ಚಿಕ್ಕಮಗಳೂರು(ಡಿ.05): ಸಿದ್ದರಾಮಯ್ಯ (Siddaramaiah) ಅವರಿಗೆ ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್ನವರಿಗೆ (Congress) ಉರಿ ಹತ್ತಿಕೊಂಡಿದೆ. ಹೀಗೆ ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ 10ವರ್ಷದ ಮೊದಲೇ ಹೇಳುತ್ತಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi)ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ನೀವು ಪ್ರಧಾನಿಯನ್ನು ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿದ್ದೀರಿ ಎಂದು ತಿರುಗೇಟು ನೀಡಿದರು.
ಸಿದ್ರಾಮುಲ್ಲಾಖಾನ್ ಎನ್ನುವುದು ಬೈಗುಳವೇ ಎಂದು ಪ್ರಶ್ನಿಸಿದ ಅವರು, ಅದು ಬೈಗುಳ ಅಲ್ಲ ನಿಮ್ಮಗೆ ಉರಿ ಹತ್ತಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಬಹುದಿತ್ತು. ಆದರೆ, ಮಾಡಲಿಲ್ಲ ಹೀಗೆ ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ ಅಂದೇ ಕರೆಯುತ್ತಿದ್ದೆ ಎಂದರು.
ಇದನ್ನೂ ಓದಿ: Actor Chetan: ಟೀಂ ಇಂಡಿಯಾದಲ್ಲೂ ಎಸ್ಸಿ-ಎಸ್ಟಿಗೆ ಮೀಸಲಾತಿ ಕೊಡಿ! ಆ ದಿನಗಳ ನಟ ಚೇತನ್ ಆಗ್ರಹ
ಸಿದ್ರಾಮುಲ್ಲಾಖಾನ್ ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದಿತ್ತು. ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂದ್ರು, ಸಿದ್ಧರಾಮಯ್ಯ ಅವರನ್ನು ಹುಲಿಯಾ ಅಂದ್ರು, ಹಾಗೇ ಇದು ಬಿರುದು ಎಂದ ಅವರು ಸಿದ್ದರಾಮಯ್ಯ ಹಿಂದೂಗಳಿಗೆ ಅನ್ಯಾಯ ಮಾಡಿದ್ದು, ಟಿಪ್ಪು ಜಯಂತಿ ಪರ ಇದ್ದದ್ದು, ಇದಕ್ಕೆ ಕೊಟ್ಟ ಬಿರುದು ಎಂದು ಭಾವಿಸುತ್ತಾರೆ ಎಂದು ತಿಳಿದಿದ್ದೆ ಎಂದರು.
ಬೆದರಿಕೆ ಹಾಕ್ತಾರಾ, ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯೋಲ್ಲ - ಸಿ.ಟಿ.ರವಿ
ಸಿದ್ರಾಮುಲ್ಲಾಖಾನ್ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರೋ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಸಿ.ಟಿ.ರವಿ ಇದನ್ನ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂದಿದ್ದರು. ಹೇಳಿಕೆಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಅವರೇನು ಬೆದರಿಕೆ ಹಾಕ್ತಾರಾ. ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೇಗಾರ ಮನೆತನದವನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ಒಂದು ವೋಟು. ಈ ಪಾಳೇಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ.
ಅಲ್ಲದೇ ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. ನಿಮ್ಮೂರಿಗೆ ಬರ್ತೀನಿ. ನಾನು ಏನೂ ಹೇಳಬೇಕು ಅಂದುಕೊಂಡಿದ್ದೇನೋ ಅದನ್ನ ನಿಮ್ಮೂರಿನಲ್ಲೇ ಹೇಳ್ತೀನಿ. ನಿಮ್ಮ ಮುಖದ ಎದುರೇ ಹೇಳ್ತೀನಿ. ನಿಮ್ಮಷ್ಟು ಶ್ರೀಮಂತಿಕೆ ನನ್ನ ಬಳಿ ಇಲ್ಲ ಅಂತ ನನಗೆ ಗೊತ್ತು. ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನ ಜನರ ಮೇಲೆ ತೋರಿಸಬೇಡಿ. ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯಲ್ಲ ಎಂದಿದ್ದಾರೆ. ಕರ್ನಾಟಕ ಯಾರ ಅಪ್ಪನ ಸ್ವತ್ತು ಅಲ್ಲ. ಯಾರಾದರೂ ಫಾದರ್ ಮನೆ ಪ್ರಾಪರ್ಟಿ ಅಂತ ಅನ್ಕೊಂಡಿದ್ರೆ, ಯಾರ ಫಾದರ್ ಮನೆ ಪ್ರಾಪರ್ಟಿಯೂ ಅಲ್ಲ ಅಂತ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ.
ಪಿಎಫ್ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನರು ಇನ್ನೂ ಇದ್ದಾರೆ - ಸಿ.ಟಿ.ರವಿ
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಜಾಯ್ನ್ ಸಿ.ಎಫ್.ಐ. ಎಂಬ ಬರಹಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪಿ.ಎಫ್.ಐ, ಸಿ.ಎಫ್.ಐ ಬ್ಯಾನ್ ಆಗಿದ್ದರೂ ಕೂಡ ಆ ಮನಸ್ಥಿತಿಯ ಜನ ಇನ್ನೂ ಇದ್ದಾರೆ. ಇದು ಇಂದು-ನಿನ್ನೆಯದ್ದಲ್ಲ. ಏಳನೇ ಶತಮಾನದಿಂದಲೂ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂಬ ಮನೋಭಾವದವರು ಹೀಗೆ ಮಾಡುತ್ತಾರೆ. ಇದು ಗಜಾವಹಿಂದ್ ಹೆಸರಲ್ಲಿ 7ನೇ ಶತಮಾನದಲ್ಲಿ ಶುರುವಾದದ್ದು ಎಂದರು. ಆ ಮನಸ್ಥಿತಿಯ ಜನ ಇದ್ದಾರೆ ಎಂಬ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈಹಾಕಿದ್ದು. ಆ ಮನಸ್ಥಿತಿಯ ಜನ ಇರುವವರೆಗೂ ಈ ರೀತಿ ಮಾಡುತ್ತಲೇ ಇರುತ್ತಾರೆ. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದರೂ ಅವರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತಹಾಕಿದರೆ ಅವರು ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ