ಬಿಜೆಪಿಗೆ ಡಿಕೆ ಶಿವಕುಮಾರ್​ ಸೆಳೆಯಲು ರೇಣುಕಾಚಾರ್ಯ ಯತ್ನ; ಸಚಿವ ಸಿಟಿ ರವಿ

ಈ ಕುರಿತು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್​ ಬಿಜೆಪಿಗೆ ಸೇರುವಂತೆ ಮನವೊಲಿಸಲು ರೇಣುಕಾಚಾರ್ಯ ಭೇಟಿಯಾಗಿದ್ದಾರೆ ಎಂದರು. 

Seema.R | news18-kannada
Updated:February 13, 2020, 2:44 PM IST
ಬಿಜೆಪಿಗೆ ಡಿಕೆ ಶಿವಕುಮಾರ್​ ಸೆಳೆಯಲು ರೇಣುಕಾಚಾರ್ಯ ಯತ್ನ; ಸಚಿವ ಸಿಟಿ ರವಿ
ಸಿ.ಟಿ. ರವಿ
  • Share this:
ಬೆಂಗಳೂರು (ಫೆ.13): ಈಗಾಗಲೇ ಹಲವು ಕಾಂಗ್ರೆಸ್​ ನಾಯಕರು ಬಿಜೆಪಿ ಸೇರಿದ್ದಾರೆ. ಇದೇ ನಿಟ್ಟಿನಲ್ಲಿ  ಕನಕಪುರ ಶಾಸಕ, ಕಾಂಗ್ರೆಸ್​ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್​ ಅವರನ್ನು ಕೂಡ ಬಿಜೆಪಿಗೆ ಸೆಳೆಯಲು ರೇಣುಕಾಚಾರ್ಯ ಮುಂದಾಗಿದ್ದಾರೆ. ಇದೇ ವಿಚಾರವಾಗಿ ಅವರು ಡಿಕೆ ಶಿವಕುಮಾರ್​ ಅವರನ್ನು ಭೇಟಿಯಾಗಿದ್ದಾರೆ ಎಂದು ಸಚಿವ ಸಿಟಿ ರವಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಬುಧವರಾ ಡಿಕೆ ಶಿವಕುಮಾರ್​ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂಪಿ ರೇಣುಕಾಚಾರ್ಯ ಭೇಟಿಯಾಗಿದ್ದರು. ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ವಿಧಾನಪರಿಷತ್​ ಚುನಾವಣೆಗೂ ಮುನ್ನ ಆಡಳಿತ-ವಿಪಕ್ಷ ನಾಯಕರ ಭೇಟಿ ಬಗ್ಗೆ ಹಲವು ಅಂತೆ ಕಂತೆ ಕೂಡ ಕೇಳಿಬಂದಿತ್ತು. ಅಲ್ಲದೇ ಈ ಕುರಿತು ಮಾತನಾಡಿದ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಆಹ್ವಾನಿಸಲು ಡಿಕೆಶಿ ಭೇಟಿ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದರು.

 

ಈ ಕುರಿತು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್​ ಬಿಜೆಪಿಗೆ ಸೇರುವಂತೆ ಮನವೊಲಿಸಲು ರೇಣುಕಾಚಾರ್ಯ ಭೇಟಿಯಾಗಿದ್ದಾರೆ ಎಂದರು.

ಇದನ್ನು ಓದಿ: ಡಿಕೆ ಶಿವಕುಮಾರ್​ ಭೇಟಿ ಮಾಡಿದ ರೇಣುಕಾಚಾರ್ಯ; ಕುತೂಹಲ ಮೂಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ನಡೆ

 

ಇದೇ ವೇಳೆ ಸೋತವರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸೋತವರಿಗೆ ಮಂತ್ರಿಗಿರಿ ನೀಡುವ ವಿಚಾರ ಸಿಎಂಗೆ ಬಿಟ್ಟದ್ದು. ಸೋತವರಿಗೆ ಅರ್ಹತೆ ಇಲ್ಲ ಎನ್ನುವಂತಿಲ್ಲ. ಮಂತ್ರಿಸ್ಥಾನ ನೀಡುವುದಕ್ಕೆ ನನ್ನ ವಿರೋಧವಿಲ್ಲ ಎಂದರು.(ವರದಿ: ಆದೂರು ಚಂದ್ರು)
First published: February 13, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading