‘ಬಿಜೆಪಿ ದೂಷಿಸುವುದು ಕೆಲವರಿಗೆ ಫ್ಯಾಷನ್​‘: ಎಚ್​​ಡಿಕೆ ಕೊಲೆ ಬೆದರಿಕೆ ಆರೋಪಕ್ಕೆ ಸಿ.ಟಿ ರವಿ ತಿರುಗೇಟು

ಎರಡು ದಿನಗಳ ಹಿಂದೆ ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವು ಪ್ರಗತಿಪರರಿಗೆ ಕೊಲೆ ಬೆದರಿಕೆ ಬಂದಿತ್ತು. ನಿಮ್ಮನ್ನು ಈ ತಿಂಗಳೊಳಗೆ 29ನೇ ತಾರೀಕಿನಂದು ಸಂಹಾರ ಮಾಡುತ್ತೇವೆ ಎಂದು ದಾವಣೆಗೆರೆಯಿಂದ ಅಪರಿಚಿತ ವ್ಯಕ್ತಿಯೋರ್ವ ನಿಜಗುಣಾನಂದ ಸ್ವಾಮೀಜಿ ಬೇಲೂರು ಮಠಕ್ಕೆ ಕೊಲೆ ಬೆದರಿಕೆ ಪತ್ರ ರವಾನಿಸಿದ್ದ.

news18-kannada
Updated:January 26, 2020, 7:07 PM IST
‘ಬಿಜೆಪಿ ದೂಷಿಸುವುದು ಕೆಲವರಿಗೆ ಫ್ಯಾಷನ್​‘: ಎಚ್​​ಡಿಕೆ ಕೊಲೆ ಬೆದರಿಕೆ ಆರೋಪಕ್ಕೆ ಸಿ.ಟಿ ರವಿ ತಿರುಗೇಟು
ಸಚಿವ ಸಿ ಟಿ ರವಿ
  • Share this:
ಚಿಕ್ಕಮಗಳೂರು(ಜ.26): "ಇತ್ತೀಚೆಗೆ ಸಂಘ ಪರಿವಾರದ ಮೇಲೆ ಆರೋಪ ಎಸಗುವುದು ಕೆಲವರಿಗೆ ಫ್ಯಾಷನ್​​ ಆಗಿಬಿಟ್ಟಿದೆ. ಯಾರು ಬೆದರಿಕೆ ಹಾಕಿದ್ದಾರೆ ಎಂದು ನಿರ್ದಿಷ್ಟವಾಗಿ ಹೆಸರು ಹೇಳಬೇಕೆ ಹೊರತು ಸುಖಾಸುಮ್ಮನೇ ಸಂಘಪರಿವಾರ ಮೇಲೆ ಸುಳ್ಳು ಆರೋಪ ಮಾಡಬಾರದು" ಎಂದು ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿಗೆ ಸಚಿವ ಸಿ.ಟಿ ರವಿ ತಪರಾಕಿ ಬಾರಿಸಿದ್ಧಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಸಿ.ಟಿ ರವಿ, ಮಾಜಿ ಸಿಎಂ ಕುಮಾರಸ್ವಾಮಿಗೆ ಬಂದ ಕೊಲೆ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿದರು.ಜನರ ಮಧ್ಯೆಯೇ ಇರಬೇಕೆಂದರೆ ತುಂಬಾ ಒಳ್ಳೆಯ ವಿಚಾರಗಳಿವೆ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವೇ ಮೂಲಕವೇ ನಿರಂತರ ಸಂಪರ್ಕದಲ್ಲಿ ಇರಬಹುದು. ಇದರ ಹೊರತು ಸುಳ್ಳು ಆರೋಪ ಮಾಡುವ ಮುಖಾಂತರವೇ ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದರೆ ಮಾಜಿ ಸಿಎಂ ಕುಮಾರಸ್ವಾಮಿಗೆ ಬಿಟ್ಟ ವಿಚಾರ ಎಂದು ತಿರುಗೇಟು ನೀಡಿದರು.

ಎರಡು ದಿನಗಳ ಹಿಂದೆ ಬೆಳಗಾವಿಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಹಲವು ಪ್ರಗತಿಪರರಿಗೆ ಕೊಲೆ ಬೆದರಿಕೆ ಬಂದಿತ್ತು. "ನಿಮ್ಮನ್ನು ಈ ತಿಂಗಳೊಳಗೆ 29ನೇ ತಾರೀಕಿನಂದು ಸಂಹಾರ ಮಾಡುತ್ತೇವೆ" ಎಂದು ದಾವಣೆಗೆರೆಯಿಂದ ಅಪರಿಚಿತ ವ್ಯಕ್ತಿಯೋರ್ವ ನಿಜಗುಣಾನಂದ ಸ್ವಾಮೀಜಿ ಬೇಲೂರು ಮಠಕ್ಕೆ ಕೊಲೆ ಬೆದರಿಕೆ ಪತ್ರ ರವಾನಿಸಿದ್ದ.

ಇದನ್ನೂ ಓದಿ: ಎಚ್​​ಡಿಕೆ, ಪ್ರಕಾಶ್​​​ ರಾಜ್​​​, ನಿಜಗುಣಾನಂದ ಸ್ವಾಮಿ ಸೇರಿದಂತೆ 15 ಮಂದಿಗೆ ಕೊಲೆ ಬೆದರಿಕೆ

ನಿಜಗುಣಾನಂದ ಸ್ವಾಮೀಜಿ ಜೊತೆಗೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಮತ್ತು ನಟ ಪ್ರಕಾಶ್​​ ರಾಜ್​​ ಸೇರಿದಂತೆ ಹಲವರನ್ನು ಸಂಹಾರ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ಇವರ ಜತೆಗೆ ಬಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ್‌, ನಿಡುಮಾಮಿಡಿ ಶ್ರೀ ಮಠದ ವೀರಭದ್ರ ಸ್ವಾಮೀಜಿ, ನಟ ಚೇತನ್​​ ಕುಮಾರ್​​, ಬಿ.ಟಿ ಲಲಿತಾ ನಾಯಕ್​​, ಮಹೇಶ್​​ ಚಂದ್ರಗುರು, ಪ್ರೊ. ಭಗವಾನ್‌, ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್​​ ಅಮಿನ್‌ ಮಟ್ಟು, ಪತ್ರಕರ್ತ ಅಗ್ನಿ ಶ್ರೀಧರ್‌, ಬೃಂದಾ ಕಾರಟ್‌ ಸೇರಿದಂತೆ 15 ಜನರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.

ಇದನ್ನೂ ಓದಿ: ಬಿಜೆಪಿಗರ ಜೀನ್​ ಪಾಕಿಸ್ತಾನದಲ್ಲಿರಬಹುದು, ನನ್ನ ಜೀನ್ ಈ ಮಣ್ಣಿನಲ್ಲಿದೆ; ಕೊಲೆ ಬೆದರಿಕೆ ಬಗ್ಗೆ ಎಚ್​ಡಿಕೆ

ಕೊಲೆ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್​ನಲ್ಲಿ ಬಿಜೆಪಿ ಮತ್ತು ಬಲಂಪಂಥೀಯ ಚಿಂತಕರ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದರು. “ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ. ನಿಮ್ಮ ಜೀನ್​​ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ಆದರೆ, ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು” ಎಂದು ಕಿಡಿಕಾರಿದ್ದರು.
First published: January 26, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading