ಹರಕೆ ತೀರಿಸಿದ ಸಚಿವ ಡಿಕೆಶಿ; ಬಳ್ಳಾರಿಯ ಆ ಎರಡು ದೇವಸ್ಥಾನಕ್ಕೆ ಕೊಟ್ಟಿದ್ದೇನು?

ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇವಸ್ಥಾನ ಹಾಗೂ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಡಿ ಕೆ ಶಿವಕುಮಾರ್ ಹರಕೆ ತೀರಿಸಿದರು. ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಹೊತ್ತ ಹರಕೆಯಂತೆ ಶ್ರೀ ಕನಕದುರ್ಗಮ್ಮ ದೇವಿಗೆ ಉಡಿ ತುಂಬಿಸಿದರು. ಮುತ್ತೈದೆ ಮಹಾದೇವಿಯಾದ ಕನಕದುರ್ಗೆಗೆ ಅಕ್ಕಿ-ಬೇಳೆ, ಬೆಲ್ಲ-ಕೊಬ್ಬರಿ, ಕಣ ನೀಡಿ ಹರಕೆ ತೀರಿಸಿದರು

G Hareeshkumar | news18
Updated:November 20, 2018, 1:07 PM IST
ಹರಕೆ ತೀರಿಸಿದ ಸಚಿವ ಡಿಕೆಶಿ; ಬಳ್ಳಾರಿಯ ಆ ಎರಡು ದೇವಸ್ಥಾನಕ್ಕೆ ಕೊಟ್ಟಿದ್ದೇನು?
ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇವಸ್ಥಾನ ಹಾಗೂ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಡಿ ಕೆ ಶಿವಕುಮಾರ್ ಹರಕೆ ತೀರಿಸಿದರು. ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಹೊತ್ತ ಹರಕೆಯಂತೆ ಶ್ರೀ ಕನಕದುರ್ಗಮ್ಮ ದೇವಿಗೆ ಉಡಿ ತುಂಬಿಸಿದರು. ಮುತ್ತೈದೆ ಮಹಾದೇವಿಯಾದ ಕನಕದುರ್ಗೆಗೆ ಅಕ್ಕಿ-ಬೇಳೆ, ಬೆಲ್ಲ-ಕೊಬ್ಬರಿ, ಕಣ ನೀಡಿ ಹರಕೆ ತೀರಿಸಿದರು
  • News18
  • Last Updated: November 20, 2018, 1:07 PM IST
  • Share this:
- ಶರಣು ಹಂಪಿ

ಬಳ್ಳಾರಿ (ನ.20) :  ರೆಡ್ಡಿ-ರಾಮುಲು ಪ್ರಾಬಲ್ಯವಿರುವ ಬಳ್ಳಾರಿಯ ಕೋಟೆಗೆ ಕಾಂಗ್ರೆಸ್ ಲಗ್ಗೆಯಿಟ್ಟಿದೆ. ಈ ಬಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಭರ್ಜರಿಯಾಗಿ ಗೆಲ್ಲುವುದರ ಮೂಲಕ ಇತಿಹಾಸ ಸೃಷ್ಟಿಸಿದೆ. ದೈವಭಕ್ತರಾಗಿರುವ ಡಿಕೆಶಿ ಮೆಲುಗೈ ಸಾಧಿಸಲು ಬಳ್ಳಾರಿಯ 'ಶಿವ-ದೇವಿ'ಯೇ ಕಾರಣ! ಐತಿಹಾಸಿಕ ಗೆಲುವಿನ ನಂತರ ಬಳ್ಳಾರಿಗೆ ಭೇಟಿ ನೀಡಿದ ಸಚಿವ ಡಿಕೆಶಿ ಮೊದಲು ಹೋಗಿದ್ದೆಲ್ಲಿ? ಎಲ್ಲೆಲ್ಲಿ ಹರಕೆ ತೀರಿಸಿದರು ಗೊತ್ತಾ?

ಇದನ್ನು ಓದಿ :  ಶ್ರೀರಾಮುಲು ದೊಡ್ಡವರು, ಅವರು ಗೆಲ್ಲಬೇಕು; ಡಿಕೆ ಶಿವಕುಮಾರ್​ ವ್ಯಂಗ್ಯ

ಗಣಿನಾಡು ಬಳ್ಳಾರಿಯಲ್ಲಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿತು. ಇದಕ್ಕೆ ಕಾರಣ ಬಳ್ಳಾರಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಡಿಕೆ ಶಿವಕುಮಾರ್. ಬಳ್ಳಾರಿ ಇತಿಹಾಸದಲ್ಲಿಯೇ 2.43 ಲಕ್ಷ ಮತಗಳಿಂದ ಇದುವರೆಗೂ ಯಾರೂ ಗೆದ್ದಿಲ್ಲ. ಚುನಾವಣೆ ಬಳಿಕ ಬಳ್ಳಾರಿಗೆ ಆಗಮಿಸಿದ ಡಿಕೆ ಶಿವಕುಮಾರ್ ಮೊದಲು ಹೋಗಿದ್ದು ಬಳ್ಳಾರಿಯ ಆ ಎರಡು ಪ್ರಮುಖ ದೇವಸ್ಥಾನಗಳಿಗೆ. ಐತಿಹಾಸಿಕ ಹೆಸರುವಾಸಿಯಾಗಿರುವ ನಗರದ ಕೋಟೆ ಪ್ರದೇಶದಲ್ಲಿರುವ ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿದ ಡಿ ಕೆ ಶಿವಕುಮಾರ್ ಚುನಾವಣೆಯಲ್ಲಿ ಹರಕೆ ಹೊತ್ತುಕೊಂಡಿದ್ದರು.

ಅದರಂತೆ ದೇವರ ದರ್ಶನ ಪಡೆದು 25 ಸಾವಿರ ಮೌಲ್ಯದ ಬೆಳ್ಳಿ ಚೆಂಬು ನೀಡಿ, ಅದರಲ್ಲಿ ದೇವರಿಗೆ ಪೂಜಾರಿ ಮೂಲಕ ಕ್ಷೀರಾಭಿಷೇಕ ಮಾಡಿಸಿದರು. ಈ ಹಿಂದೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೊದಲು ದರ್ಶನ ಪಡೆದಿದ್ದು ಇದೇ ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇವಸ್ಥಾನದಲ್ಲಿ! ದೇವರಿಗೆ ಹರಕೆ ತೀರಿಸಿದ ಡಿಕೆಶಿ ಕೋಟೆ ಸಾಕಷ್ಟು ಮಾಹಿತಿ ಪಡೆದೇ ಈ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಮಲ್ಲೇಶನ ಮಹಿಮೆಯನ್ನು ನೆನಪಿಸಿಕೊಂಡರು.

ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇವಸ್ಥಾನದ ಬಳಿಕ ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಡಿ ಕೆ ಶಿವಕುಮಾರ್ ಅಲ್ಲಿಯೂ ಸಹ ಹರಕೆ ತೀರಿಸಿದರು. ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಹೊತ್ತ ಹರಕೆಯಂತೆ ಶ್ರೀ ಕನಕದುರ್ಗಮ್ಮ ದೇವಿಗೆ ಉಡಿ ತುಂಬಿಸಿದರು. ಮುತ್ತೈದೆ ಮಹಾದೇವಿಯಾದ ಕನಕದುರ್ಗೆಗೆ ಅಕ್ಕಿ-ಬೇಳೆ, ಬೆಲ್ಲ-ಕೊಬ್ಬರಿ, ಕಣ ನೀಡಿ ಹರಕೆ ತೀರಿಸಿದರು.

ಇನ್ನು ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೇ ಬರೋಬ್ಬರಿ 1.30 ಲಕ್ಷ ಮೌಲ್ಯದ ಬೆಳ್ಳಿ ಖಡ್ಗವನ್ನು ಮಾಡಿಸಿ ದೇವಿಗೆ ಕೊಟ್ಟಿದ್ದರು. ಸಚಿವ ಡಿ ಕೆ ಶಿವಕುಮಾರ್ ಬೆಳ್ಳಿ ಖಡ್ಗ ನೀಡಿದ ದೃಶ್ಯ ನ್ಯೂಸ್ 18ಗೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲುವಂತೆ ಬೇಡಿಕೊಂಡಿದ್ದ ಡಿಕೆಶಿ ಇಷ್ಟಾರ್ಥವನ್ನು ದೇವಿ ಈಡೇರಿಸಿದ್ದಾಳೆ ಎಂದು ದೇವಸ್ಥಾನದ ಧರ್ಮದರ್ಶಿ ಗಾದೆಪ್ಪ ತಿಳಿಸುತ್ತಾರೆ.ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಬಳ್ಳಾರಿಗೆ ಮೊದಲ ಬಾರಿಗೆ ಆಗಮಿಸಿದ್ದಾಗಲೂ ಸಚಿವ ಡಿಕೆ ಶಿವಕುಮಾರ್ ಕೋಟೆ ಮಲ್ಲೇಶ್ವರ ಹಾಗೂ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿಯೇ ಮುಂದೆ ಬೇರೆಡೆ ತೆರಳಿದ್ದರು. ಈ ಹಿಂದೆ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಉಸ್ತುವಾರಿ ಕೊಟ್ಟಾಗಲೂ ಗೆಲ್ಲಲು ಇದೇ 'ಶಿವ-ದೇವಿ'ಯೇ ಕೃಪಾರ್ಶಿವಾದ ಕಾರಣ. ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬ ಆರಾಧಿಸುವ ಬಳ್ಳಾರಿಯ ದುರ್ಗಮ್ಮ ದೇವಿಯ ಜೊತೆ ಕೋಟೆ ಮಲ್ಲೇಶನ ಪೂಜಿಸುವ ಮೂಲಕ ಡಿಕೆಶಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ :  ಬಳ್ಳಾರಿ ಕೈ ಬಂಡಾಯ ಬಹಿರಂಗವಾಯ್ತು; ಸಚಿವ ಸ್ಥಾನಕ್ಕೆ ದೆಹಲಿಗೆ ದೌಡಾಯಿಸಿದ ಸಚಿವಾಕಾಂಕ್ಷಿಗಳು! 

 

 
First published: November 20, 2018, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading