ಮೈತ್ರಿ ಧರ್ಮ ಪಾಲನೆ ನಮ್ಮ ಕರ್ತವ್ಯ; ಮೈತ್ರಿ ಸರಕಾರಕ್ಕೆ ಧಕ್ಕೆ ಇಲ್ಲ: ಡಿಕೆಶಿ

ಐದು ವರ್ಷ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನಮ್ಮ ಅಚಲವಾದ ಬೆಂಬಲವಿದೆ. ಈ ಕುರಿತು ಸಿದ್ದರಾಮಯ್ಯ ಪತ್ರ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಆಜ್ಞೆಯ ಮೇರೆಗೆ ಕೋರ್ಟ್‌ಗೆ ಅಫಿಡವಿಟ್ ಕೊಟ್ಡಿದ್ದೇವೆ. ಮೈತ್ರಿ ಧರ್ಮ ಪಾಲನೆ ಆಗಬೇಕು. ನಮ್ಮ ಪಕ್ಷ ಯಾರ ಬೆಂಬಲವಿಲ್ಲದೆ ಅಧಿಕಾರಕ್ಕೆ ಬರುವ ಹಾಗೆ ಮಾಡೋಣ ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.

G Hareeshkumar | news18
Updated:May 8, 2019, 7:56 PM IST
ಮೈತ್ರಿ ಧರ್ಮ ಪಾಲನೆ ನಮ್ಮ ಕರ್ತವ್ಯ; ಮೈತ್ರಿ ಸರಕಾರಕ್ಕೆ ಧಕ್ಕೆ ಇಲ್ಲ: ಡಿಕೆಶಿ
ಸಚಿವ ಡಿಕೆ ಶಿವಕುಮಾರ್
  • News18
  • Last Updated: May 8, 2019, 7:56 PM IST
  • Share this:
ಬೆಳಗಾವಿ(ಮೇ.08): ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಕುಮಾರಸ್ವಾಮಿ ನೇತೃತ್ವದ ಸರಕಾರ ತನ್ನ 5 ವರ್ಷದ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು. "ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಐದು ವರ್ಷ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನಮ್ಮ ಅಚಲವಾದ ಬೆಂಬಲವಿದೆ. ಈ ಕುರಿತು ಸಿದ್ದರಾಮಯ್ಯ ಪತ್ರ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಆಜ್ಞೆಯ ಮೇರೆಗೆ ಕೋರ್ಟ್‌ಗೆ ಅಫಿಡವಿಟ್ ಕೊಟ್ಡಿದ್ದೇವೆ. ಮೈತ್ರಿ ಧರ್ಮ ಪಾಲನೆ ಆಗಬೇಕು. ನಮ್ಮ ಪಕ್ಷ ಯಾರ ಬೆಂಬಲವಿಲ್ಲದೆ ಅಧಿಕಾರಕ್ಕೆ ಬರುವ ಹಾಗೆ ಮಾಡೋಣ" ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.

ಕುಂದಗೋಳದ ಮಾಜಿ ಶಾಸಕ ದಿವಂಗತ ಸಿಎಸ್ ಶಿವಳ್ಳಿ ಅವರ ಸಾವಿನ ಬಗ್ಗೆ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ. ಕಾರ್ಯಕ್ರಮದ ಒತ್ತಡದಿಂದ, ಆರೋಗ್ಯದ ಬಗ್ಗೆ ಅಲಕ್ಷ ಮಾಡಿ ಶಿವಳ್ಳಿ ಸತ್ತಿದ್ದಾರೆ. ಇವೆಲ್ಲ ಸಾಕು, ಇಂತಹ ಮಾತುಗಳನ್ನು ಮಾತಾಡಿ ರಾಜಕಾರಣಿಯ ಗೌರವ ಕಳೆದುಕೊಳ್ಳುವುದು ಸರಿಯಲ್ಲ ಎಂದು ಸಚಿವ ಡಿಕೆ ಶಿವಕುಮಾರ್​​ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಕುಂದಗೋಳದಲ್ಲಿ ಗೆಲ್ಲಲು ನಮಗೆ ಕಾರ್ಯಕರ್ತರೇ ಸಾಕು. ಇಲ್ಲಿ ಇನ್ನೂ ಕೆಲವು ಕೆಲಸ ಬಾಕಿ ಇದೆ. ಇಲ್ಲಿ ಒಳ್ಳೆ ಜನರಿದ್ದಾರೆ. ಎಷ್ಟೋ ಕ್ಷೇತ್ರ ನೋಡಿದ್ದೀನಿ. ಇಲ್ಲಿನ ಕಾರ್ಯಕರ್ತರು,‌ ಮತದಾರರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದವಾಗಿತ್ತಾ ಎಂಬ ಪ್ರಶ್ನೆಗೆ ಡಿಕೆಶಿ ಅವರು, "ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಚುನಾವಣೆಯಾಗಿತ್ತು. ನನ್ನದೊಂದು ಕ್ಷೇತ್ರದಲ್ಲಿ ಮಾತ್ರ ನಾನು ಗೆದ್ದಿದೀನಿ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ಒಪ್ಪಂದವಾಗಿತ್ತಾ ಅಂತಾ ನನಗೆ ಗೊತ್ತಾಗಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಮುಂದಿನ ಚುನಾವಣೆ ಯಾರ ನೇತ್ರತ್ವದಲ್ಲಿ ಮಾಡುತ್ತೀರಿ ಅನ್ನುವುದಕ್ಕೆ ಉತ್ತರ ಕೊಡದೇ ಸುಮ್ಮನಾದ ಡಿಕೆಶಿ. ಈಗ ಕುಂದಗೋಳ ಕ್ಷೇತ್ರಕ್ಕೆ ಮಾತ್ರ ಕಾರ್ಯಕರ್ತನಾಗಿ ಬಂದಿದ್ದೇನೆ ಎಂದು ಮೌನಕ್ಕೆ ಶರಣಾದರು.

ಮುಂದಿನ ಅವಧಿಗೆ  ಸಿದ್ದರಾಮಯ್ಯ ಸಿಎಂ ರೇಸ್​​ ನಲ್ಲಿ: ಸತೀಶ್ ಜಾರಕಿಹೊಳಿ

ಬಿಜೆಪಿ ನಾಯಕರಿಗೆ ಮಾತನಾಡೋಕೆ ಇತಿ, ಮಿತಿ ಇಲ್ಲದಂತಾಗಿದೆ. ಸಾವಿನಲ್ಲಿ ರಾಜಕೀಯ ಮಾಡ್ತಾರೆ. ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡುತ್ತಾರೆ. ಇವುಗಳನ್ನು ಬಿಟ್ಟು ಬೇರೆ ಯಾವುದೇ ವಿಷಯ ಇಲ್ಲ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆಗೆ ಸಚಿವ ಸತೀಶ್​​ ಜಾರಕಿಹೊಳಿ ತಿರುಗೇಟು ನೀಡಿದರು.ಇದನ್ನೂ ಓದಿ :  ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಇಲ್ಲ: ಹೆಚ್.ವಿಶ್ವನಾಥ್

ಮುಂದಿನ ಅವಧಿಗೆ  ಸಿದ್ದರಾಮಯ್ಯ ಸಿಎಂ ರೇಸ್​ನಲ್ಲಿ ಇದ್ದಾರೆ. 2014 ರಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ. ರಾಜ್ಯದಲ್ಲಿ ಜೆಡಿಎಸ್ , ಕಾಂಗ್ರೆಸ್ ಐದು ವರ್ಷ ಪೂರೈಸಲಿದ್ದು, ಪಕ್ಷದಲ್ಲಿ ವೈಯಕ್ತಿಕ ವಿಚಾರವನ್ನು ನಾನು ಈಗ ಮಾತನಾಡಲ್ಲ. ಪಕ್ಷದ ಪರ ನಾನು ಮತ್ತು ಡಿಕೆಶಿ ಇಬ್ಬರೂ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ