿಯ ಗಂಗೆ ಮಾತ್ರ ಶುದ್ಧವಾಗಿಲ್ಲ. ಇನ್ನೂ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿದ್ದರು. ಆದರೆ, ಉದ್ಯೋಗ ಎಲ್ಲಿ ಸೃಷ್ಟಿಯಾಗಿದೆ? ಜನ ಇನ್ನು ಎಷ್ಟು ದಿನ ಅಂತ ಸುಳ್ಳು ಹೇಳುವವರನ್ನು ನಂಬುತ್ತಾರೆ?” ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಮುಂದೆ ಓದಿ ...
  • News18
  • 5-MIN READ
  • Last Updated :
  • Share this:

    ರಾಮನಗರ (ಏ.18) : ಭಾರತದಲ್ಲಿ ಅಚ್ಚೆ ದಿನಾನು ಇಲ್ಲ, ಭಾರತ ಸ್ವಚ್ಚಾನು ಆಗಿಲ್ಲ. ಇನ್ನೂ ವಾರಣಾಸಿಗೆ ಬಾರದ ಅಚ್ಚೆದಿನ ಭಾರತಕ್ಕೆ ಬಂದೀತೆ? ಎಂದು ಪ್ರಶ್ನೆ ಮಾಡುವ ಮೂಲಕ ಸಚಿವ ಡಿ.ಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಅಪಹಾಸ್ಯ ಮಾಡಿದ್ದಾರೆ.

    ಕನಕಗಿರಿ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿರುವ ಡಿ.ಕೆ. ಶಿವಕುಮಾರ್, “ಕಳೆದ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಸಾಕಷ್ಟು ಆಶ್ವಾಸನೆಗಳನ್ನು ನೀಡಿದ್ದರು. ಆದರೆ, ಯಾವ ಆಶ್ವಾಸನೆಯೂ ಈಡೇರಿಸಿಲ್ಲ. ಅಚ್ಚೆ ದಿನವಂತೆ ಎಲ್ಲಿಬಂದಿದೆ ಅಚ್ಚೆ ದಿನ? ಅವರದೇ ಕ್ಷೇತ್ರವಾದ ವಾರಣಾಸಿಗೆ ಅಚ್ಚೆದಿನ ಬರಲಿಲ್ಲ ಇನ್ನೂ ಭಾರತಕ್ಕೆ ಎಲ್ಲಿಬರಬೇಕು ಅಚ್ಚೆದಿನ ” ಎಂದು ಕಿಡಿಕಾರಿದರು.

    ಇದನ್ನೂ ಓದಿ : ಛತ್ತೀಸ್​ಗಢದಲ್ಲಿ ಪೊಲೀಸರ ಎನ್​ಕೌಂಟರ್​ಗೆ ಇಬ್ಬರು ನಕ್ಸಲರು ಬಲಿ

    “ನರೇಂದ್ರ ಮೋದಿ ಸ್ವಚ್ಚ ಭಾರತದ ಅಡಿಯಲ್ಲಿ ವಾರಣಾಸಿಯ ಗಂಗೆಯನ್ನು ಶುದ್ಧ ಮಾಡುವ ಭರವಸೆ ನೀಡಿದ್ದರು. ಆದರೆ, 5 ವರ್ಷದ ಆಡಳಿತ ಅವಧಿ ಮುಗಿದರು ವಾರಣಾಸಿಯ ಗಂಗೆ ಮಾತ್ರ ಶುದ್ಧವಾಗಿಲ್ಲ. ಇನ್ನೂ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿದ್ದರು. ಆದರೆ, ಉದ್ಯೋಗ ಎಲ್ಲಿ ಸೃಷ್ಟಿಯಾಗಿದೆ? ಜನ ಇನ್ನು ಎಷ್ಟು ದಿನ ಅಂತ ಸುಳ್ಳು ಹೇಳುವವರನ್ನು ನಂಬುತ್ತಾರೆ?” ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಅವರು, “ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ. ಜನರ ಆಶೀರ್ವಾದ ಅವರ ಮೇಲಿದೆ. ಅಲ್ಲದೆ ಈ ಬಾರಿ ಮೈತ್ರಿ ಪಕ್ಷಗಳು ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    First published: