‘ಕೊಲಂಬೋಗೆ ಹೋದರೆ ಹೇಗೆ ಶಾಂತಿ ಸಿಗಲಿದೆ ಎನ್ನುವುದು ಮಾತ್ರ ಜಮೀರ್​ ಹೇಳಬೇಕು‘ - ಸಚಿವ ಸಿಟಿ ರವಿ ವ್ಯಂಗ್ಯ

ಇನ್ನು, ಫಾಜಿಲ್​​ ಜತೆ ಜಮೀರ್​​ ತೆಗೆಸಿಕೊಂಡಿರುವ ಫೋಟೋ ಸಂಬಂಧ ಮಾತಾಡಿದ ಸಿಟಿ ರವಿ, ಇದು ಜನ್ಮ ಜನ್ಮಾಂತರ ಸಂಬಂಧದ ಫೋಟೋ ಇದ್ದಂತಿದೆ. ಯಾರದ್ದೋ ಜತೆ ಸುಮ್ಮನೆ ಫೋಟೋ ತೆಗೆಸಿಕೊಂಡ ಆಗಿಲ್ಲ. ಇದರ ಬಗ್ಗೆಯೂ ಕಾಂಗ್ರೆಸ್​ ಶಾಸಕ ಜಮೀರ್​ ಅವರೇ ಸ್ಪಷ್ಟನೆ ನೀಡಬೇಕೆಂದರು ಸಿಟಿ ರವಿ.

news18-kannada
Updated:September 14, 2020, 6:12 PM IST
‘ಕೊಲಂಬೋಗೆ ಹೋದರೆ ಹೇಗೆ ಶಾಂತಿ ಸಿಗಲಿದೆ ಎನ್ನುವುದು ಮಾತ್ರ ಜಮೀರ್​ ಹೇಳಬೇಕು‘ - ಸಚಿವ ಸಿಟಿ ರವಿ ವ್ಯಂಗ್ಯ
ಸಚಿವ ಸಿ.ಟಿ. ರವಿ
  • Share this:
ಬೆಂಗಳೂರು(ಸೆ.14): ಮಾಜಿ ಸಚಿವ ಜಮೀರ್​ ಅಹಮ್ಮದ್​​​​ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ವಾಗ್ಧಾಳಿ ನಡೆಸಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಟಿ ರವಿ, ಶಾಸಕ ಜಮೀರ್ ಅಹಮ್ಮದ್ ಅವರ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂದು ಗೊತ್ತಿದೆ. ಸುಳ್ಳೇ ಅವರ ಮನೆ ದೇವರು. ಬಿ.ಎಸ್​​ ಯಡಿಯೂರಪ್ಪ ಮುಖ್ಯಮಂತ್ರಿಯಾದರೇ ಅವರ ಮನೆ ಮುಂದೆ ವಾಚ್​ಮ್ಯಾನ್​​​ ಕೆಲಸ ಮಾಡ್ತೀನಿ ಅಂದಿದ್ರು. ಬಳಿಕ ವಾಚ್​​ಮ್ಯಾನ್​ ಕೆಲಸ ಖಾಲಿ ಇದೆ ಎಂದು ಗೊತ್ತಾದ ಕೂಡಲೇ ಜಮೀರ್​ ನಾಪತ್ತೆಯಾದರು ಎಂದು ವ್ಯಂಗ್ಯವಾಡಿದ್ದಾರೆ. ಈ ವಾಚ್​ಮ್ಯಾನ್​ ಕೆಲಸ ಯಾವಾಗ ಮಾಡ್ತೀನಿ ಎಂದು ಜನ ಕೇಳುತ್ತಿದ್ದಾರೆ. ಹೀಗಿರುವಾಗಲೇ ನಾನು ಸಂಜನಾ ಜತೆ ಕೊಲಂಬೋಗೆ ಹೋಗಿದ್ದು ಸಾಬೀತಾದ್ರೆ ನಿಮ್ಮ ಆಸ್ತಿ ಸರ್ಕಾರಕ್ಕೆ ಬರೆದು ಕೊಡ್ತೀನಿ ಎಂದು ಹೇಳಿದ್ದೀರಿ. ಇದು ಹಾಗೇ ಇರಲಿ, ಮೊದಲು ನಿಮ್ಮ ಆಸ್ತಿ ಹೇಗೆ ಬಂದು ಎಂದೇಳಿ ಎಂದು ಜಮೀರ್​ ಅಹಮ್ಮದ್​​ಗೆ ಸಿಟಿ ರವಿ ಪ್ರಶ್ನಿಸಿದ್ದಾರೆ.

ಶ್ರೀಲಂಕಾದ ಕೊಲೊಂಬೋದಲ್ಲಿ ಜಮೀರ್ ಅವರಿಗೆ  ತಪಸ್ಸು ಮಾಡುವುದಕ್ಕೆ ಜಾಗ ಇರಬಹುದೇನೋ. ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಜಮೀರ್​​​ ಅವರಿಗೆ ಕೊಲಂಬೋದಲ್ಲಿ ಶಾಂತಿ ಸಿಗಬಹುದು. ಹೇಗೆ ಶಾಂತಿ ಸಿಗಲಿದೆ ಎಂದು ಜಮೀರ್​​ ಅವರೇ ಸ್ಪಷ್ಟಪಡಿಸಬೇಕು ಎಂದು ಸಿಟಿ ರವಿ ಆಗ್ರಹಿಸಿದರು.

ಜಮೀರ್ ಅವರ ಪಾಸ್​ಪೋರ್ಟ್ ಪರಿಶೀಲಿಸಬೇಕು. ಯಾಕೆ ನಾನು ಅಲ್ಲಿಗೆ ಹೋಗಿದ್ದೆ? ಎಷ್ಟು ಬಾರಿ ಹೋಗಿದ್ದೆ? ಯಾಕಾಗಿ ಹೋಗಿದ್ದೆ ಎಂಬುದನ್ನು ಜಮೀರ್​ ಅವರೇ ಹೇಳಬೇಕು. ಏನು ಹೇಳದೆ ಹಾಗೆಯೇ ಮುಚ್ಚಿಟ್ಟರೇ ಸಂಶಯದ ಸುಲಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಜಮೀರ್​​ಗೆ ಎಚ್ಚರಿಕೆ ನೀಡಿದರು.

ಇನ್ನು, ಫಾಜಿಲ್​​ ಜತೆ ಜಮೀರ್​​ ತೆಗೆಸಿಕೊಂಡಿರುವ ಫೋಟೋ ಸಂಬಂಧ ಮಾತಾಡಿದ ಸಿಟಿ ರವಿ, ಇದು ಜನ್ಮ ಜನ್ಮಾಂತರ ಸಂಬಂಧದ ಫೋಟೋ ಇದ್ದಂತಿದೆ. ಯಾರದ್ದೋ ಜತೆ ಸುಮ್ಮನೆ ಫೋಟೋ ತೆಗೆಸಿಕೊಂಡ ಆಗಿಲ್ಲ. ಇದರ ಬಗ್ಗೆಯೂ ಕಾಂಗ್ರೆಸ್​ ಶಾಸಕ ಜಮೀರ್​ ಅವರೇ ಸ್ಪಷ್ಟನೆ ನೀಡಬೇಕೆಂದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​​: ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿಗೆ - ಕೋರ್ಟ್ ಆದೇಶ

ಫಾಸಿಲ್​ ಜತೆ ಸಿದ್ದರಾಮಯ್ಯ ಮತ್ತು ಜಮೀರ್​​ ಫೋಟೋ ತೆಗೆಸಿಕೊಂಡಿದ್ದಾರೆ. ಇದ್ಯಾವುದೋ ಮನೆ ಕಾರ್ಯಕ್ರಮದ ರೀತಿ ಇಲ್ಲ. ಬದಲಿಗೆ ಈ ಫೋಟೋ ಬೇರೆ ಏನೋ ಹೇಳುತ್ತಿದೆ. ಇವರದ್ದು ಬಹಳ ಆತ್ಮೀಯ ಸಂಬಂಧ ಎಂದು ಫೋಟೋದಲ್ಲಿ ನೋಡಿದರೆ ಗೊತ್ತಾಗುತ್ತಿದೆ. ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳ್ಳ ಯಾವತ್ತಿದ್ದರೂ ಸಿಗಲೇಬೇಕು ಎಂದರು.
Published by: Ganesh Nachikethu
First published: September 14, 2020, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading